ರಿಯೋ ಒಲಿಂಪಿಕ್ಸ್ ನಲ್ಲಿ ಸೋತ ನಾರ್ತ್ ಕೊರಿಯಾ ಕ್ರೀಡಾಪಟುಗಳಿಗೆ ಶಿಕ್ಷೆ ಏನು ಗೊತ್ತಾ..?

Date:

ರಿಯೋ ಒಲಿಂಪಿಕ್ಸ್ ನಲ್ಲಿ ಏಳು ಮೆಡಲ್ ಗಳನ್ನು ತನ್ನದಾಗಿಸಿಕೊಂಡಿರೋ ತನ್ನ ದೇಶದ ಅಥ್ಲಿಟ್ ಗಳ ಸಾಧನೆಯಿಂದ ನಾರ್ತ್ ಕೊರಿಯನ್ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಂತೋಷವಾಗಿಲ್ಲವಂತೆ. ನಮಗೆ ತಿಳಿದಿರೋ ಮಾಹಿತಿ ಪ್ರಕಾರ, ಈತನಿಗೆ ತನ್ನ ಅಥ್ಲಿಟ್ ಗಳು ಕನಿಷ್ಟ ಪಕ್ಷ 5 ಗೋಲ್ಡ್ ಮೆಡಲ್‍ಗಳನ್ನು ಇತರೆ ಹನ್ನೆರಡು ಮೆಡಲ್ ಗಳನ್ನು ತರಬೇಕಿತ್ತಂತೆ. ನಾರ್ತ್ ಕೊರಿಯದಿಂದ 31 ಅಥ್ಲಿಟ್ ಗಳನ್ನು ರಿಯೋ ಗೆ ಕಳುಹಿಸಲಾಗಿತ್ತಾದರೂ ಇವರಲ್ಲಿ ಹೇಗೋ 2 ಗೋಲ್ಡ್, 3 ಸಿಲ್ವರ್ ಹಾಗೂ ಎರಡು ಬ್ರಾಂಜ್ ಮೆಡಲ್ ಗಳನ್ನು ಪಡಕೊಳ್ಳುವಲ್ಲಿ ಈ ಅಥ್ಲಿಟ್ ಗಳು ಸಫಲರಾದರು. ಉಳಿದ ಅಥ್ಲಿಟ್ ಗಳು ಈ ಅಧಿಕಾರಿ ನೀಡೋ ಶಿಕ್ಷೆಗೆ ಗುರಿಯಾಗಬೇಕಂತೆ.
ವರದಿಯಂತೆ ಕೆಲವೊಂದು ಅಥ್ಲಿಟ್ ಗಳು ತುಂಬಾ ಒತ್ತಡಕ್ಕೊಳಗಾದ ಕಾರಣದಿಂದ ಅವರ ಪರ್‍ಫಾಮೆನ್ಸ್ ಮೇಲೆ ಪರಿಣಾಮ ಬೀರಿತ್ತಂತೆ. ಸರ್ವಾಧಿಕಾರಿಯನ್ನು ನಿರಾಶೆಗೊಳಿಸಿದ ಅಥ್ಲಿಟ್ ಗಳಿಗೆ ತೀರಾ ಏನೇನೂ ಸೌಕರ್ಯ ಗಳಿರದ ಮನೆಗಳು, ಕಡಿಮೆ ಭತ್ಯೆ ಹಾಗೂ ಕೋಲ್ ಮೈನ್ ಕಡೆಗೆ ಕಳುಹಿಸಲಾಗುವಂತಹ ಶಿಕ್ಷೆ ಯನ್ನು ನೀಡಲಾಗುತ್ತದಂತೆ. ಅದೇ ಮೆಡಲ್ ಗೆದ್ದವರಿಗೆ ಎಲ್ಲಾ ರೀತಿಯ ಸನ್ಮಾನಗಳು ಕಾರು, ಮನೆಗಳು ಹಾಗು ಹಲವು ತರಹದ ಉಡುಗೊರೆಗಳನ್ನು ನೀಡಲಾಗುವುದಂತೆ.
ಹಿಂದೆ 2010 ವರ್ಲ್ಡ್ ಕಪ್ ಫುಟ್ ಬಾಲ್ ಪಂದ್ಯದ ಸಂದರ್ಭದಲ್ಲಿ 7-0 ಪೋರ್ಚುಗೀಸ್ ಜೊತೆ ಸೋತಿದ್ದಕ್ಕೆ ನಾರ್ತ್ ಕೊರಿಯಾದ ಆಟಗಾರರಿಗೆ ಕಠಿಣ ಶಿಕ್ಷೆಯನ್ನು ವಿಧಿಸಲಾಗಿತ್ತಂತೆ. ಈ ಆಟಗಾರರಲ್ಲಿ ಕೆಲವರನ್ನು ಪುನಃ ತರಭೇತಿಗೆ ಕಳುಹಿಸಲಾಗಿತ್ತಾದರೆ,ಇನ್ನು ಕೆಲವರನ್ನು ಮೈನಿಂಗ್ ಗೆ ಕಳುಹಿಸಲಾಗಿತ್ತಂತೆ,ಇದಲ್ಲದೆ ಮೈನಿಂಗ್ ಕಳುಹಿಸಿದವರು ಒಂದು ಅಥವಾ ಎರಡು ವರುಷಗಳವರೆಗೂ ಹಿಂತಿರುಗಿ ಬರುವಂತಿರಲಿಲ್ಲವಂತೆ.
ಅಂತೂ ಮೆಡಲ್ ಗೆದ್ದವರ ಅದೃಷ್ಟವೋ ಗೆಲ್ಲದಿದ್ದವರ ದುರಾದೃಷ್ಟವೋ ಇವರುಗಳು ತಾಯ್ನಾಡಿಗೆ ಮರಳುತ್ತಿದ್ದಂತೆ ಇವರುಗಳು ರಿವಾರ್ಡ್ ಹಾಗೂ ಪನಿಶ್ಮೆಂಟ್ ಎರಡಕ್ಕೂ ಸಿದ್ದರಾಗಿರಬೇಕು.
ಫ್ರೆಂಡ್ಸ್! ಅದಕ್ಕೇ ನೋಡಿ “ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ” ಅಂತ ನಮ್ಮ ಭಾರತ ದೇಶವನ್ನು ಸ್ವರ್ಗ ಕ್ಕೆ ಹೋಲಿಸಿರೋದು.ಇಲ್ಲಿ ನಾವು ಗೆಲ್ಲಲಿ ಸೋಲಲಿ ನಮಗೆ ಎಂದೆಂದಿಗೂ ರಕ್ಷೆಯೆ ಹೊರತು ಶಿಕ್ಷೆ ಇರಲಾರದು. ನಿಜಕ್ಕೂ ಇಂತಹ ನೆಲದಲ್ಲಿ ಹುಟ್ಟಿದ ನಾವೇ ಪುಣ್ಯವಂತರು.

  • ಸ್ವರ್ಣಲತ ಭಟ್

POPULAR  STORIES :

ಚೈನೀಸ್ ಕಂಪನಿಗೆ ಸ್ಟಾರ್ಟ್ ಅಪ್ ಕಂಪನಿನ 6,000 ಕೋಟಿಗೆ ಮಾರಿ ಬಿಟ್ರಂತೆ ಮುಂಬಯಿ ಬ್ರದರ್ಸ್…!

ಪೊಲೀಸಪ್ಪನ ದೌರ್ಜನ್ಯ… ನೀವೂ ಸ್ವಲ್ಪ ನೋಡಿ..!

ಆಹಾರವನ್ನು ಕೈಯಲ್ಲೇ ಸೇವಿಸುವುದು ಉತ್ತಮ ಯಾಕೆ???

ಸರ್ಕಾರಿ ಹುದ್ದೆಗೆ ಜಸ್ಟ್ ಪಾಸಾದ್ರೆ ಸಾಕು..!

ನನ್ನ ಕಥೆ ಆರಂಭವಾದದ್ದೇ ಕದ್ದ ಒಂದು ಮೊಬೈಲ್‍ನ್ನು ಬಳಿಸಿದ್ದಕ್ಕೆ ಪೊಲೀಸ್ ಸ್ಟೇಷನ್ ಮೆಟ್ಟಿಲೇರೋ ಮೂಲಕ..

ನಿಷೇಧಗೊಂಡಿರುವ ಸೈಟ್ ವೀಕ್ಷಿಸಿದರೆ 3 ವರ್ಷ ಜೈಲು ಗ್ಯಾರಂಟಿ…!

ಮೋಸ್ಟ್ ಡೇಂಜರಸ್ ಫೋಟೋಗ್ರಫಿ ಕ್ಲಿಕ್ಸ್…ಈಕೆಯ ಈ ಹುಚ್ಚು ಶೋಕಿಗೆ ಏನನ್ನಬೇಕೋ???

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...