ತನ್ನ ಮೇಲೆ 16 ವರ್ಷದವಳಾಗಿದ್ದಾಗಲೇ ಲೈಂಗಿಕ ದೌರ್ಜನ್ಯ ನಡೆದಿತ್ತು ಅಂತ ಮಾಡೆಲ್ ಒಬ್ಬರು ಬರೋಬ್ಬರಿ 32 ವರ್ಷದ ಬಳಿಕ ಬಹಿರಂಗ ಪಡಿಸಿದ್ದಾರೆ!
ಅಮೆರಿಕಾದ ಮಾಡೆಲ್, ಲೇಖಕಿ 48 ವರ್ಷದ ಪದ್ಮಲಕ್ಷ್ಮೀ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು ಎಂಬ ಸತ್ಯವನ್ನು ಇದೀಗ ಬಿಚ್ಚಿಟ್ಟಿರುವವರು.
ಲಾಸ್ ಏಂಜಲೀಸ್ ನಲ್ಲಿರುವಾಗ ವ್ಯಕ್ತಿಯೊಬ್ಬನ ಜೊತೆ ಡೇಟಿಂಗ್ ನಲ್ಲಿ ಇದ್ದೆ. ಡೇಟಿಂಗ್ ಮಾಡಿದ ಕೆಲವೇ ತಿಂಗಳಲ್ಲಿ ಹೊಸ ವರ್ಷದ ಹಿಂದಿನ ದಿನ ಆ ವ್ಯಕ್ತಿಯಿಂದ ನಾನು ಅತ್ಯಾಚಾರಕ್ಕೆ ಒಳಗಾಗಿದ್ದೆ ಎಂದು ನ್ಯೂ ಯಾರ್ಕ್ ಟೈಮ್ಸ್ ನಲ್ಲಿ ತಮ್ಮ ಲೇಖನದ ಮೂಲಕ ತಿಳಿಸಿದ್ದಾರೆ.
ಅಮೆರಿಕಾದ ಸುಪ್ರೀಂಕೋರ್ಟ್ ನಾಮನಿರ್ದೇಶಿತ ನ್ಯಾಯಮೂರ್ತಿ ಬ್ರೆಟ್ ಕವಾನಾಗ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿರೋ ಕಾರಣ, ತನಗಾದ ಕೆಟ್ಟ ಅನುಭವವನ್ನು ಹಂಚಿಕೊಳ್ಳುತ್ತಿರೋದಾಗಿ ಅವರು ಹೇಳಿದ್ದಾರೆ.
7 ವರ್ಷದವಳಿದ್ದಾಗ ಮಲತಂದೆಯ ಸಂಬಂಧಿಯೊಬ್ಬರು ಅಶ್ಲೀಲವಾಗಿ ಮುಟ್ಟಿದ್ದರು. ಇದನ್ನು ತಾಯಿ ಬಳಿ ಹಂಚಿಕೊಂಡಿದ್ದೆ. ಆಗ ಅವರು ಒಂದು ವರ್ಷದ ಮಟ್ಟಿಗೆ ಅಜ್ಜಿಯ ಮನೆಯಲ್ಲಿರಲು ಭಾರತಕ್ಕೆ ಕಳುಹಿಸಿದ್ದರು. ಆದರೆ, 16 ವರ್ಷದಲ್ಲಿರುವಾಗ ರೇಪ್ ಆಗಿರುವ ವಿಷಯ ತಾಯಿಗೂ ಗೊತ್ತಿಲ್ಲ ಎಂದು ಬರೆದುಕೊಂಡಿದ್ದಾರೆ.