ಮಹಿಳೆಯರು ಮತ್ತು ಹಿರಿಯ ನಾಗರೀಕರ ನೆರವಿಗೆ ಮುಂದಾದ ನಮ್ಮ ಮೆಟ್ರೋ

Date:

ಇನ್ಮುಂದೆ ಬಿಎಂಟಿಸಿ, ಕೆಎಸ್‍ಆರ್‍ಟಿಸಿ ಬಸ್‍ಗಳಲ್ಲಿ ಇರುವಂತೆಯೆ ನಮ್ಮ ಮೆಟ್ರೋದಲ್ಲೂ ಕೂಡ ಮಹಿಳೆಯರಿಗೆ ಹಾಗೂ ಹಿರಿಯ ನಾಗರೀಕರಿಗೆ ಸೀಟು ಕಾಯ್ದಿರಿಸಲು ಮುಂದಾಗಿದೆ. ಪ್ರಯಾಣಿಕರ ದಟ್ಟಣೆ ಹೆಚ್ಚಿರುವ ಕಾರಣದಿಂದಾಗಿ ಮೆಟ್ರೋ ರೈಲಿನಲ್ಲಿ ಹಿರಿಯ ನಾಗರೀಕರು ಹಾಗೂ ಮಹಿಳೆಯರಿಗೆ ಸರ್ಕಾರಿ ಬಸ್‍ನಲ್ಲಿರುವಂತೆ ಸೀಟು ಕಾಯ್ದಿರಿಲಾಗುವುದು ಎಂದು ಬಿಎಂಆರ್‍ಸಿಎಲ್ ಹೇಳಿದೆ.
ಮಗುವನ್ನು ಎತ್ತಿಕೊಂಡ ಮಹಿಳೆಯರು, ಗರ್ಭಿಣಿಯರು ಹಾಗೂ ಹಿರಿಯ ನಾಗರೀಕರ ಸಮಸ್ಯೆಯನ್ನು ಮನಗಂಡಿರುವ ಈ ಸಂಸ್ಥೆ ಆಸನಗಳನ್ನು ಮೀಸಲಿಡುವ ಕಾರ್ಯಕ್ಕೆ ಮುಂದಾಗಿದೆ. ಭೋಗಿಗಳ ಮೊದಲ ಎರಡು ಹಾಗೂ ಹಿಂದಿನ ಎರಡು ಆಸನಗಳ ಸಾಲು ಮೀಸಲಿರಿಸಲಾಗಿದೆ. ಈ ರೀತಿಯಾಗಿ ಒಂದು ರೈಲಿನ ಮೂರು ಭೋಗಿಗಳ ಪೈಕಿ 24 ಆಸನಗಳನ್ನು ಮೀಸಲಿಡಲಾಗುತ್ತದೆ ಎನ್ನಲಾಗಿದೆ. ಈ ಸೀಟಿನ ಮೇಲ್ಭಾಗದಲ್ಲಿ ಸೀಟು ಯಾರಿಗೆ ಮೀಸಲಿಡಲಾಗಿದೆ ಎಂಬುದನ್ನು ಕನ್ನಡ ಹಾಗೂ ಇಂಗ್ಲೀಷ್‍ನಲ್ಲಿ ಬರೆಯಲಾಗುವುದು ಎಂದಿದ್ದಾರೆ.
ಸದ್ಯಕ್ಕೆ ಈಗಿರುವ ಮೀಸಲು ಆಸನಗಳಲ್ಲಿ ಕೂತು ಪ್ರಯಾಣಿಸುತ್ತಿರುವ ಪ್ರಯಾಣಿಕರಿಗೆ ಯಾವುದೇ ದಂಡ ವಿಧಿಸಲಾಗುತ್ತಿಲ್ಲ. ಈ ಕುರಿತು ಜಾಗೃತಿ ಹಾಗೂ ವ್ಯವಸ್ಥೆಯ ಕಟ್ಟುನಿಟ್ಟಿನ ಜಾರಿ ನಂತರ ಎಷ್ಟರ ಮಟ್ಟಗೆ ದಂಡ ವಿಧಿಸಲಾಗುತ್ತದೆ ಎಂದು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಬಿಎಂಆರ್‍ಸಿಎಲ್ ತಿಳಿಸಿದೆ.

POPULAR  STORIES :

ಮೋಸ್ಟ್ ಡೇಂಜರಸ್ ಫೋಟೋಗ್ರಫಿ ಕ್ಲಿಕ್ಸ್…ಈಕೆಯ ಈ ಹುಚ್ಚು ಶೋಕಿಗೆ ಏನನ್ನಬೇಕೋ???

ಅತಿಯಾದ್ರೆ ಹಾಲೂ ಕೂಡ ವಿಷವಾಗುತ್ತೆ ಎಚ್ಚರ…!

ನಮ್ಮ ದೇಶದ ಗಾಡಿಗಳ ನಂಬರ್ ಪ್ಲೇಟ್ ಗಳ ಕಲರ್ ಗಳು ಬೇರೆ ಬೇರೆ ಯಾಕಿವೆ? ನಿಮಗಿದು ಗೊತ್ತೆ??

ಈ ಮಹಿಳೆ ಗರ್ಭ ಧರಿಸಿ ಬರೋಬ್ಬರಿ 17 ತಿಂಗಳಾಯ್ತು, ಇನ್ನೂ ಮಗೂನೇ ಜನಿಸಿಲ್ಲ ನೋಡಿ..!

ಪತ್ರಕರ್ತನನ್ನು ನೋಡಿದ ಆ ರೋಗಿ ವಿಚಿತ್ರವಾಗಿ ಮಾತಾಡ್ತಾನೆ..! ‘ಅನ್ವೇಷಿ’ ನೋಡಿದ್ರೆ ಎಲ್ಲವೂ ಅರ್ಥವಾಗುತ್ತೆ..!

ಬೆಳ್ಳಿ ತಾರೆಗೆ ಬಿಎಂಡಬ್ಲ್ಯೂ ಕಾರು, ಸಾಕ್ಷಿಗೆ ವಿಮಾನ ಟಿಕೆಟ್ ಗಿಫ್ಟ್…!

ನನ್ನ ಅಮ್ಮ ಹಾಗೂ ನನ್ನ ತಂದೆ ಆತ್ಮ ಸಂಗಾತಿಗಳು, ಜನುಮದ ಜೋಡಿ ಇದ್ದಹಾಗೆ….

ಓಣಂ ಹಬ್ಬಕ್ಕೆ ಆನ್‍ಲೈನ್‍ನಲ್ಲಿ ಮದ್ಯಪಾನ ಮಾರಾಟ..!

ಸಾವಿನ ಮನೆಗೆ ಬಾರ್ ಗರ್ಲ್ಸ್ ರನ್ನು ಕರುಸ್ಕೊಳ್ತಾರೆ…!

Share post:

Subscribe

spot_imgspot_img

Popular

More like this
Related

ಆಂಧ್ರದ ಶ್ರೀಕಾಕುಳಂನಲ್ಲಿ ಕಾಲ್ತುಳಿತ: ದೇವರ ದರ್ಶನಕ್ಕೆ ಬಂದ 9 ಭಕ್ತಾದಿಗಳ ಸಾವು

ಆಂಧ್ರದ ಶ್ರೀಕಾಕುಳಂನಲ್ಲಿ ಕಾಲ್ತುಳಿತ: ದೇವರ ದರ್ಶನಕ್ಕೆ ಬಂದ 9 ಭಕ್ತಾದಿಗಳ ಸಾವು ಆಂಧ್ರಪ್ರದೇಶದ...

ರಾಜ್ಯದ ಎಲ್ಲಾ ಪ್ರದೇಶಗಳಲ್ಲಿ ಒಣ ಹವೆ! ಆದ್ರೆ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ

ರಾಜ್ಯದ ಎಲ್ಲಾ ಪ್ರದೇಶಗಳಲ್ಲಿ ಒಣ ಹವೆ! ಆದ್ರೆ ಬೆಂಗಳೂರಿನಲ್ಲಿ ಮೋಡ ಕವಿದ...

ಕನ್ನಡ ರಾಜ್ಯೋತ್ಸವಕ್ಕೆ ಕನ್ನಡದಲ್ಲೇ ಶುಭಾಶಯ ಕೋರಿದ ಪ್ರಧಾನಿ ಮೋದಿ

ಕನ್ನಡ ರಾಜ್ಯೋತ್ಸವಕ್ಕೆ ಕನ್ನಡದಲ್ಲೇ ಶುಭಾಶಯ ಕೋರಿದ ಪ್ರಧಾನಿ ಮೋದಿ ನವದೆಹಲಿ: ಕನ್ನಡ ರಾಜ್ಯೋತ್ಸವ...

ಹಾಲು-ನೀರು ಸರಿಯಾದರೂ ಟೀ ರುಚಿಯಾಗಿಲ್ಲವಾ? ಹಾಗಿದ್ರೆ ತಪ್ಪು ಇಲ್ಲಿದೆ ನೋಡಿ!

ಹಾಲು-ನೀರು ಸರಿಯಾದರೂ ಟೀ ರುಚಿಯಾಗಿಲ್ಲವಾ? ಹಾಗಿದ್ರೆ ತಪ್ಪು ಇಲ್ಲಿದೆ ನೋಡಿ! ಭಾರತೀಯರ ಜೀವನದಲ್ಲಿ...