ಪಾಠ ಮಾಡೋ ಮೇಷ್ಟ್ರೇ ದಾರಿ ತಪ್ಪಿದ್ರೆ ಹೇಗೆ…? ಮೈಸೂರಿನಲ್ಲೊಬ್ಬ ಪ್ರಾಧ್ಯಾಪಕ ಕುಡಿದ ಅಮಲಿನಲ್ಲಿ ಹುಚ್ಚಾಟ ಆಡಿದ್ದಾರೆ.
ಕಂಠ ಪೂರ್ತಿ ಕುಡಿದ ಆತ ಮೊಬೈಲ್ ಟವರ್ ಏರಿ ಕುಳಿತಿದ್ದಾರೆ.
ಈತನ ಹೆಸರು ರಮೇಶ್ ಕುಮಾರ್. ಹಿನಕಲ್ ನಿವಾಸಿ. ಪಿಎಚ್ ಡಿ ಮಾಡಿದ್ದಾರೆ. ಕೆಲವು ಕಾಲೇಜುಗಳಲ್ಲಿ ಪಾಠ ಮಾಡ್ತಿದ್ದಾರೆ.
ಕುಡಿದ ಅಮಲಿನಲ್ಲಿ ಹಿನಕಲ್ ಟೆಂಟ್ ಬಳಿ ಟವರ್ ಏರಿ ಕುಳಿತಿದ್ದಾರೆ. ಈ ಹಿಂದೆಯೂ ಒಮ್ಮೆ ಹೀಗೆ ಮಾಡಿದ್ದರಂತೆ. ಇದು ಎರಡನೇ ಬಾರಿ…! ಈ ಪ್ರಾಧ್ಯಾಪಕನ ಕಾಟಕ್ಕೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಹೈರಾಣಾಗಿದ್ದಾರೆ.