ಭಾರತೀಯರಿಗೊಂದು ಇಲ್ಲಿದೆ ನೋಡಿ ಸಿಹಿ ಸುದ್ದಿ..! ವಿಶ್ವ ಪ್ರಸಿದ್ದ ಆಕ್ಸ್ಫಡ್ ಇಂಗ್ಲೀಷ್ ಪದಕೋಶ ಗ್ರಂಥದಲ್ಲಿ ದಕ್ಷಿಣ ಭಾರತದ ಸಾಮಾನ್ಯ ಆಡು ಪದಗಳನ್ನು ಸೇರ್ಪಡೆ ಮಾಡಲಾಗಿದೆ.. ಪ್ರತೀ ವರ್ಷ ‘ಓಇಡಿ’ ಯಲ್ಲಿ ನಾಲ್ಕು ಹೊಸ ಹೊಸ ಶಬ್ದ ಕೋಶವನ್ನು ಸೇರ್ಪಡೆ ಮಾಡುತ್ತಾರೆ. ಅದರಂತೆ ಈ ಬಾರಿ ನಮ್ಮ ಭಾರತೀಯ ಆಡು ಬಾಷೆಯ ಎರಡು ಪದಗಳನ್ನು ಓಇಡಿಯಲ್ಲಿ ಬಳಕೆ ಮಾಡಿಕೊಂಡಿರೋದು ಇಡೀ ದೇಶಕ್ಕೆ ಹೆಮ್ಮೆಯ ವಿಷಯವಾಗಿದೆ. ಇನ್ನು ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ಬಳಕೆಯಲ್ಲಿರುವ Aiyoh ಮತ್ತು Aiyah ಪದಗಳನ್ನು ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಸೆರ್ಪಡೆ ಮಾಡಲಾಗಿದೆ. ಸೌತ್ ಹಾಗೂ ನಾರ್ತ್ ಇಂಡಿಯನ್ ಭಾಗಗಳಲ್ಲಿ ಹೆಚ್ಚಾಗಿ ಬಳಕೆಯಲ್ಲಿರುವ ಈ ಸಾಮಾನ್ಯ ಪದಗಳಿಗೆ ನಿರ್ದಿಷ್ಠವಾದ ಅರ್ಥ ಇಲ್ಲ ಎಂದು ಸಹ ಹೇಳಲಾಗುತ್ತಿದ್ದು, ಈ ಎರಡೂ ಪದಗಳು ನಾವು ಮಾಡುವ ಉಚ್ಚರಣೆಯಲ್ಲಿ ನಿರ್ಧರಿಸಲ್ಪಡುತ್ತದೆ ಎನ್ನಲಾಗ್ತಾ ಇದೆ. ಇನ್ನು ಆಕ್ಸ್ಫರ್ಡ್ ಇಂಗ್ಲೀಷ್ ಡಿಕ್ಷನರಿಯಲ್ಲಿ ಭಾರತದ ಎರಡು ಆಡುಭಾಷೆಗಳನ್ನು ಸೇರ್ಪಡೆಯಾಗಿರುವ ಕುರಿತಾಗಿ ಹೇಳಿರುವ ಸಂಪಾದಕರು ಹಾಗೂ ಬರಹಗಾರರಾದ ಶೈಲಜಾ ವಿಶ್ವನಾಥ್ ಭಾರತೀಯರಿಗೆಲ್ಲರಿಗೂ ಇದೊಂದು ಸಂತಸದ ಸುದ್ದಿ ಎಂದು ಹೇಳಿದ್ದಾರೆ.. ಯಾವುದೇ ನಿರ್ದಿಷ್ಟ ಅರ್ಥ ನೀಡದ ಈ ಎರಡೂ ಪದಗಳು ಸಾಮಾನ್ಯವಾಗಿ ಅಚ್ಚರಿಗೊಂಡಾಗ, ದುಃಖದ ಸಂದರ್ಭದಲ್ಲಿ ನೋವಾದಾಗ ಅಥವಾ ನಿರಾಶೆಯ ಸಂದರ್ಭದಲ್ಲಿ ಈ ಎರಡೂ ಪದಗಳು ತಾನಾಗಿಯೇ ಉಚ್ಚರಿಸಲ್ಪಡುತ್ತದೆ.
ಕೇವಲ ಭಾರತದಲ್ಲಿ ಮಾತ್ರವಲ್ಲದೇ ಈ ಎರಡು ಪದಗಳನ್ನು ಚೀನಾದ ಉಪ ಭಾಷೆಗಳಾದ ಮಾಂಡರಿನ್ ಹಾಗೂ ಕಾಂಟೋನಿಸ್‍ಗಳಲ್ಲೂ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಭಾರತದಲ್ಲಿ ದಕ್ಷಿಣ ಭಾರತದ ತಮಿಳು ಭಾಷೆಯಲ್ಲಿ ಬಳಸುವುದು ಕಾಣಬಹುದು. ಅಲ್ಲದೇ ಮಲೇಷ್ಯಾ, ಸಿಂಗಪೂರ್ ಹಾಗೂ ದಕ್ಷಿಣ ಏಷ್ಯಾಗಳಲ್ಲೂ ಕೂಡ ಇವರೆಡು ಪದಗಳ ಬಳಕೆ ಆಚರಣೆಯಲ್ಲಿದೆ.
POPULAR STORIES :
ಏಳು ಸಾವಿರ ವರ್ಷಗಳ ಹಿಂದಯೇ ಏಲಿಯನ್ಸ್ ವಿಮಾನ ನಿಲ್ದಾಣ ನಿರ್ಮಿಸಿಕೊಂಡಿದ್ವು : ಇರಾಕ್ ಸಚಿವ..!
ಇನ್ನು ಕೆಲವೇ ದಿನಗಳಲ್ಲಿ ಶಿರಾಡಿ ಘಾಟ್ ಬಂದ್..!
ನಾನು ನಿನ್ನ ಮದ್ವೆ ಆಗ್ತೀನಿ.. ಅಂದಿದಕ್ಕೆ ತಲೆ ತಿರುಗಿ ಬಿದ್ಲು ನಾರಿ..! ಯಾಕೆ ಗೊತ್ತಾ..
ನೀವು ಕುಡಿಯೋದು ಕೂಲ್‍ಡ್ರಿಂಕ್ಸ್ ಅಲ್ಲ ಬದಲಾಗಿ ವಿಷ..!
ಧೋನಿ ಚಿತ್ರದಲ್ಲಿ ಸ್ವಂತ ಅಣ್ಣನ ಪಾತ್ರವೇ ಇಲ್ಲ ಯಾಕೆ ಗೊತ್ತಾ..?
ಮತ್ತೊಂದು ಮದುವೆ ವದಂತಿ ಸುಳ್ಳು: ರಾಧಿಕಾ ಕುಮಾರ ಸ್ವಾಮಿ.
24ರ ಹರೆಯದ ಯುವತಿ 68ರ ತಾತನ ಅಚ್ಚರಿಯ ಜುಗಲ್‍ಬಂಧಿ…!
ಲೋಧಾ ಶಿಫಾರಸ್ಸು ಉಲ್ಲಂಘನೆ: 3ನೇ ಟೆಸ್ಟ್ ಪಂದ್ಯ ನಡೆಯೋದು ಬಹುತೇಕ ಡೌಟ್..?