ಮದುವೆಗೆ ಇನ್ನು 10 ದಿನ ಬಾಕಿ ಇರುವಾಗ ವಧು ತನ್ನ ಮಾಜಿ ಪ್ರಿಯತಮೆಗೆ ವಾಟ್ಸಪ್ ನಲ್ಲಿ ಸೆಲ್ಫಿ ವೀಡಿಯೋ ಸೆಂಡ್ ಮಾಡಿ ಸೂಸೈಡ್ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಬಾಂದ್ರ ಜಿಲ್ಲೆಯ ನಾಗ್ಪುರ ಸಮೀಪದ ರೋಹಿಣಿ ಗ್ರಾಮದ ನಿಶಾ ದೇವಿದಾಸ್ ಆತ್ಮಹತ್ಯೆಗೆ ಶರಣಾದ ವಧು. ನಿಶಾ ಅವರ ಮದುವೆ ಫೆಬ್ರವರಿ 4ಕ್ಕೆ ನಿಶ್ಚಯವಾಗಿತ್ತು.
ಮದುವೆ ನಿಶ್ಚಯವಾದ್ಮೇಲೆ ಮಾಜಿ ಪ್ರಿಯಕರ ನಿಶಾಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಎನ್ನಲಾಗಿದ್ದು. ಇದರಿಂದ ಮನನೊಂದು ಲೈವ್ ಆಗಿ ವಿಷ ಸೇವಿಸಿ ವೀಡಿಯೋವನ್ನು ಆತನಿಗೆ ಕಳುಹಿಸಿದ್ದಾಳೆ.. ವಿಷ ಸೇವಿಸಿರೋ ವಿಷ್ಯ ತಿಳಿಯುತ್ತಿದ್ದಂತೆ ಕುಟುಂಬದವರು ಕೂಡಲೇ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋದರಾದರೂ ನಿಶಾ ಉಳಿಯಲಿಲ್ಲ.
ಈ ಬಗ್ಗೆ ಮಾತಾಡಿರೋ ನಿಶಾ ಸೋದರಿ ರವಿ ಕಾವ್ಲೇ, ತನ್ನ ಸಹೋದರಿಯ ಸಾವಿಗೆ ಕಾರಣ ನಿಖಿಲ್. ಆತ ನಿಶಾಳನ್ನು ಪ್ರೀತಿಸಿ, ಮೋಸಮಾಡಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದನು. ಇದರಿಂದ ಕ್ರಿಮಿನಾಶಕ ಸೇವಿಸಿದ್ದಾಳೆ ಎಂದು ಹೇಳಿದ್ದಾರೆ. ಲಖಾಂದುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.