ಮಗುವಿನ ಚಿಕಿತ್ಸೆಗಾಗಿ ರಿಯೋ ಪದಕವನ್ನೇ ಮಾರಾಟಕ್ಕಿಟ್ಟ ಅಥ್ಲೀಟ್..!

Date:

ಕ್ರೀಡಾ ಪಟುಗಳು ಯಾವ ಯಾವ ರೀತಿಯಲ್ಲಿ ಮಾನವೀಯತೆ ಮೆರೆಯುತ್ತಾರೆ ಅನ್ನೋದಕ್ಕೆ ಈ ಸ್ಟೊರಿಯೇ ಸೂಕ್ತ ಉದಾಹರಣೆ. ತಮ್ಮ ದೇಶದ ಒಂದು ಪುಟ್ಟ ಕಂದಮ್ಮನ ಜೀವ ಉಳಿಸಲು ಪ್ರಸಕ್ತ ವರ್ಷದಲ್ಲಿ ಗೆದ್ದ ಒಲಂಪಿಕ್ ಪದಕವನ್ನೇ ಮಾರಾಟಕ್ಕಿಟ್ಟಿದ್ದಾನೆ ಈ ಮಹಾನುಭಾವ..!
ಹೌದು.. ಈ ಬಾರಿಯ ರಿಯೋ ಒಲಂಪಿಕ್‍ನ ಡಿಸ್ಕಸ್ ಥ್ರೋ ವಿಭಾಗದಲ್ಲಿ ಬೆಳ್ಳಿಯ ಪದಕ ವಿಜೇತ ಪೊಲೀಶ್ ದೇಶದ ಪಿಯೋತ್ರ್ ಮಲಚೌಷ್ಕಿ ಅವರು ಕ್ಯಾನ್ಸರ್ ಪೀಡಿತ 3 ವರ್ಷದ ಬಾಲಕನ ಚಿಕಿತ್ಸೆಗಾಗಿ ತಾನು ಗೆದ್ದ ಬೆಳ್ಳಿ ಪದಕವನ್ನೇ ಮಾರಾಟ ಮಾಡಿ ಮಾನವೀಯತೆ ಮೆರೆದಿದ್ದಾನೆ.
ಈ ಕುರಿತು ತನ್ನ ಫೇಸ್ ಬುಕ್ ಪೇಜ್‍ನಲ್ಲಿ ಬರೆದುಕೊಂಡಿರುವ 33 ವರ್ಷದ ಪಿಯೋತ್ರ್, ಒಲೆಕ್ ಎಂಬ ಪುಟ್ಟ ಬಾಲಕ ತನ್ನ ಎಳೆಯ ವಯಸ್ಸಿನಲ್ಲೇ ಎರಡು ವರ್ಷಗಳಿಂದ ಕಣ್ಣಿನ ಕ್ಯಾನ್ಸರ್‍ಗೆ ತುತ್ತಾಗಿದ್ದಾನೆ, ಆತನ ಚಿಕಿತ್ಸೆಗೆ ನಮ್ಮಲ್ಲಿ ದೊಡ್ಡ ಪ್ರಮಾಣದಲ್ಲಿ ಹಣವಿಲ್ಲದ ಕಾರಣ ನೀವು ನಮಗೆ ಸಹಾಯ ನೀಡಿ ಎಂದು ಆ ಬಾಲಕನ ತಾಯಿ ಪತ್ರ ಬರೆದಿದ್ದರು.
ನಾನು ರಿಯೋ ಒಲಂಪಿಕ್‍ನಲ್ಲಿ ಚಿನ್ನಕ್ಕಾಗಿ ಹೋರಾಟ ನಡೆಸಿದ್ದೇನೆ, ಆದರೆ ನಿಜ ಜೀವನದಲ್ಲಿ ಜನರು ತಮ್ಮ ಅಮೂಲ್ಯವಾದ ಜೀವಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ ಎಂದು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಬರೆದಿಕೊಂಡಿರುವ ಅವರು ತಾನು ಗೆದ್ದ ಸಿಲ್ವರ್ ಮೆಡಲ್ ಮಾರಾಟಕ್ಕಿದೆ ಎಂದು ಹೇಳಿಕೊಂಡಿದ್ದಾರೆ. ನೀವು ನನ್ನ ಬೆಳ್ಳಿಯ ಪದಕವನ್ನು ಕೊಳ್ಳುವುದರಿಂದ ಆ ಪುಟ್ಟ ಬಾಲಕ ಒಲೆಕ್‍ನ ಜೀವನ ಬಂಗಾರದಂತೆ ಪ್ರಜ್ವಲಿಸುತ್ತದೆ ಎಂದು ಹೇಳಿಕೊಂಡಿದ್ದಾರೆ.

POPULAR  STORIES :

ಸುಲಭವಾಗಿ ಸಾಗಿಸಲು ಹೆಣದ ಮೂಳೆ ಮುರಿದು ಮುದ್ದೆ ಮಾಡಿದ್ದರು…!

ಲೈಫ್‍ನಲ್ಲಿ ಹೇಗೆ ಡಿಸಿಪ್ಲಿನ್ ಕಾಪಾಡೋದು,,? ಸ್ವಲ್ಪ ಜಪಾನಿಯರನ್ನ ನೋಡಿ..!

ಪತ್ನಿಯ ಮೃತ ದೇಹ ಹೊತ್ತು 10ಕಿ.ಮೀ ನಡೆದ..!

ರಿಯೋ ಒಲಿಂಪಿಕ್ಸ್ ನಲ್ಲಿ ಸೋತ ನಾರ್ತ್ ಕೊರಿಯಾ ಕ್ರೀಡಾಪಟುಗಳಿಗೆ ಶಿಕ್ಷೆ ಏನು ಗೊತ್ತಾ..?

ಚೈನೀಸ್ ಕಂಪನಿಗೆ ಸ್ಟಾರ್ಟ್ ಅಪ್ ಕಂಪನಿನ 6,000 ಕೋಟಿಗೆ ಮಾರಿ ಬಿಟ್ರಂತೆ ಮುಂಬಯಿ ಬ್ರದರ್ಸ್…!

ಪೊಲೀಸಪ್ಪನ ದೌರ್ಜನ್ಯ… ನೀವೂ ಸ್ವಲ್ಪ ನೋಡಿ..!

ಆಹಾರವನ್ನು ಕೈಯಲ್ಲೇ ಸೇವಿಸುವುದು ಉತ್ತಮ ಯಾಕೆ???

Share post:

Subscribe

spot_imgspot_img

Popular

More like this
Related

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ: ಸಿಎಂ ಸಿದ್ದರಾಮಯ್ಯ

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ:...

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ ಬೆಂಗಳೂರು: ರಾಜ್ಯದ...

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ ಬೆಂಗಳೂರು:...

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ ಗಂಭೀರ ಗಾಯ

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ...