ಹುತಾತ್ಮ ಯೋಧ ರವೀಂದರ್ ಸಂಬ್ಯಾಲ್ ಅವರ ಪತ್ನಿ ಈಗ ಲೆಫ್ಟಿನೆಂಟ್ ಆಗುವ ಮೂಲಕ ದೇಶಕ್ಕೆ ಮಾದರಿಯಾಗಿದ್ದಾರೆ. ಮೂರು ವರ್ಷದ ಹಿಂದೆ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧನ ಪತ್ನಿ ನೀರೂ ಸಂಬ್ಯಾಲ್ ಅವರೀಗ ಲೆಪ್ಟಿನೆಂಟ್ ಆಗಿ ಭಾರತೀಯ ಸೇನೆ ಸೇರಿದ್ದಾರೆ.
ರವೀಂದರ್ ಸಂಬ್ಯಾಲ್ 2013ರಲ್ಲಿ ನೀರೂ ಸಂಬ್ಯಾಲ್ ಅವರನ್ನು ಮದುವೆ ಆಗಿದ್ದರು. 2015ರಲ್ಲಿ ರವೀಂದರ್ ಹುತಾತ್ಮರಾಗಿದ್ದರು. ದೇಶಕ್ಕಾಗಿ ರವೀಂದರ್ ಪ್ರಾಣ ಬಿಡುವಾಗ ಎರಡು ವರ್ಷದ ಪುಟ್ಟ ಮಗುವಿತ್ತು. ಪತಿಯನ್ನ ಕಳೆದುಕೊಂಡು ದುಃಖದಲ್ಲಿದ್ದ ನೀರೂ ಬಂದ ಯಾವೂದೇ ಕಷ್ಟಗಳಿಗೂ ಎದೆಗುಂದದೆ ತನ್ನ ಪುಟ್ಟ ಮಗಳನ್ನ ಸಾಕಿ ಬೆಳೆಸಿದರು.
ತಾನು ತನ್ನ ಗಂಡನಂತೆಯೇ ದೇಶ ಸೇವೆ ಮಾಡಬೇಕೆಂದು ನಿರ್ಧರಿಸಿ ಸೇನಾ ತರಬೇತಿಯನ್ನ ಯಶಸ್ವಿಯಾಗಿ ಪೂರೈಸಿದರು. ಇದೀಗ ತಮ್ಮ ನಿರ್ಧಾರದಂತೆ ಸೇನೆಗೆ ಸೇರಿದ್ದಾರೆ.