ಯುವಕ ವಿದ್ವತ್ ಮೇಲಿನ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ತನಗೆ ಜಾಮೀನು ಸಿಗಲಿಲ್ಲ ಎಂದು ಪೋಷಕರ ಮೇಲೆ ಕೂಗಾಡಿದ್ದಾನೆ ಎನ್ನಲಾಗಿದೆ.

ನಲಪಾಡ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆಯಾದ ಹಿನ್ನಲೆಯಲ್ಲಿ ಜೈಲಿನಿಂದ ಪೋಷಕರಿಗೆ ಕರೆ ಮಾಡಿ ರಂಪಾಟ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.

ಪೋಷಕರ ಮೇಲೆ ಕಿರುಚಾಡಿ ಜಾಮೀನು ಕೊಡಿಸುವಂತೆ ಹಠ ಮಾಡಿದ್ದಾನೆ. ಇವನ ಕಿರುಚಾಟ, ಅರಚಾಟ ಕಂಡು ಜೈಲಿನಲ್ಲಿನ ಇತರ ಕೈದಿಗಳು ಗಾಬರಿಗೊಂಡಿದ್ದಾರೆ ಎಂದು ವರದಿಯಾಗಿದೆ.







