ಕನ್ನಡ ಬಿಗ್ ಬಾಸ್ ಸೀಸನ್ 5 ಮುಗಿದು ಎಷ್ಟೋ ದಿನಗಳು ಕಳೆದಿವೆ. ಆದರೂ ಅದರ ಗುಂಗು ಇನ್ನೂ ಹಾಗೇ ಇದೆ.
ಬಿಗ್ ಬಾಸ್ ಮನೆಯ ಸ್ಪರ್ಧಿಗಳಾದ ವಿನ್ನರ್ ಚಂದನ್ ಶೆಟ್ಟಿ, ನಿವೇದಿತಾ ಗೌಡ , ಸಮೀರ್ ಆಚಾರ್ಯ, ದಿವಾಕರ್ ಒಳ್ಳೆಯ ಫ್ರೆಂಡ್ಸ್.
ಬಿಗ್ ಬಾಸ್ ಮನೆಯಿಂದ ಹೊರಬಂದಮೇಲೆಯೂ ಅವರ ಸ್ನೇಹ ಹಾಗೇ ಉಳಿದಿದೆ.
ಆದರೂ ಸಮೀರ್ ಆಚಾರ್ಯ ಅವರು ನಿವೇದಿತಾ ಅವರನ್ನು ಹುಡುಕಿಕೊಡುವಂತೆ ಪೊಲೀಸರ ಮೊರೆ ಹೋಗಿದ್ದಾರೆ…! ಹೌದು ಸಮೀರ್ ಮೈಸೂರಿಗೆ ಹೋಗಿ ನಿವೇದಿತಾ ಗೌಡ ಅವರ ಮನೆ ಎಲ್ಲಿ ಎಂದು ಪೊಲೀಸರಲ್ಲಿ ಕೇಳಿದ್ದಾರೆ. ಪೊಲೀಸರು ಕಂಟ್ರೋಲ್ ರೂಂ ಮೂಲಕ ಇಡೀ ಮೈಸೂರು ಕೇಳುವಂತೆ ನಿವೇದಿತಾ ಅವರ ಮನೆ ಎಲ್ಲಿ ಎಂದು ಪ್ರಕಟಿಸಿದ್ರು. ಬಳಿಕ ಸ್ವತಃ ನಿವೇದಿತಾ ಸಮೀರ್ ಅವರಿಗೆ ಕಾಲ್ ಮಾಡಿ ಮನೆ ಎಲ್ಲಿ ಎಂದು ಹೇಳಿದ್ರು. ಸಮೀರ್ ನಿವೇದಿತಾಗೆ ಸರ್ಪೈಸ್ ಕೊಡ್ಬೇಕಂತ ಹೀಗೆ ಮಾಡಿದ್ರು.