ಹುಚ್ಚು ಪ್ರೇಮಿಯ ಹುಚ್ಚಾಟಕ್ಕೆ ಇಬ್ಬರು ಟೆಕ್ಕಿಗಳು ಕೆಲಸ ಕಳೆದುಕೊಂಡ ಘಟನೆ ಬೆಂಗಳೂರಲ್ಲಿ ನಡೆದಿದೆ.
ಎಚ್ ಎಸ್ ಆರ್ ಲೇಔಟ್ ನ ಉದಾನ್ ಕಂಪನಿಯಲ್ಲಿ ನಡೆದಿರೋ ಘಟನೆಯಿದು.
ಯುವತಿ ಮತ್ತು ಯುವಕನೊಬ್ಬ ಆತ್ಮೀಯ ಸ್ನೇಹಿತರಾಗಿದ್ದರು . ಆ ಯುವತಿಯನ್ನು ಪ್ರೀತಿಸುತ್ತಿದ್ದವನೊಬ್ಬ ಅವರಿಬ್ಬರ ಸ್ನೇಹವನ್ನೇ ತಪ್ಪಾಗಿ ಅರ್ಥೈಸಿಕೊಂಡು ಅವಹೇಳನಕಾರಿ ಪೋಸ್ಟ್ ಹಾಕಿದ್ದೂ ಅಲ್ಲದೆ, ಕೆಲಸದಿಂದ ತೆಗೆಸುವಲ್ಲಿ ಯಶಸ್ವಿಯಾಗಿದ್ದಾನೆ.
ಕಳೆದ ಕೆಲ ವರ್ಷಗಳಿಂದ ಬೆಂಗಳೂರಿನ ಹೆಚ್‍ಎಸ್‍ಆರ್ ಲೇಔಟ್‍ನ ಉದಾನ್ ಕಂಪೆನಿಯಲ್ಲಿ ಯುವತಿ ಟೆಕ್ಕಿಯಾಗಿ ಕೆಲಸ ಮಾಡಿಕೊಂಡಿದ್ದಳು. ಅದೇ ಕಂಪೆನಿಯಲ್ಲಿ ವೆಂಕಟೇಶ್ ಕೂಡ ಕೆಲಸ ಮಾಡ್ತಿದ್ದ. ಒಂದೇ ಕಂಪನಿ ಆದ್ದರಿಂದ ಇಬ್ಬರೂ ಸ್ನೇಹಿತರಾಗಿದ್ರು. ಆದ್ರೆ ಇವರಿಬ್ಬರ ಸ್ನೇಹ ಸಹಿಸಿಕೊಳ್ಳದ ಅದೇ ಕಂಪನಿಯ ಯಾರೋ ಕಿಡಿಗೇಡಿ, ಆಫೀಸ್ ಗೋಡೆ ಮೇಲೆ ಯುವಕನ ಹೆಸರಲ್ಲಿ ಯುವತಿ ವಿರುದ್ಧ ಇಲ್ಲಸಲ್ಲದ ಆರೋಪ ಹಾಕಿ ಪೋಸ್ಟ್ ಹಾಕಿದ್ದಾನೆ. ಕಂಪನಿಯವರು ಹಿಂದೂ ಮುಂದು ನೋಡದೇ ವಿಚಾರಣೆಯನ್ನೂ ಸಹ ನಡೆಸಿದ ಅವರಿಬ್ಬರನ್ನು ಕೆಲಸದಿಂದ ತೆಗೆದುಹಾಕಿದ್ದಾರೆ.