ದಕ್ಷಿಣಕಾಶಿ ನಂಜನಗೂಡಿನಲ್ಲಿ ಚಿಕ್ಕ ಜಾತ್ರಾ ಮಹೋತ್ಸವ ಅಂಗವಾಗಿ ತೆಪ್ಪೋತ್ಸವ ನಡೆಸಲಾಯಿತು.
ಜಿಟಿ ಜಿಟಿ ಮಳೆ ನಡುವೆಯೇ ಕಪಿಲಾ ನದಿಯಲ್ಲಿ ಶ್ರೀ ಪಾರ್ವತಿ ಸಮೇತ ಶ್ರೀಕಂಠೇಶ್ವರಸ್ವಾಮಿಯ ತೆಪ್ಪೋತ್ಸವ ನೆರವೇರಿತು.
ಪಾರ್ವತಿ – ಶ್ರೀಕಂಠೇಶ್ವರಸ್ವಾಮಿ ಮೂರ್ತಿಗಳಿಗೆ ವಿಶೇಷ ಅಲಂಕಾರ ಮಾಡಲಾಗಿದ್ದು, ದೋಣಿಗೆ ವಿದ್ಯುತ್ ದೀಪ ಹಾಗೂ ಬಣ್ಣ ಬಣ್ಣದ ಹೂಗಳಿಂದ ಸಿಂಗರಿಸಲಾಗಿತ್ತು.
ಹಲವು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಕಪಿಲಾ ನದಿಯಲ್ಲಿ ತೆಪ್ಪೋತ್ಸವ ನೆರವೇರಿದ್ದು, ಪಾರ್ವತಿ, ಶ್ರೀಕಂಠೇಶ್ವರಸ್ವಾಮಿಯ ತೆಪ್ಪೋತ್ಸವವನ್ನು ಭಕ್ತರು ಕಣ್ತುಂಬಿಕೊಂಡ್ರು. ಬಳಿಕ ಚಿಕ್ಕ ರಥದಲ್ಲಿ ಉತ್ಸವ ಮೂರ್ತಿಗಳ ಮೆರವಣಿಗೆ ನಡೆದಿದ್ದು, ರಥ ಬೀದಿಯಲ್ಲಿ ದೇವರಿಗೆ ಭಕ್ತಾಧಿಗಳು ಪೂಜೆ ಸಲ್ಲಿಸಿದ್ರು.