ಸಾವು ಎಲ್ಲಿ? ಹೇಗೆ? ಯಾವಾಗ ಬರುತ್ತೆ ಅಂತ ಹೇಳೋಕೆ ಆಗಲ್ಲ. ಮೊಬೈಲ್, ಚಾರ್ಜರ್ ಬ್ಲಾಸ್ಟ್ ಆಗಿ ಸಾವು ಸಂಭವಿಸಿದ ಹತ್ತಾರು ದುರ್ಘಟನೆಗಳು ನಮ್ಮ ಮುಂದಿವೆ. ಇದಕ್ಕೀಗ ಮತ್ತೊಂದು ಘಟನೆ ಸೇರ್ಪಡೆಯಾಗಿದೆ.
18ವರ್ಷದ ಯುವತಿ ಮೊಬೈಲ್ ಸ್ಪೋಟದಿಂದ ಸಾವನ್ನಪ್ಪಿದ್ದಾರೆ. ಈ ಘಟನೆ ನಡೆದಿರೋದು ಒಡಿಶಾದ ಕೆರಿಯಾಖಾನಿ ಜಿಲ್ಲೆಯಲ್ಲಿ.
ಉಮಾ ಒರಾಮ್ (18) ಮೃತೆ. ಇವರು ನೋಕಿಯಾ 5233 ಫೋನ್ ಅನ್ನು ಚಾರ್ಜ್ ಗೆ ಹಾಕಿದ್ದರು. ಅಷ್ಟರಲ್ಲಿ ಸಂಬಂಧಿಕರೊಬ್ಬರ ಫೋನ್ ಬಂದಿದೆ. ಅದನ್ನು ರಿಸೀವ್ ಮಾಡಿದಾಗ ಮೊಬೈಲ್ ಸ್ಪೋಟಿಸಿದೆ…! ಪರಿಣಾಮ ಮುಖ ಮತ್ತು ಕಾಲುಗಳು ಸುಟ್ಟಿದ್ದವು. ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.