ವಿದ್ಯಾರ್ಥಿ ‘ನಮನ’ ಮಾಡಿದ ಮನವಿಗೆ ಪ್ರಧಾನಿ ಕಚೇರಿ ಸ್ಪಂದನೆ..!

Date:

ತನ್ನ ಗ್ರಾಮದಲ್ಲಿ ಮೂಲ ಅಗತ್ಯತೆಗಳನ್ನು ಪೂರೈಕೆ ಮಾಡಲು ಆಗದ ಜನಪ್ರತಿನಿಧಿಗಳಿಗೆ ಇಲ್ಲೋರ್ವ ಧೈರ್ಯ ಶಾಲಿ ಬಾಲಕಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವುದರ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದಾಳೆ. ಚುನಾವಣೆಯ ವೇಳೆ ಮತಯಾಚನೆಗೆ ಗೊತ್ತು ಗುರಿ ಇಲ್ಲದ ಊರನ್ನೆಲ್ಲಾ ಹುಡುಕಿಕೊಂಡು ಬರುವ ಜನಪ್ರತಿನಿಧಿಗಳು ಗೆದ್ದ ನಂತರ ಈ ಕಡೆ ಮುಖ ಮಾಡಿಯೇ ನೋಡುವುದಿಲ್ಲ. ಹೀಗಾಗಿ ಈ ದಿಟ್ಟ ಬಾಲಕಿ ನೇರ ಪ್ರಧಾನಿ ಕಚೇರಿಗೆ ಪತ್ರ ಬರೆದು ಜಿಲ್ಲಾಡಳಿತದಲ್ಲಿ ಭಾರಿ ಸಂಚಲನ ಮೂಡಿಸಿದ್ದಾರೆ..! ನಮನ ಬರೆದ ಪತ್ರದ ಡಿಟೇಲ್ಸ್ ಇಲ್ಲಿದೆ ನೋಡಿ..
ಗೆ
ನರೇಂದ್ರ ಮೋದಿಜೀ
ಪ್ರಧಾನ ಮಂತ್ರಿಗಳು
ಭಾರತ ಸರ್ಕಾರ
ಪ್ರೀತಿಯ ಪ್ರಧಾನಿ ಮಂತ್ರಿಗಳೇ, ನನ್ನ ಹೆಸರು ನಮನ. ನಾನು ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಅಲೇಖಾನ್ ಹೊರಟ್ಟಿಯ ಗೋಪಾಲ ಗೌಡ ಎಂಬುವರ ಮಗಳು. ನಾನು ನನ್ನ ಊರಿನಿಂದ ಪ್ರತಿ ನಿತ್ಯ ಪ್ರಯಾಣ ಬೆಳೆಸಲು ಸಾಧ್ಯವಾಗದ ಕಾರಣ ನಾನು ನಮ್ಮ ಊರಿನಿಂದ ಸುಮಾರು 30 ಕಿ.ಮೀ ದೂರವಿರುವ ಬಿದರಹಳ್ಳಿ ಎಂಬ ಗ್ರಾಮದ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ 10ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದೇನೆ. ನೀವು ನಮ್ಮ ದೇಶದ ಪ್ರಧಾನಿ ಆದ ಬಳಿಕ ಸ್ವಚ್ಚ ಭಾರತ್ ಯೋಜನೆ, ಗ್ರಾಮೀಣ ಅಭಿವೃದ್ದಿ, ಭ್ರಷ್ಟಾಚಾರ ನಿರ್ಮೂಲನೆ ಹೀಗೆ ಹಲವಾರು ಯೋಜನೆಗಳನ್ನು ತಂದು ದೇಶದಲ್ಲಿ ಸಂಚಲನ ಮೂಡಿಸಿದ್ದೀರ. ಈ ಹಿನ್ನಲೆಯಲ್ಲಿ ನಾನು ಕೂಡ ನನ್ನ ಪುಟ್ಟ ಗ್ರಾಮ ಮಾದರಿ ಗ್ರಾಮವಾಗಬಹುದಾ..? ಎಂಬ ನಿರೀಕ್ಷೆ ಇಟ್ಟುಕೊಂಡಿದ್ದೇನೆ. ನಾನು ಈ ಪತ್ರ ಬರೆಯುವ ಉದ್ದೇಶ ಏನಂದರೆ ನನ್ನೂರು ಅಲೇಖಾನ್ ಹೊರಟ್ಟಿ. ಈ ಗ್ರಾಮದಲ್ಲಿ ಸಾರಿಗೆ ಸೌಲಭ್ಯ ಕನಸಿನ ಮಾತು. ಕಾಡಂಚಿನಲ್ಲಿ ನಮ್ಮ ಗ್ರಾಮವಿರೋದ್ರಿಂದ ಪ್ರತಿ ನಿತ್ಯ ಈ ಭಾಗಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಿದೆ. ಇನ್ನು ಈ ಹಳ್ಳಿಯಲ್ಲಿ ಯಾರಾದ್ರೂ ಅನಾರೋಗ್ಯದಿಂದ ಬಳಲುತ್ತಿದ್ದರೆ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲು ಹರ ಸಾಹಸ ಪಡಬೇಕಾಗುತ್ತೆ. ಇದಿಷ್ಟೇ ಅಲ್ಲದೆ ನಮ್ಮ ಹಳ್ಳಿ ಹತ್ತು ಹಲವಾರು ಸಮಸ್ಯೆಗಳಿಂದ ನರಳುತ್ತಿದೆ. ಆದ್ದರಿಂದ ದಯವಿಟ್ಟು ತಾವು ಮನಸ್ಸು ಮಾಡಿ ನಮ್ಮ ಊರನ್ನೂ ಕೂಡ ಒಂದು ಮಾದರಿ ಗ್ರಾಮವನ್ನಾಗಿ ಮಾಡುತ್ತೀರ ಎಂದು ಆಶಿಸುತ್ತೇನೆ. ನಿಮ್ಮ ಉತ್ತರದ ನಿರೀಕ್ಷೆಯಲ್ಲಿ ನಿಮ್ಮ ನಮನ..
ಇಂತಿ ನಿಮ್ಮ ಪ್ರೀತಿಯ
ನಮನ
ಈ ರೀತಿಯಾಗಿ ಹತ್ತನೇ ತರಗತಿಯ ವಿದ್ಯಾರ್ಥಿನಿ ನಮನ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದರು. ಅಕ್ಟೋಬರ್‍ನಲ್ಲಿ ಬರೆದ ಪತ್ರಕ್ಕೆ ಪ್ರಧಾನಿ ಕಚೇರಿ ಸ್ಪಂದಿಸಿದ್ದು, ಗ್ರಾಮದ ಅಭಿವೃದ್ದಿಗೆ ಕ್ರಮ ಕೈಗೊಳ್ಳುವಂತೆ ಡಿಸೆಂಬರ್ 6ರಂದು ಚಿಕ್ಕಮಗಳೂರು ಜಿಲ್ಲಾಡಳಿತ ಕಚೇರಿಗೆ ಪತ್ರ ಬರೆದಿದ್ದಾರೆ. ಇನ್ನು ನಮನ ಬರೆದ ಪತ್ರಕ್ಕೆ ಪ್ರಧಾನಿ ಕಚೇರಿ ಸ್ಪಂದಿಸಿದ್ದು, ನಮನ ಸೇರಿದಂತೆ ಊರಿನ ಜನರಿಗೂ ಹರ್ಷ ತಂದಿದೆ. ಪ್ರಧಾನಿ ಕಚೇರಿಯಿಂದ ಬಂದ ಪತ್ರದಿಂದ ಅಧಿಕಾರಿಗಳು ಈಗ ಈ ಪುಟ್ಟ ಹಳ್ಳಿಯ ಕಡೆಗೆ ಮುಖ ಮಾಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಹಳ್ಳಿಯ ಅಭಿವೃದ್ದಿಗಾಗಿ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು ಎಂದು ರಾಜ್ಯ ಸಕಾರಕ್ಕೆ ಪತ್ರ ಬರೆದಿದ್ದಾರೆ.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಆದಾಯ ತೆರಿಗೆ ಮಿತಿಯನ್ನು ಹೆಚ್ಚಿಸಲಿರುವ ಕೇಂದ್ರ ಸರ್ಕಾರ..?

ಮುಸ್ಲಿಂ ಉದ್ಯೋಗಿಗಳಿಗೆ ಶುಕ್ರವಾರ ಪ್ರಾರ್ಥನೆ ಸಲ್ಲಿಸಲು 90 ನಿಮಿಷ ವಿರಾಮ

ಎಟಿಎಂ ಮುಂದೆ ಕ್ಯೂ ನಿಲ್ಲೊರ್ಗೆ ಇಲ್ಲಿದೆ ಸಂತಸದ ಸುದ್ದಿ

ಕೆಪಿಎಸ್‍ಸಿ: 1203 ಹುದ್ದೆಗೆ ಅರ್ಜಿ ಆಹ್ವಾನ

ಮನೆಯಲ್ಲೇ ನಕಲಿ ನೋಟು ತಯಾರಿಸುತ್ತಿದ್ದ ಡಾಕ್ಟರ್..!

ಕೆಲವೇ ದಿನಗಳಲ್ಲಿ ಬೆಂಗಳೂರಲ್ಲೂ ಸಂಚರಿಸಲಿದೆ ಸಬ್ ಅರ್ಬನ್ ರೈಲು..!

ನಿಮ್ಮ ಖಾತೆಯಲ್ಲಿ 2 ಲಕ್ಷ ರೂ. ಜಮಾ ಆಗಿದ್ಯಾ..? ಹಾಗಾದ್ರೆ ನಿಮ್ಗೆ ಕಾದಿದೆ ಗಂಡಾಂತರ..!

Share post:

Subscribe

spot_imgspot_img

Popular

More like this
Related

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...