ನೀಲ್ಗಾಯ್ ಗಳ ಗುಂಪೊಂದು 18 ಮಂದಿಯ ಜೀವ ಉಳಿಸಿರುವ ಘಟನೆ ಸೌರಾಷ್ಟ್ರ ಪ್ರದೇಶದಲ್ಲಿ ನಡೆದೆ.
ಕೇಶೋಡ್ ಗ್ರಾಮದ 11ನಿವಾಸಿಗಳು ಮತ್ತು ಮೂವರು ಅರಣ್ಯ ಸಿಬ್ಬಂದಿ ಹಾಗೂ ಮೂವರು ಸೆಕ್ಯುರಿಟಿ ಗಾರ್ಡ್ ಗಳನ್ನು ನೀಲ್ಗಾಯ್ ಗಳು ರಕ್ಷಿಸಿವೆ.
ಕೇಶೋಡ್ ಗ್ರಾಮದಿಂದ 10 ಕಿಮೀ ದೂರದಲ್ಲಿ ಈ ಘಟನೆ ನಡೆದಿದೆ.
ನೀಲ್ಗಾಯ್ ಗಳು ಮನುಷ್ಯರಿಗೆ ಭಯಪಡ್ತವೆ.ಆದ್ರೆ ಇವುಗಳ ಗುಂಪೊಂದು ತಮ್ಮತ್ತಲೇ ಬರುವ ವಿಚಿತ್ರ ಬೆಳವಣಿಗೆಯನ್ನು ರೈತರು ಗಮನಿಸಿದ್ದರು. ಇದು ಅರಣ್ಯಾಧಿಕಾರಿಗಳ ಗಮನಕ್ಕೆ ಬಂದಿದೆ. ನೀಲ್ಗಾಯ್ ಗಳು ಪ್ರಾಣ ಉಳಿಸಿಕೊಳ್ಳಲು ಬರುತ್ತಿವೆ ಎಂದು ಅರಣ್ಯಾಧಿಕಾರಿಗಳಿಗೆ ತಿಳಿದಿದೆ. ಇದು ಪ್ರವಾಹದ ಸೂಚನೆ ಎಂಬುದು ಗಮನಕ್ಕೆ ಬಂದಿದೆ. ಆದ್ದರಿಂದ ಅಲ್ಲಿದ್ದವರು ಸ್ಥಳಾಂತರಗೊಂಡಿದ್ದಾರೆ. ಈ ಘಟನೆ ನಡೆದ ಮೂರೇ ಮೂರುಗಂಟೆಗಳಲ್ಲಿ ಆ ಪ್ರದೇಶದಲ್ಲಿ 7 ಅಡಿ ಎತ್ತರ ನೀರು ತುಂಬಿ ಪ್ರವಾಹ ಎದುರಾಗಿತ್ತು…!