ತೆನೆ ಹೊತ್ತ ರಮೇಶ್ ಗೆ ‘ಜೈ’ ಎನ್ನುತ್ತಿದ್ದಾರೆ ಸಿ ವಿ ರಾಮನ್ ನಗರದ ಜನ…!

Date:

ರಾಜ್ಯದಲ್ಲಿ ಚುನಾವಣೆಯ ರಂಗು ಕಾವೇರಿದೆ.‌ ಚುನಾವಣಾ ಪ್ರಚಾರ ಜೋರಾಗಿ ನಡೆಯುತ್ತಿದೆ. ಬೆಂಗಳೂರಿನ ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿರುವ ಸಿ ವಿ ರಾಮನ್ ನಗರದಲ್ಲಿ ಹಾಲಿ ಶಾಸಕ ಬಿಜೆಪಿಯ ಎಸ್ ರಘು ಅವರಿಗೆ ಪ್ರಬಲ ಸ್ಪರ್ಧಿಯಾಗಿ ಜೆಡಿಎಸ್ ನ ಪಿ ರಮೇಶ್ ಕಣದಲ್ಲಿದ್ದಾರೆ. ಕಾಂಗ್ರೆಸ್ ನಿಂದ ಹೊರಬಂದು ತೆನೆ ಹೊತ್ತಿರುವ ಪಿ. ರಮೇಶ್ ಅವರಿಗೆ ಜನಾಶೀರ್ವಾದ ಬಹುತೇಕ ಖಚಿತ ಎನ್ನಲಾಗುತ್ತಿದೆ.


ರಮೇಶ್ ಅವರು ವಿದ್ಯಾರ್ಥಿ ದೆಸೆಯಿಂದಲೂ ರಾಜಕೀಯದ ನಂಟು ಉಳ್ಳವರು. ತಮ್ಮ 19ನೇ ವಯಸ್ಸಲ್ಲೇ ನಾಯಕತ್ವ ಗುಣ, ಸಂಘಟನಾ ಚಾತುರ್ಯದಿಂದ ಗಮನ ಸೆಳೆದು ವಿದ್ಯಾರ್ಥಿ ಮುಖಂಡರಾಗಿ ಗುರುತಿಸಿಕೊಂಡವರು.
ಇವರ ಸಮಾಜ ಮುಖಿ ಕೆಲಸಗಳಿಂದ‌ ಜನ ಇವರನ್ನು ಮೆಚ್ಚಿದ್ದಾರೆ.


2013 ರಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೂ ವಿಜಯ ಲಕ್ಷ್ಮಿ ಒಲಿದಿರಲಿಲ್ಲ. ಆದರೆ, ತಾನು ಶಾಸಕನಾಗಿಲ್ಲ ಎಂದು ಕೈಕಟ್ಟಿ ಕುಳಿತುಕೊಳ್ಳದ ಇವರು ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿಯೂ ಶ್ರಮಿಸುತ್ತಾ ಬಂದಿದ್ದಾರೆ.
ಹಿಂದೆ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಇವರು ಸರ್ಕಾರದ ಯೋಜನೆಗಳನ್ನು ಸಿ ವಿ ರಾಮನ್ ನಗರ ಕ್ಷೇತ್ರಕ್ಕೆ ನ್ಯಾಯಯುತವಾಗಿ ತರುವಲ್ಲಿ ಯಶಸ್ವಿಯಾಗಿದ್ದಾರೆ.‌ಈ ಕ್ಷೇತ್ರದ ಅಷ್ಟೂ 7 ವಾರ್ಡ್ ಗಳಲ್ಲೂ ಇಂದಿರಾ ಕ್ಯಾಂಟಿನ್ ತೆಗೆಯುವಲ್ಲಿ ಇವರ ಪಾತ್ರ ಬಹುಮುಖ್ಯವಾದುದು.


ತಮ್ಮ ಕ್ಷೇತ್ರದ ಎಲ್ಲಾ ವಾರ್ಡ್ ಗಳಲ್ಲೂ ರೇಷನ್ ಕಾರ್ಡ್ ಹಂಚುವಿಕೆ, ಹೆಲ್ತ್ ಕ್ಯಾಂಪ್ , ಉದ್ಯೋಗ ಮೇಳಗಳನ್ನು ಇವರು ನಡೆಸುತ್ತಲೇ ಬಂದಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದು, ಸಿ ವಿ ರಾಮನ್ ನಗರದಲ್ಲಿ ಪಕ್ಷವನ್ನು ಗಟ್ಟಿ‌ಮಾಡಿದ್ದ ಇವರಿಗೆ ಪಕ್ಷದಿಂದ ಸಿಗಬೇಕಾದ ಗೌರವ ಸಿಗಲಿಲ್ಲ ಎಂಬ ಆರೋಪ ಕೂಡ ಇದೆ. ಇದೇ ಕಾರಣದಿಂದ ಪಕ್ಷ ತೊರೆದು ಜೆಡಿಎಸ್ ಸೇರಿದ್ದಾರೆ.


ಬಿಜೆಪಿಯ ಅಭ್ಯರ್ಥಿ ಹಾಗೂ ಹಾಲಿ ಶಾಸಕರಾದ ಸಿ ರಘು ಹಾಗೂ ಕಾಂಗ್ರೆಸ್ ನ ಸಂಪತ್ ರಾಜ್ ಅವರಿಗೆ ಪಿ.ರಮೇಶ್ ಪ್ರಬಲ ಸ್ಪರ್ಧಿ‌ . ಸಿ ವಿ ರಾಮನ್ ನಗರದ ಜನಾಭಿಪ್ರಾಯದಂತೆ ಈ ಬಾರಿ ರಮೇಶ್ ಅವರ ಗೆಲುವು ನಿಶ್ಚಿತ.
ನೀರಿನ ಸಮಸ್ಯೆಯನ್ನು ನಿವಾರಿಸಲು ಸ್ವತಃ ವಾಟರ್ ಟ್ಯಾಂಕ್ ಮೂಲಕ ಕ್ಷೇತ್ರದ ವಿವಿಧ ವಾರ್ಡ್ ಗಳಿಗೆ ನೀರು ಪೂರೈಸಿದ್ದಾರೆ. ಕುಡಿಯುವ ನೀರಿಗಾಗಿ ಹೊಸದಾಗಿ ಪೈಪ್ ಲೈನ್ ಹಾಕಿಸಿಕೊಟ್ಟಿದ್ದಾರೆ.


ಅಂಗನವಾಡಿ ಹಾಗೂ ಸರ್ಕಾರಿ ಶಾಲೆಗಳಿಗೆ ಶೌಚಾಲಯ ವ್ಯವಸ್ಥೆ ಮಾಡಿಸಿಕೊಟ್ಟಿದ್ದಾರೆ. ಬಡ‌ ಮಕ್ಕಳಿಗೆ ಆರ್ಥಿಕ ಸಹಾಯ ಮಾಡಿದ್ದಾರೆ. ಪುಸ್ತಕಗಳ‌ನ್ನು ನೀಡಿ ವಿದ್ಯಾಭ್ಯಾಸಕ್ಕೆ ನೆರವಾಗುತ್ತಿದ್ದಾರೆ. ಹೀಗೆ ಅನೇಕ ಕೆಲಸಗಳ ಮೂಲಕ ಕ್ಷೇತ್ರದ ಜನರ ಮನಗೆದ್ದಿದ್ದಾರೆ.
ಅಧಿಕಾರ ಇರದೇ ಇರುವಾಗಲೇ ಇಷ್ಟೆಲ್ಲಾ ಕೆಲಸ ಮಾಡಿರುವ ಇವರು , ಅಧಿಕಾರ ಸಿಕ್ಕರೆ ಎಷ್ಟೆಲ್ಲಾ ಕೆಲಸ ಮಾಡಬಲ್ಲರು? ಈ ಬಾರಿ ಪಿ. ರಮೇಶ್ ಅವರೇ ನಮ್ಮ ಶಾಸಕರು ಎನ್ನುತ್ತಾರೆ ಈ ಭಾಗದ ಮತದಾರರು.

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಘೋರ ಘಟನೆ: ಇಬ್ಬರು ಮಕ್ಕಳ ಕೊಂದು ತಾಯಿ ಆತ್ಮಹತ್ಯೆ!

ಬೆಂಗಳೂರಿನಲ್ಲಿ ಘೋರ ಘಟನೆ: ಇಬ್ಬರು ಮಕ್ಕಳ ಕೊಂದು ತಾಯಿ ಆತ್ಮಹತ್ಯೆ! ಬೆಂಗಳೂರು: ಬಾಗಲಗುಂಟೆ...

Bangalore: ಬಾರ್‌ʼನಲ್ಲಿ ಕುಡಿಯಲು ಹೋದ ವ್ಯಕ್ತಿ ನಿಗೂಢ ಸಾವು!

Bangalore: ಬಾರ್‌ʼನಲ್ಲಿ ಕುಡಿಯಲು ಹೋದ ವ್ಯಕ್ತಿ ನಿಗೂಢ ಸಾವು! ಬೆಂಗಳೂರು: ಬಾರ್‌ಗೆ ಕುಡಿಯಲು...

ಬೆಂಗಳೂರು ಸೇರಿ 13 ಜಿಲ್ಲೆಗಳಲ್ಲಿ ಧಾರಾಕಾರ ಮಳೆ: ಹವಾಮಾನ ಇಲಾಖೆ 

ಬೆಂಗಳೂರು ಸೇರಿ 13 ಜಿಲ್ಲೆಗಳಲ್ಲಿ ಧಾರಾಕಾರ ಮಳೆ: ಹವಾಮಾನ ಇಲಾಖೆ  ಬೆಂಗಳೂರು: ರಾಜ್ಯದ...

ಹೃದಯ ಸಮಸ್ಯೆ ಇದ್ದವರಿಗೆ ದಾಳಿಂಬೆ ಬೆಸ್ಟ್ ಅಂತೆ; ನೀವು ಕೂಡ ತಪ್ಪದೇ ಸೇವಿಸಿ

ಹೃದಯ ಸಮಸ್ಯೆ ಇದ್ದವರಿಗೆ ದಾಳಿಂಬೆ ಬೆಸ್ಟ್ ಅಂತೆ; ನೀವು ಕೂಡ ತಪ್ಪದೇ...