ಪ್ರೇಯಸಿ ಮಾತಾನಾಡುತ್ತಿಲ್ಲ ಎಂದು ಪ್ರಿಯಕರ ಆಕೆಗೆ ಮದ್ಯ ಕುಡಿಸಿ, ಅತ್ಯಾಚಾರ ಎಸಗಿ, ಆಕೆಯ ಅಶ್ಲೀಲ ಫೋಟೋಗಳನ್ನು ತೆಗೆದು ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟ ಘಟನೆ ಒಡಿಶಾದ ರೈಮಾಲಾದಲ್ಲಿ ನಡೆದಿದೆ. ರಶಿಕೇಶ್ ಆರೋಪಿ.
ಡ್ರೈವರ್ ಆಗಿ ಕೆಲಸ ಮಾಡ್ತಿದ್ದ ರುಶಿಕೇಶ್ ಮಾತುಬಿಟ್ಟ ಪ್ರೇಯಸಿ ವಿರುದ್ಧ ಸೇಡು ತೀರಿಸಿಕೊಳ್ಳಲು ಈ ರೀತಿ ಮಾಡಿದ್ದಾನೆಂದು ಹೇಳಲಾಗಿದ್ದು, ಸ್ವತಃ ಪೊಲೀಸರ ಮುಂದೆ ತಪ್ಪನ್ನು ಒಪ್ಪಿಕೊಂಡಿದ್ದಾನೆ.
ಆಕೆಗೂ ನಂಗೂ ಸಂಬಂಧವಿತ್ತು. ನನ್ನ ಹತ್ತಿರ ಹಣ ಕೂಡ ಪಡೆದಿದ್ದಳು. ಕೆಲವು ದಿನಗಳಿಂದ ಆಕೆ ನನ್ನೊಡನೆ ಮಾತಾಡ್ತಿರ್ಲಿಲ್ಲ. ಅದಕ್ಕೆ 31 ರಂದು ಫೋಟೋ ವೈರಲ್ ಮಾಡಿರುವುದಾಗಿ ರಿಶಿಕೇಶ್ ತಿಳಿಸಿದ್ದಾನೆ.