ಸುಮಾರು ಏಳು ವರುಷಗಳ ಹಿಂದೆ ನಾದ್ಯಾ ಸುಲೇಮಾನ್ ಎಂಬ ಅಮೇರಿಕಾದ ಮಹಿಳೆಯು,8 ಮಕ್ಕಳಿಗೆ ಜನ್ಮ ನೀಡುವುದರ ಮೂಲಕ ಪ್ರಪಂಚದೆಲ್ಲೆಡೆ ಸುದ್ದಿಯಾಗಿದ್ದಳು.ಈಕೆ ಅದೆಷ್ಟು ಜನರ ನೆನಪಿನಲ್ಲಿ ಇದ್ದಾಳೋ ಇಲ್ಲವೋ,ಆದ್ರೆ ಆಕೆಯಂತೂ ತನ್ನ 8 ಮಕ್ಕಳೊಂದಿಗೆ ತನ್ನ ಜೀವನ ಯಥಾ ಪ್ರಕಾರ ನಡೆಸುತ್ತಿದ್ದಾಳೆ.
ಕ್ಯಾಲಿಫೋರ್ನಿಯಾದ ಆಸ್ಪತ್ರೆಯೊಂದರಲ್ಲಿ 26,ಜನವರಿ,2009 ರಂದು ನಾದ್ಯಾ ಜನ್ಮ ವಿತ್ತ 8 ಮಕ್ಕಳಲ್ಲಿ 6 ಗಂಡು ಮಕ್ಕಳು- 2 ಹೆಣ್ಣು ಮಕ್ಕಳು.ಒಂದೇ ಬಾರಿಗೆ ಜನಿಸಿದ 8 ಮಕ್ಕಳು ಬದುಕಿ ಉಳಿದಿರೋದು ಪ್ರಪಂಚದಲ್ಲೇ ಮೊತ್ತಮೊದಲು ದಾಖಲಾದ ಘಟನೆಯಾಗಿದೆ.
ಈಕೆ ಓರ್ವ ನಿರುದ್ಯೋಗಿ ಯಾಗಿರುವುದಲ್ಲದೆ, ಪತಿಯಿಂದ ವಿಚ್ಛೇದಿತಳಾಗಿದ್ದಾಳೆ ಹಾಗೂ ಕೇವಲ ಜೀವನಾಂಶದೊಂದಿಗೆ ಬದುಕುತ್ತಿದ್ದಾಳೆ. ಈ 8 ಮಕ್ಕಳಿಗಿಂತಲೂ ಮೊದಲು ಆಕೆಗೆ 6 ಮಕ್ಕಳೂ ಜನಿಸಿದ್ದವು.ಎಲ್ಲಾ ಮಕ್ಕಳೂ IVF ಮೂಲಕ ಜನಿಸಿದ ಮಕ್ಕಳಾಗಿವೆ.ಈಕೆ Child and Adolescent Development, ವಿಷಯದಲ್ಲಿ ಪಧವೀಧರಳಾಗಿದ್ದುದಲ್ಲದೆ, ಇದರ ಸಂಬಂಧ ಇನ್ನೂ ಹೆಚ್ಚಿನ ವ್ಯಾಸಂಗ ಮಾಡುವವಳಿದ್ದಾಳಂತೆ.
ಈಕೆಗೆ ಯಾವ ಆರ್ಥಿಕ ಬಲವಿಲ್ಲದ ಕಾರಣ, ಕ್ಯಾಲಿಫೋರ್ನಿಯಾದಲ್ಲಿ ಆಕೆಯ ಈ ಮಕ್ಕಳನ್ನು ಹೆರುವ ವಿಚಾರದಲ್ಲಿ ಅನೇಕ ಸವಾಲುಗಳೆದ್ದಿದೆ. ಈಕೆಯ ಈ ಚಿಕಿತ್ಸೆಗೆ
ಸಹಕರಿಸಿದ ವೈದ್ಯನಾದ ಡಾ!ಮೈಕೆಲ್ ಕಾಮ್ರವಾ ನ ಈ ಕೆಟ್ಟ ಸಾಹಸಕ್ಕೆ ಈತನ ವೈದ್ಯಕೀಯ ಲೈಸನ್ಸ್ ನ್ನು ರದ್ದುಗೊಳಿಸಲಾಗಿದೆ. ಈತನು ನಾದ್ಯ ಸುಲೆಮಾನ್ 34 ವರುಷದವಳಿರುವಾಗ ಅವಳಲ್ಲಿ 12 ಭ್ರೂಣ ಗಳನ್ನು ಪ್ಲಾಂಟ್ ಮಾಡಿದ್ದಾನಂತೆ ಎಂಬ ಸತ್ಯ ಒಪ್ಪಿಕೊಂಡಿದ್ದಾನೆ. ನಾದ್ಯಳ ಬಗ್ಗೆ ಸತ್ಯ ಸಂಗತಿಯನ್ನು ತಿಳಿದ ಕ್ಯಾಲಿಫೋರ್ನಿಯಾ ಜನರ ಅನುಕಂಪ, ಕಾಳಜಿಯು ದ್ವೇಷದ ರೂಪ ತಾಳಿದೆ.ಅಲ್ಲಿನ ಜನರು ವಿಪರೀತವಾಗಿ ರೊಚ್ಚಿಗೆದ್ದು ಆಕೆಗೆ ಬೆದರಿಕೆ ನೀಡುತ್ತಿದ್ದಾರೆ.
ಹೇಗೋ ಏನೋ ನಾದ್ಯಾ ತನ್ನ 14 ಮಕ್ಕಳೊಂದಿಗೆ ಜೀವನದಲ್ಲಿ ಹೋರಾಟ ನಡೆಸುತ್ತಿದ್ದಾಳೆ.ಇಷ್ಟೆಲ್ಲಾ ಆದ ಮೇಲೆ ಆಕೆಗೆ ತನ್ನ ತಪ್ಪಿನ ಅರಿವಾಗಿದೆ.
2012 ರಲ್ಲಿ ಅಕೆಯು Octomom Home Alone ಎಂಬ ವಯಸ್ಕರ ಸಿನಿಮಾ ಒಂದರಲ್ಲಿ ಪಾತ್ರವನ್ನು ನಿಭಾಯಿಸಿದ್ದಾಳಲ್ಲದೆ,ಬೆಸ್ಟ್ ಸೆಲೆಬ್ರಿಟಿ ವೀಡಿಯೋ ಎಂಬ ಅವಾರ್ಡ್ ನ್ನು ತಗೊಂಡಿದ್ದಾಳೆ.
ನಾದ್ಯಾ ಈಗ ಜನ ಸಾಮಾನ್ಯರಿಂದ ದೂರ ವಾಗಿ ಎಲ್ಲೋ ವಾಸಿಸುತ್ತಿದ್ದಾಳೆ.ಅಕೆಯ ಇನ್ಸ್ಟಾಗ್ರಾಂ ಅಕೌಂಟ್ ಕೂಡಾ ಇದೆ.14 ಮಕ್ಕಳ ಅಮ್ಮನಾದ 41 ವರುಷದ ನಾದ್ಯಾ ಇನ್ನೂ ಯಂಗ್ ಯಾಂಡ್ ಫಿಟ್ ಆಗಿಯೇ ಇದ್ದಾಳಂತೆ.ಈಕೆಯ ಮಕ್ಕಳೊಂದಿಗಿನ ಫೋಟೋ ನೋಡಿ.
ಫ್ರೆಂಡ್ಸ್! ಏನಿದ್ರೆ ಏನು ಬಂತು?ಒಂದು ಮಗುವನ್ನು ಸಂಭಾಳಿಸಲು ಪೇಚಾಡುವ ಅಮ್ಮಂದಿರಿರೋ ಈ ಕಾಲದಲ್ಲಿ 14 ಮಕ್ಕಳೊಂದಿಗಿನ ಜೀವನ ಅಬ್ಬಬ್ಬಾ!ಈಕೆಯ ಈ ಹುಚ್ಚು ಬುದ್ದಿಗೆ ಇನ್ನು ಚಿಂತಿಸಿ ಫಲವೇನು???ಮಿಂಚಿ ಹೋದ ಸಮಯ ಮತ್ತೆ ಬರುವುದೇ???
- ಸ್ವರ್ಣಲತ ಭಟ್
POPULAR STORIES :
ನಿದ್ರೆ ಬಿಟ್ಟು ಜಿಯೋ 4ಜಿ ಫ್ರೀ ಸಿಮ್ ಪಡೆಯುತ್ತಿದ್ದಾರೆ ಗ್ರಾಹಕರು..!
ಟೆಸ್ಟ್ ನಲ್ಲಿ ಪಾಕ್ ನಂ1 ಪಟ್ಟ: ಕೋಹ್ಲಿಯನ್ನು ಲೇವಡಿ ಮಾಡಿದ ಪಾಕ್ ಅಭಿಮಾನಿಗಳು
ಬೆಳ್ಳಿತಾರೆ ಸಿಂಧು ಜೊತೆ ಜಾಹಿರಾತು ಒಪ್ಪಂದಕ್ಕಾಗಿ ಕಂಪನಿಗಳ ಪರೇಡ್..!
ಸುಲಭವಾಗಿ ಸಾಗಿಸಲು ಹೆಣದ ಮೂಳೆ ಮುರಿದು ಮುದ್ದೆ ಮಾಡಿದ್ದರು…!
ಲೈಫ್‍ನಲ್ಲಿ ಹೇಗೆ ಡಿಸಿಪ್ಲಿನ್ ಕಾಪಾಡೋದು,,? ಸ್ವಲ್ಪ ಜಪಾನಿಯರನ್ನ ನೋಡಿ..!
ಪತ್ನಿಯ ಮೃತ ದೇಹ ಹೊತ್ತು 10ಕಿ.ಮೀ ನಡೆದ..!
ರಿಯೋ ಒಲಿಂಪಿಕ್ಸ್ ನಲ್ಲಿ ಸೋತ ನಾರ್ತ್ ಕೊರಿಯಾ ಕ್ರೀಡಾಪಟುಗಳಿಗೆ ಶಿಕ್ಷೆ ಏನು ಗೊತ್ತಾ..?