ಸತ್ತ ವ್ಯಕ್ತಿಯ ಶವ ಸಂಸ್ಕಾರಕ್ಕೆ ನೀಡ್ತಾ ಇಲ್ಲ ಒಂದಿಡಿ ಜಾಗ..?

Date:

ದಲಿತರ ಮೇಲೆ ನಿರಂತರ ಶೋಷಣೆ ನಡೀತಾ ಬರ್ತಿದೆ ಅನ್ನೋದಕ್ಕೆ ಮತ್ತೊಂದು ಉದಾಹರಣೆ ಸಿಕ್ಕಿದೆ ನೋಡಿ..! ದಲಿತ ವ್ಯಕ್ತಿಯೋರ್ವ ಮೃತ ಪಟ್ಟು ಇಂದಿಗೆ ಎರಡು ದಿನ ಆದ್ರೂ ಆತನ ದಫನು ಮಾಡೋಕೆ ಜಾಗ ಇಲ್ಲದೆ ಮನೆ ಮುಂದೆಯೇ ಶವವಿಟ್ಟುಕೊಂಡಿರುವ ಹೃದಯ ವಿದ್ರಾವಕ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ..!
ಜಿಲ್ಲೆಯ ಮಾಚೇನಹಳ್ಳಿಯ ನಿವಾಸಿಯಾಗಿರೋ ಚಿಕ್ಕ ಹನುಮಯ್ಯ (57) ಅನಾರೋಗ್ಯದಿಂದ ಸಾವನ್ನಪ್ಪಿದ್ದ. ಆದರೆ ಆತ ಸತ್ತು 2 ದಿನಗಳೇ ಮುಗೀತಾ ಬಂದ್ರೂ ಕೂಡ ಆತನ ಶವ ಹೂಳೋಕೆ ಜಾಗಾನೆ ಸಿಕ್ತಾ ಇಲ್ಲ..! ಈ ಕಾರಣದಿಂದ ಮೃತ ವ್ಯಕ್ತಿಯ ತಾಯಿ ಸುಮಾರು 75 ವರ್ಷದ ವೃದ್ದೆ ಎರಡು ದಿನಗಳಿಂದ ತನ್ನ ಹೆತ್ತ ಮಗನ ಶವ ಕಾಯ್ತಾ, ಸರ್ಕಾರದ ಸಹಾಯ ಹಸ್ತಕ್ಕಾಗಿ ಕಾಯ್ತಾ ಇದೆ..! ತಮ್ಮ ಪೂರ್ವಿಕರ ಆಸ್ತಿಯನ್ನ ಹಲವಾರು ವರ್ಷಗಳ ಹಿಂದೆಯೇ ಒಬ್ಬ ಮೇಲ್ಜಾತಿಯ ವ್ಯಕ್ತಿಗೆ ಕೇವಲ 200ರೂಗೆ ಮಾರಾಟ ಮಾಡಿದ್ರಂತೆ. ಆದ್ರೆ ಈಗ ಆ ಸ್ಥಳದಲ್ಲಿ ತನ್ನ ಮಗನ ಶವ ಸಂಸ್ಕಾರ ಮಾಡಲು ಕೊಂಡೋಯ್ದರೆ ಮಾನವೀಯತೆಯೆ ಇಲ್ಲದ ಆ ವ್ಯಕ್ತಿ ಹೆಣ ಹೂಳೋಕೆ ಬಿಡ್ತಾ ಇಲ್ಲ..! ಇದ್ರಿಂದ ದಿಕ್ಕು ತೋಚದ ಆ ವೈದ್ದೆ ಮಗನ ಶವವನ್ನು ಎರಡು ದಿನಗಳ ಕಾಲ ಮನೆಯ ಮುಂದೆಯೇ ಇಟ್ಟುಕೊಂಡಿದ್ದಾರೆ ನೋಡಿ..!
ಇನ್ನು ಈ ಗ್ರಾಮದ ಸುತ್ತಮುತ್ತಲ ಸಮುದಾಯಗಳಲ್ಲಿ ಇವರೊಬ್ಬರೆ ದಲಿತ ಕುಟುಂಬ. ಆ ಗ್ರಾಮದಲ್ಲಿ ಸ್ಮಶಾನವಿದ್ರೂ ಕೂಡ ದಲಿತರಿಗೆ ಅವಕಾಶ ನೀಡ್ತಾ ಇಲ್ಲ. ಇನ್ನು ಇದ್ದ ಜಮೀನು ಕೂಡ ಪರರ ವಶದಲ್ಲಿದೆ. ಹೀಗಿರುವಾಗ ತನ್ನ ಮಗನ ಶವ ಸಂಸ್ಕಾರ ಎಲ್ಲಿ ಮಾಡ್ಬೇಕು ಅಂತ ಆ ತಾಯಿಗೆ ಗೊತ್ತಾಗ್ತಾ ಇಲ್ಲ. ಕೊನೆಗೆ ತಮ್ಮ ಮನೆಯ ಮುಂದೆಯೇ ಅಂತ್ಯ ಸಂಸ್ಕಾರ ಮಾಡೋಕೆ ನಿರ್ಧರಿಸಿದ್ದಾರೆ..! ಚಿಕ್ಕ ಹನುಮಯ್ಯ ಸತ್ತು ಎರಡು ದಿನಗಳಾಗಿದ್ದು, ಮೃತದೇಹ ಕೊಳೆಯುವ ಸ್ಥಿತಿಗೆ ಬಂದು ಗಬ್ಬು ನಾರುತ್ತಿದೆ. ಹೀಗಿದ್ದರೂ ಕೂಡ ಆ ತಾಯಿ ಮಗನ ಶವ ಮುಂದೆ ಕುಳಿತು ಸಹಾಯ ಕೋರ್ತಾ ಇದ್ದಾಳೆ. ಇಷ್ಟೆಲ್ಲಾ ನಡೀತಾ ಇದ್ರೂ ಊರಿನ ಯಾವೊಬ್ಬ ವ್ಯಕ್ತಿಯೂ ಸಹಕಾರ ನೀಡಲು ಮುಂದಾಗಲಿಲ್ಲ ಅನ್ನೋದೆ ಶೋಚನೀಯ..! ಸ್ಥಳಿಯ ಪಂಚಾಯ್ತಿಗೂ ದೂರು ನೀಡಿದ್ರೂ, ಪೊಲೀಸರಿಗೆ ಮಾಹಿತಿ ಕೊಟ್ರೂ ಯಾವ ಪ್ರಯೋಜನವೂ ಆಗ್ಲಿಲ್ಲ. ಇದರಿಂದ ಮನನೊಂದ ಆ ತಾಯಿ ಈಗ ತನ್ನ ಮಗನ ಶವವನ್ನ ಮನೆಯ ಮುಂಭಾಗದಲ್ಲೆ ಅಂತ್ಯಕ್ರಿಯೆ ಮಾಡಲು ನಿರ್ಧರಿಸಿದ್ದಾಳೆ.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಕನ್ನಡಿಗರಿಗಿಲ್ಲಿದೆ ಶುಭ ಸುದ್ದಿ: ಖಾಸಗಿ ವಲಯದಲ್ಲಿ ಕನ್ನಡಿಗರಿಗೂ ಮೀಸಲಾತಿ

25 ಪೈಸೆಯಿಂದ ಲಕ್ಷಾಧಿಪತಿಯಾದ್ರು..! ಹೇಗೆ ಗೊತ್ತಾ..?

ಯುವತಿಯನ್ನು ನುಂಗಿದ ಮೊಸಳೆ..! ಅದರ ಅಸಲಿ ಕಥೆ ಏನು ಗೊತ್ತಾ..?

ಡ್ರೆಸ್ ಬಗ್ಗೆ ಕಮೆಂಟ್: ಗಂಡನ ಎದುರೆ ನಡೀತು ಪತ್ನಿಗೆ ಹಲ್ಲೆ..!

ಆವಲಬೆಟ್ಟ ಫೇಮಸ್ ಸ್ಪಾಟ್‍ಗೆ ಭೇಟಿ ಮಾಡೋಕು ಮುನ್ನ ಈ ಸ್ಟೋರಿ ಓದಿ..!

ಮೋದಿಗೆ ಪತ್ರ ಬರೆದು ಜಿಲ್ಲಾಡಳಿತಕ್ಕೆ ಶಾಕ್ ಕೊಟ್ಟ ನಮನ.! ಪತ್ರದಲ್ಲೇನಿತ್ತು.?

ಗುಡ್‍ನ್ಯೂಸ್ : ಆದಾಯ ತೆರಿಗೆ ಮಿತಿ 2.5 ಲಕ್ಷದಿಂದ 4 ಲಕ್ಷಕ್ಕೆ .?

Share post:

Subscribe

spot_imgspot_img

Popular

More like this
Related

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...