ಮೈಸೂರಿನಲ್ಲಿ ಮತ್ತೆ ಮೊಳಗಿದ ಮುಂದಿನ ಸಿಎಂ ಸಿದ್ದರಾಮಯ್ಯ ಕೂಗು ಕೇಳಿ ಬಂದಿದೆ. ಸಿದ್ದರಾಮಯ್ಯರ ಮೈಸೂರು ನಿವಾಸದ ಬಳಿ ಫ್ಯಾನ್ಸ್ ಘೋಷಣೆ ಕೂಗಿದ ಬೆನ್ನಲ್ಲೇ ಕನಕ ಜಯಂತಿ ಸಮಾರಂಭದಲ್ಲಿ ಸಿದ್ದರಾಮಯ್ಯ 75ನೇ ಹುಟ್ಟುಹಬ್ಬ ಆಚರಿಸಲಾಯ್ತು.
ವಿಶೇಷ ಅಂದ್ರೆ 75 ಕೆ.ಜಿ ತೂಕದ ಬೃಹತ್ ಕೇಕ್ ಮೇಲೂ ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಬರೆಯಲಾಗಿದೆ. ಆದ್ರೆ, ಕೇಕ್ನಲ್ಲಿದ್ದ ಸಾಲುಗಳನ್ನು ಓದಿ, ಸಿದ್ದರಾಮಯ್ಯ ಕೇಕ್ ಕಟ್ ಮಾಡಲು ಹಿಂದೇಟು ಹಾಕಿದ್ರು. ಈ ವೇಳೆ ನಿರಂಜನಾನಂದಪುರಿ ಸ್ವಾಮೀಜಿಯವರೇ ಮಾಜಿ ಸಿಎಂ ಸಿದ್ದರಾಮಯ್ಯಗೆ ಕೇಕ್ ತಿನ್ನಿಸಿದ್ರು. ಹುಟ್ಟುಹಬ್ಬ ಆಚರಿಸಿದ್ರು..