2023ಕ್ಕೆ ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆಗೋದು ಪಕ್ಕಾ ಎಂದು ನಾಗಮಂಗಲ ಜೆಡಿಎಸ್ ಶಾಸಕ ಸುರೇಶ್ ಗೌಡ ತಿಳಿಸಿದ್ರು. ಈ ಬಗ್ಗೆ ಮದ್ದೂರಿನಲ್ಲಿ ಮಾತ್ನಾಡಿದ ಅವರು, ಕುಮಾರಣ್ಣ ಮುಖ್ಯಮಂತ್ರಿ ಆಗುವುದನ್ನ ತಡೆಯಲು ಯಾರಿಂದಲ್ಲೂ ಸಾಧ್ಯವಿಲ್ಲ. 2023ರ ಚುನಾವಣೆಯಲ್ಲಿ ಜೆಡಿಎಸ್ಗೆ ಸ್ಪಷ್ಟ ಬಹುಮತ ಸಿಗಲಿದ್ದು, ಅವಕಾಶ ಸಿಕ್ಕಿದ್ರೆ ದಲಿತರಿಗೆ ಡಿಸಿಎಂ ಮಾಡ್ತಾರೆ. ಅವರ ಸ್ಟೇಟ್ಮೆಂಟ್ನ ಕೆಲವರು ಮಿಸ್ ಯೂಸ್ ಮಾಡ್ಕೊಂಡಿದ್ದಾರೆ. ಈಗಾಗಲೇ ನಾವು ಚುನಾವಣೆಗೆ ಸಿದ್ಧತೆ ನಡೆಸಿದ್ದು, ನಮ್ಮ ಕಾರ್ಯಕರ್ತರು ಎಲ್ಲಾ ಕಡೆ ಅಲರ್ಟ್ ಆಗಿದ್ದಾರೆ. 2023ಕ್ಕೆ ಸ್ವತಂತ್ರ ಸರ್ಕಾರವನ್ನ ರಾಜ್ಯದಲ್ಲಿ ಅಧಿಕಾರಕ್ಕೆ ತರ್ತೇವೆ. ರಾಜ್ಯ ಅಭಿವೃದ್ಧಿ ಆಗುವುದು ಪ್ರಾದೇಶಿಕ ಪಕ್ಷದಿಂದ ಮಾತ್ರ. ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಲು ಜನ ನಿರ್ಧರಿಸಿದ್ದು, ಪ್ರಾದೇಶಿಕ ಪಕ್ಷ ಜೆಡಿಎಸ್ನ ಅಧಿಕಾರಕ್ಕೆ ತರಲು ತೀರ್ಮಾನಿಸಿದ್ದಾರೆ. ಅಲ್ದೆ ಪಂಚರತ್ನ ಯೋಜನೆ ರಾಜ್ಯದಲ್ಲಿ ಸಂಚಲವನ್ನು ಉಂಟು ಮಾಡಿದೆ ಎಂದು ಶಾಸಕ ಸುರೇಶ್ ಗೌಡ ತಿಳಿಸಿದ್ರು.
ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆಗೋದು ಪಕ್ಕಾ
Date: