ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಸುಮಾರು 11,300ಕೋಟಿ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ನೀರವ್ ಮೋದಿ ವಿರುದ್ಧ ತನಿಖೆ ಬಿಗಿಗೊಳ್ಳುತ್ತಿದ್ದಂತೆ…ಅವರ ಉತ್ಪನ್ನಗಳಿಗೆ ಪ್ರಚಾರ ನೀಡಿ ಲಾಭ ಪಡೆಯುತ್ತಿದ್ದ ಬಾಲಿವುಡ್ ತಾರೆಯರು ಅವರಿಗೆ ಗುಡ್ ಬೈ ಹೇಳಿತ್ತಿದ್ದಾರೆ.

ಪ್ರೀಯಾಂಕ ಚೋಪ್ರಾ ಕೂಡ ನೀರವ್ ಸಹವಾಸ ಬೇಡ ಅಂತ ಕೈತೊಳೆದುಕೊಂಡಿದ್ದಾರೆ. 2009ರಿಂದಲೂ ಉದ್ಯಮಿ ನೀರವ್ ಮೋದಿಯ ಜ್ಯುವೆಲ್ಲರಿ ಉತ್ಪನ್ನಗಳಿಗೆ ಪ್ರಚಾರ ರಾಯಭಾರಿಯಾಗಿದ್ದ ಪ್ರೀಯಾಂಕ ತಮ್ಮ ಗುತ್ತಿಗೆಯನ್ನು ರದ್ದುಪಡಿಸಿದ್ದಾರೆ.

ನೀರವ್ ರಿಂದ ಪ್ರೀಯಾಂಕ ಸಾಕಷ್ಟು ಆರ್ಥಿಕ ಲಾಭಗಳನ್ನು ಪಡೆದಿದ್ದಾರೆಂದು ಕೆಲವೊಂದು ಮಾಧ್ಯಮಗಳು ವರದಿ ಮಾಡಿದ್ದವು. ಈ ಬಗ್ಗೆ ಪ್ರೀಯಾಂಕ ಎಲ್ಲಿಯೂ ತುಟಿ ಬಿಚ್ಚಿರಲಿಲ್ಲ.ಈಗ ಗುತ್ತಿಗೆ ರದ್ದುಪಡಿಸಿ ಕೈಮುಗಿದು ಸುಮ್ಮನಾಗಿದ್ದಾರೆ.







