ಓಂಕಾರಕ್ಕೆ ಮಹತ್ವ ಕೊಡೋದು ಯಾಕ್ ಗೊತ್ತಾ?
ಜಾತಿ, ಧರ್ಮ, ಲಿಂಗ ಬೇಧವಿಲ್ಲದೆ ಓಂಕಾರಕ್ಕೆ ಮಹತ್ವ ನೀಡಲಾಗಿದೆ. ಇದು ಜಗತ್ತಿನಾದ್ಯಂತ ಪ್ರಾಮುಖ್ಯತೆ ಪಡೆದಿರುವ ಪದ.
ಓಂ..ಓಂಕಾರಕ್ಕೆ ಇಷ್ಟೆಲ್ಲಾ ಮಹತ್ವ ಕೊಡೋದು ಯಾಕೆ?
ಓಂಕಾರ ಮೂರು ಅಕ್ಷರದಿಂದ ಕೂಡಿದೆ. ಅ ಎಂದರೆ ಇಂದ್ರಿಯಗಳ ಮೂಲಕ ಹೊರಗಿನ ಪ್ರಪಂಚವನ್ನು ಅನುಭವಕ್ಕೆ ತಂದುಕೊಳ್ಳೋದು, ‘ಉ’ ಎಂಬ ಪದದ ಅರ್ಥ ಕನಸಿನ ಜಗತ್ತು. ‘ಮ’ ಎಂಬುದು ನಿದ್ರಾ ಸ್ಥಿತಿಯ ಸೂಚಕ. ಅಂದರೆ ಯಾವ್ದೇ ರೀತಿಯ ಆಸೆ, ಆಕಾಂಕ್ಷೆ ಇಲ್ಲದಿರೋದು.
ಬ್ರಹ್ಮ, ವಿಷ್ಣು,ಮಹೇಶ್ವರರನ್ನು ಸೂಚಿಸುವ ಪದ ಓಂಕಾರ. ಇದು ಮೂರು ಶಕ್ತಿಯ ಪ್ರತೀಕ ಕೂಡ ಹೌದು.
ಓಂಕಾರವನ್ನು ಪಠಿಸಿದಾಗ 432Hz ಮಟ್ಟದ ಧ್ವನಿ ಹೊರಹೊಮ್ಮುತ್ತದೆ. ಇದು ನಮ್ಮ ಪ್ರಕೃತಿಯಲ್ಲಿನ ಪ್ರತಿಯೊಂದು ವಸ್ತುಗಳಿಂದ ಹೊರಹೊಮ್ಮುವ ಒಟ್ಟು ತರಂಗಕ್ಕೆ ಸಮ..! ಇದ್ರಿಂದ ನಮ್ಮ ಪ್ರಜ್ಞೆಯ ಸಾಮಾನ್ಯ ಸ್ಥಿತಿಯು ಜಗತ್ತಿನ ಶಕ್ತಿಯೊಂದಿಗೆ ಸೇರಲು ಸಹಾಯವಾಗುತ್ತೆ ಎಂದು ತಿಳಿದು ಬಂದಿದೆ.