ಪೆಟ್ರೋಲ್, ಡೀಸೆಲ್ ದರ ಗಗನಕ್ಕೇರುತ್ತಿದ್ದು, ಭಾರತ ಮುಂದಿನ 5 ವರ್ಷಗಳಲ್ಲಿ ಎಲೆಕ್ಟ್ರಿಕಲ್ ಕಾರುಗಳ ಬಳಕೆ ಹೆಚ್ಚಿಸುವ ಗುರಿ ಹೊಂದಿದ್ದು, ಈ ಕಾರುಗಳ ಬಳಕೆ ಹೆಚ್ಚಿಸಲು ಯೋಜನೆಗಳನ್ನು ಹಾಕಿಕೊಂಡಿದೆ.
2019ರ ಆರಂಭದಲ್ಲೇ ಭಾರತದಲ್ಲಿ ಎಲೆಕ್ಟ್ರಿಕಲ್ ಕಾರು ಬಿಡುಗಡೆ ಆಗಲಿದೆ. ನಿಸಾನ್ ಲೀಫ್ ಎಲೆಕ್ಟ್ರಿಕಲ್ ಕಾರು ಹೊಸವರ್ಷದ ಆರಂಭದಲ್ಲಿಯೇ ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲಿದೆ.
ಈ ಕಾರನ್ನು ಒಮ್ಮೆ ಚಾರ್ಜ್ ಮಾಡಿದರೆ ಸಾಕು ನಿಶ್ಚಿಂತೆಯಿಂದ 250ಕಿಮೀ ಪ್ರಯಾಣಿಸಬಹುದು. ಈ ಕಾರಿನ ಬೆಲೆ ಭಾರತದ ಮಾರುಕಟ್ಟೆಯಲ್ಲಿ 50ಲಕ್ಷ ರೂ , ಆಗಿದ್ದು ಜನಸಾಮಾನ್ಯರು ಕೊಳ್ಳುವುದು ಕಷ್ಟವಾಗಿದೆ. ಕೇಂದ್ರ ಸರ್ಕಾರ ಎಲೆಕ್ಟ್ರಿಕಲ್ ಕಾರುಗಳಿಗೆ ಕನಿಷ್ಠ 1.5ಲಕ್ಷ ರೂ ಸಬ್ಸಿಡಿ ನೀಡಲಿದೆ.