ಐಎಎಸ್-ಐಪಿಎಸ್ ದಂಪತಿಗಳು ಒಟ್ಟಿಗೆ ಬಾಳಲು ಬೇಕಿದೆ ಮೋದಿ ಆಶೀರ್ವಾದ..!

Date:

ಪ್ರೀತಿ ಎಲ್ಲವನ್ನೂ ಗೆಲ್ಲುತ್ತದೆ..! ಪ್ರೀತಿ ವಿಚಾರದಲ್ಲಿ ದೊಡ್ಡವರು ಚಿಕ್ಕವರೆಂದಿಲ್ಲ..! ಆದರೆ ಸರ್ಕಾರಿ ನಿಯಮಗಳು ಮಾತ್ರ ಪ್ರೀತಿಗೆ ಎಂದೂ ತಲೆಬಾಗಲ್ಲ..! ಇದು ಭಾರತದ ವಾಸ್ತವ ಸ್ಥಿತಿ..! ಅದೇನೇ ಇರಲಿ, ಈಗ ಆ ಅಧಿಕಾರಿಗಳಿಬ್ಬರು ಒಟ್ಟಿಗಿರಲು ಸರ್ಕಾರದ ನಿಯಮ ಬದಲಾಗಬೇಕಿದೆ..! ಈಗ ಆ ದಂಪತಿಗಳಿಗೆ ಮೋದಿ ಆಶೀರ್ವಾದ ಬೇಕೇ ಬೇಕಿದೆ..!
ಮೋದಿ ಅತಿಶೀಘ್ರದಲ್ಲಿ ಆ ದಂಪತಿಗಳಿಬ್ಬರು ಒಟ್ಟಿಗೆ ಕಾಲಕಳೆಯಲು ಅನುವು ಮಾಡಿಕೊಡಬೇಕಿದೆ..!
ಅವರು ದೆಹಲಿಯ ನಿಶಾ, 2011ರ ಬ್ಯಾಚ್ನ ಐಪಿಎಸ್ ಅಧಿಕಾರಿ. ಅವರು 2012ರಲ್ಲಿ ಅವರದ್ದೇ ಬ್ಯಾಚ್ ನ ಐಎಎಸ್ ಅಧಿಕಾರಿ ಪಿ ಪಾರ್ಥ್ ಬನ್ರನ್ನು ಮದುವೆಯಾಗಿದ್ದಾರೆ. ನಿಶಾ ಟಿಎನ್ ಕೇಡರ್ನಲ್ಲಿ ಕೋಯಂಬತ್ತೂರ್ನಲ್ಲಿ ಸೇವೆಗೆ ನಿಯೋಜನೆ ಗೊಂಡು, ಸೇವೆ ಸಲ್ಲಿಸ್ತಾ ಇದ್ದಾರೆ. ತಮಿಳುನಾಡಿನವರಾದ ಪಾರ್ಥ್ ಬನ್ ದೆಹಲಿಯನ್ನೊಳಗೊಂಡ ಎಜಿಎಂಯುಟಿ ಕೇಡರ್ನಲ್ಲಿ ಸೇವೆ ಸಲ್ಲಿಸ್ತಾ ಇದ್ದಾರೆ..! ನಿಶಾ ಊರಲ್ಲಿ ಪ್ರಾರ್ಥ್ ಬನ್, ಪ್ರಾರ್ಥ್ ಬನ್ ಊರಲ್ಲಿ ನಿಶಾ..!
ಕಳೆದ ವರ್ಷವೇ, ತಾವಿಬ್ಬರೂ ಒಂದೇ ಕಡೆ ಕೆಲಸಮಾಡುವುದಕ್ಕೆ ಅವಕಾಶ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ..! ಒಂದೇ ರಾಜ್ಯದಲ್ಲಿ ಒಟ್ಟಿಗೆ ಸೇವೆ ಸಲ್ಲಿಸುತ್ತಾ ದಾಂಪತ್ಯ ಜೀವನ ನಡೆಸುವ ಆಸೆ ಎಲ್ಲರಂತೆ ಅವರಿಗೂ ಸಹಜವಲ್ಲವೇ? ಆದರೆ ಸರ್ಕಾರದ ನಿಯಮದಂತೆ ನಿಶಾ ತನ್ನೂರು ದೆಹಲಿಯಲ್ಲೂ, ಪ್ರಾರ್ಥ್ ಬನ್ ತಮಿಳು ನಾಡಿನಲ್ಲೂ ಸೇವೆ ಸಲ್ಲಿಸುವಂತಿಲ್ಲವಂತೆ..! ಸ್ವಂತ ರಾಜ್ಯದಲ್ಲಿ ಅಧಿಕಾರಿಗಳು ಸೇವೆ ಸಲ್ಲಿಸುವಂತಿಲ್ಲ..!
ಇಂಥಾ ಕೇಸ್ ಗಳು ವಿರಳ, ಆದರೀಗ ಪ್ರಧಾನಮಂತ್ರಿ ಮೋದಿಯವರು ಮನಸ್ಸು ಮಾಡಿದರೆ ಮಾತ್ರ ಇಬ್ಬರನ್ನೂ ಒಂದೇ ರಾಜ್ಯಕ್ಕೆ ನಿಯೋಜಿಸಿ ಅವರ ಸೇವೆ ಪಡೆಯಬಹುದು…! ಅವರಿಗೂ ದಾಂಪತ್ಯ ಜೀವನ ನಡೆಸೋಕೆ ಅನುವು ಮಾಡಿಕೊಡಬಹದು..! ಈಗ ಈ ದಂಪತಿಗಳು ಒಟ್ಟಾಗಿ ಇರುವಂತೆ ಮಾಡೋದು ಮೋದಿಯವರ ಕೈಯಲ್ಲಿದೆ..! ನರೇಂದ್ರ ಮೋದಿಯವರೇ ಈಗ ಐಎಎಸ್-ಐಪಿಸ್ ದಂಪತಿಗಳಿಗೆ ಆಶೀರ್ವಧಿಸಬೇಕಿದೆ..!

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

Share post:

Subscribe

spot_imgspot_img

Popular

More like this
Related

T20 World Cup: ಟಿ20 ವಿಶ್ವಕಪ್‌ʼಗೆ ಭಾರತ ತಂಡ ಪ್ರಕಟ: ಉಪನಾಯಕನ ಬದಲಾವಣೆ! 

T20 World Cup: ಟಿ20 ವಿಶ್ವಕಪ್‌ʼಗೆ ಭಾರತ ತಂಡ ಪ್ರಕಟ: ಉಪನಾಯಕನ...

ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ, ಕರೆದಾಗ ನಾನು, ಸಿಎಂ ಇಬ್ಬರೂ ಹೋಗುತ್ತೇವೆ: ಡಿ.ಕೆ. ಶಿವಕುಮಾರ್

ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ, ಕರೆದಾಗ ನಾನು, ಸಿಎಂ ಇಬ್ಬರೂ ಹೋಗುತ್ತೇವೆ:...

ಹುಣಸೆ, ಹಲಸು ಮತ್ತು ನೇರಳೆಗಾಗಿ ರಾಷ್ಟ್ರೀಯ ಮಂಡಳಿ ರಚಿಸಲು ಕೇಂದ್ರಕ್ಕೆ ಹೆಚ್.ಡಿ. ದೇವೇಗೌಡರ ಮನವಿ

ಹುಣಸೆ, ಹಲಸು ಮತ್ತು ನೇರಳೆಗಾಗಿ ರಾಷ್ಟ್ರೀಯ ಮಂಡಳಿ ರಚಿಸಲು ಕೇಂದ್ರಕ್ಕೆ ಹೆಚ್.ಡಿ....

ಸತೀಶ್ ಜಾರಕಿಹೊಳಿ ಡಿನ್ನರ್ ಮೀಟಿಂಗ್ ಮಾಡಿರೋದ್ರಲ್ಲಿ, ಎಲ್ಲ ಸೇರಿರೋದ್ರಲ್ಲಿ ತಪ್ಪೇನಿದೆ: ಡಿ.ಕೆ. ಶಿವಕುಮಾರ್ ಮರುಪ್ರಶ್ನೆ

ಸತೀಶ್ ಜಾರಕಿಹೊಳಿ ಡಿನ್ನರ್ ಮೀಟಿಂಗ್ ಮಾಡಿರೋದ್ರಲ್ಲಿ, ಎಲ್ಲ ಸೇರಿರೋದ್ರಲ್ಲಿ ತಪ್ಪೇನಿದೆ: ಡಿ.ಕೆ....