ಹೊಸ ವರ್ಷಕ್ಕೆ ಬೆಂಗಳೂರಿನ ಎಲ್ಲಾ ಬಾರ್ ಹಾಗೂ ರೆಸ್ಟೋರೆಂಟ್‍ಗಳು ರಾತ್ರಿ 2 ಗಂಟೆವರೆಗೂ ಓಪನ್

Date:

ನ್ಯೂ ಇಯರ್‍ಗೆ ಈಗಾಗ್ಲೆ ಕೌಂಟ್‍ಡೌನ್ ಶುರುವಾಗಿದ್ದು 2017ರ ವರ್ಷವನ್ನು ಬರಮಾಡಿಕೊಳ್ಳೋಕೆ ಎಲ್ಲಾ ಸಿದ್ಧತೆಗಳು ನಡೀತಾ ಇದೆ..! ಬೆಂಗಳೂರಿನ ಕೇಂದ್ರ ಬಿಂದು ಎಂಜಿ ರೋಡ್ ಸೇರಿದಂತೆ, ಬ್ರಿಗೇಡ್ ರಸ್ತೆ, ಕಮರ್ಷಿಯಲ್ ಸ್ಟ್ರೀಟ್, ವೈಟ್‍ಫೀಲ್ಡ್ ಗಳಲ್ಲಿ ಬರದ ಸಿದ್ಧತೆ ನಡೀತಾ ಇದೆ. ಇದಕ್ಕಿಂತ ಮುಖ್ಯವಾಗಿ ಒಂದು ಗುಡ್ ನ್ಯೂಸ್ ಇದೆ ಕೇಳಿ. ಬೆಂಗಳೂರಿನ ಮದ್ಯಪ್ರೀಯರೆ ಈ ಬಾರಿ ನೀವು ಮದ್ಯದ ಅಮಲಿನಲ್ಲಿ ಕುಣಿದು ಕುಪ್ಪಳಿಸ್ಬೋದು..! ನಿಮ್ಮ ಇಷ್ಟವಾದ ಬ್ರಾಂಡ್‍ಗಳನ್ನ ಕೊಳ್ಳೋಕೆ ನೀವು ಯಾವಾಗಬೇಕಾದ್ರೂ ಬಾರ್ ಮತ್ತು ರೆಸ್ಟೋರೆಂಟ್‍ಗೆ ಹೋಗ್ಬೋದು..! ಹೇಗೆ ಅಂತೀರಾ..? ಈ ಬಾರಿಯ ಹೊಸ ವರ್ಷಕ್ಕೆ ಬೆಂಗಳೂರಿನ ಎಲ್ಲಾ ಬಾರ್ ಹಾಗೂ ರೆಸ್ಟೋರೆಂಟ್‍ಗಳು ಸತತ ಎರಡು ದಿನಗಳ ಕಾಲ ರಾತ್ರಿ 2ರ ವರೆಗೂ ಓಪನ್ ಮಾಡೋಕೆ ಬೆಂಗಳೂರು ಪೊಲೀಸ್ ಗ್ರೀನ್ ಸಿಗ್ನಲ್ ಕೊಟ್ಟಿದೆ..! ಡಿಸೆಂಬರ್ 31 ಮತ್ತು ಜನವರಿ 1ರಂದು ರಾತ್ರಿ 2 ಗಂಟೆಯವರೆಗೂ ಬಾರ್ ಅಂಡ್ ರೆಸ್ಟೋರೆಂಟ್‍ಗಳು ಕಾರ್ಯ ನಿರ್ವನಿರ್ವಹಿಸಬಹುದು ಎಂದು ನಗರ ಪೊಲೀಸ್ ಆಯುಕ್ತ ಎನ್.ಎಸ್ ಮೇಘರಿಕ್ ಹೇಳಿದ್ದಾರೆ. ಅಷ್ಟೆ ಅಲ್ಲ ಬೆಂಗಳೂರು ನಗರ ವ್ಯಾಪ್ತಿಗೆ ಬರುವ ಎಲ್ಲಾ ಪಬ್, ಡಿಸ್ಕೊತೆಕ್ ಸೇರಿದಂತೆ ಎಲ್ಲಾ ಮನರಂಜನಾ ಕ್ಲಬ್‍ಗಳಿಗೂ ರಾತ್ರಿ 2ರವರೆಗೂ ಕಾಲಾವಕಾಶ ನೀಡಿದ್ದಾರೆ..!
ಇಷ್ಟೆಲ್ಲಾ ಫ್ರೀ ಬಿಟ್ಟಿದ್ದಾರಾ ನಗರ ಪೊಲೀಸ್ ಆಯುಕ್ತರು ಅಂತ ಖುಷಿಯಾಗ್ಬೇಡಿ..! ಕುಡಿದ ಅಮಲಿನಲ್ಲಿ ಪಬ್ಲಿಕ್ ಪ್ಲೇಸ್‍ನಲ್ಲಿ ಅಸಭ್ಯವಾಗಿ ನಡೆದುಕೊಂಡ್ರೆ, ಅಥವಾ ತೊಂದರೆ ಕೊಟ್ಟಿದ್ದೇ ಆದಲ್ಲಿ ನಿಮ್ಮ ಮೇಲೆ ಹಾಗೂ ಸಂಸ್ಥೆಯ ಮೇಲೂ ಕಠಿಣ ಕ್ರಮ ಕೈಗೊಳ್ಳಲಾಗುತ್ತೆ ಎಂಬ ಷರತ್ತು ವಿಧಿಸಿಯೇ ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ. ಆದ್ದರಿಂದ ಮದ್ಯದ ಅಮಲಿನಿಂದ ನೀವೇನೆ ಸಣ್ಣ ತಪ್ಪು ಮಾಡಿದ್ರೂ ಅದಕ್ಕೆ ದೊಡ್ಡ ಪ್ರಮಾಣದ ಶಿಕ್ಷೆ ಕಾದಿರುತ್ತೆ ಎಚ್ಚರ..!

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಫೋಬ್ರ್ಸ್ ಶ್ರೀಮಂತ ಸೆಲಿಬ್ರಿಟಿಗಳಲ್ಲಿ ವಿರಾಟ್ ಕೋಹ್ಲಿಗೆ 3ನೇಸ್ಥಾನ

ಇನ್ಮುಂದೆ ಕಾರು ಖರೀದಿಸೋದು ಅಷ್ಟೊಂದು ಸುಲಭವಲ್ಲ..!

ತನ್ನ ಸೆಕ್ಸ್ ಸಿಡಿ ಪ್ರಸಾರ ಮಾಡದಂತೆ ಕೋರ್ಟ್ ಮೊರೆ ಹೋದ ಜೆ.ಟಿ ಪಾಟೀಲ..!

ಸದ್ಯದಲ್ಲೇ ಇಬ್ಬರು ರಾಜಕೀಯ ವ್ಯಕ್ತಿಗಳ ಸಿ.ಡಿ. ರಿಲೀಸ್ : ರಾಜಶೇಖರ ಮುಲಾಲಿ

ಸೀರೆ ಕೊಳ್ಳೋಕೆ ಮುಗಿ ಬಿದ್ರು ಜನ..! ಸೀರೆಯ ಬೆಲೆ ಕೇವಲ 1. ರೂಪಾಯಿ ಮಾತ್ರ..!

ಸತ್ತ ವ್ಯಕ್ತಿಯ ಶವ ಸಂಸ್ಕಾರಕ್ಕೆ ನೀಡ್ತಾ ಇಲ್ಲ ಒಂದಿಡಿ ಜಾಗ..?

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...