ವರ್ಲ್ಡ್ ಟೂರ್ ಹೋಗಲು ಇವರೇನು ಮಾಡಿದರು ಗೊತ್ತಾ..?

Date:

ಆತನ ಹೆಸರು ಕ್ಯಾಪ್ಟನ್. ವಯಸ್ಸು 34. ಆಕೆ ಹೆಸರು ಚಾರ್ಲ್ ಸ್ಮಿತ್ ವಯಸ್ಸು 29. ಕ್ಯಾಪ್ಟನ್ ಮೂಲತಃ ವಾಸ್ತು ವಿನ್ಯಾಸಕ, ಚಾರ್ಲ್ ಒಂದು ಚಾನೆಲ್ ನಲ್ಲಿ ಹವಾಮಾನ ವರದಿಗಾರ್ತಿಯಾಗಿದ್ದವಳು. ಈಗ ಈ ಇಬ್ಬರೂ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ. ಅರೆ..! ಅಲ್ಲಿಗೆ ಇವರ ಸಂಸಾರ ಯಾನ ಆರಂಭವಾಗುತ್ತದೆ ಎಂದೇ ಎಲ್ಲರೂ ಭಾವಿಸಿದ್ದರು. ಬದಲಿಗೆ ಆರಂಭವಾಗಿದ್ದು, ಸಮುದ್ರಯಾನ..! ಯೆಸ್.. ಎಂಗೆಜ್ ಮೆಂಟ್ ಆಗಿದ್ದೇ ತಡ ಇವರಿಬ್ಬರೂ ವಿಶ್ವ ಸುತ್ತಲು ನಿರ್ಧರಿಸಿದರು. ಅದೂ ಕೂಡಾ ದೋಣಿಯಲ್ಲಿ..!
ಚಾಲರ್ಿ ಹಾಗೂ ಕ್ಯಾಪ್ಟನ್ ವಿಶ್ವ ಪ್ರವಾಸಕ್ಕಾಗಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಇದೂ ಅಲ್ಲದೇ ವರ್ಲ್ಡ್ ಟೂರ್ ಹೊರಡಲು ತಮ್ಮ ಮನೆಯನ್ನೇ ಮಾರಿ ಹಣ ಸಂಗ್ರಹಿಸಿದ್ದಾರೆ. ಇನ್ನೂ ವಿಚಿತ್ರ ಅಂದ್ರೆ ಇವರಿಬ್ಬರೂ ವರ್ಲ್ಡ್ ಟೂರ್ ಗೆ ಹೊರಟಿರುವುದು ತಮ್ಮದೇ ಸ್ವಂತ ದೋಣಿಯಲ್ಲಿ.

2F2C813600000578-0-image-a-11_1449593595616

 

ಹೌದು.. ತಮ್ಮ ಮನೆ ಮಾರಿ ಬಂದ ಹಣದಲ್ಲಿ ಇವರು ಸೇಲಿಂಗ್ ಬೋಟ್ ವೊಂದನ್ನು ಖರೀದಿಸಿದ್ದು, ಅದರಲ್ಲೇ ಜಗತ್ತು ಸುತ್ತುವ ಇರಾದೆ ಹೊಂದಿದ್ದಾರೆ ಈ ಜೋಡಿ. ಅದರಂತೆ ಸಮುದ್ರಯಾನ ಕೈಗೊಂಡಿರುವ ಚಾರ್ಲ್ ಹಾಗೂ ಕ್ಯಾಪ್ಟನ್, ಮೆಡಿಟರೇನಿಯನ್ ಸಮುದ್ರ, ಫ್ರಾನ್ಸ್, ಸ್ಪೇನ್, ಇಟಲಿ, ಎಲ್ಬಾ, ಕೋರ್ಸಿಕಾ, ಸಾರ್ಡಾನಿಯಾ ಮತ್ತು ಬೆಲೆರಿಕ್ ಐಲ್ಯಾಂಡ್ ಸೇರಿದಂತೆ ವಿವಿಧ ಪ್ರದೇಶಗಳನ್ನು ಸುತ್ತಿದ್ದಾರೆ.

2F2C819200000578-0-image-a-37_1449593720277
ಪ್ರಯಾಣದ ಮಧ್ಯೆ ಪುಸ್ತಕ ಓದುವುದು, ಹಾಡು ಕೇಳುವುದು ಇವರಿಬ್ಬರ ಹವ್ಯಾಸವಾಗಿದೆಯಂತೆ. ಇನ್ನು ಯಾವುದಾದರೂ ಊರು ಬಂದ ಕೂಡಲೇ ಅಗತ್ಯಕ್ಕೆ ತಕ್ಕಷ್ಟು ಆಹಾರ ಪೊಟ್ಟಣ, ಹಣ್ಣು ಖರೀದಿಸುತ್ತಾರೆ. ಈಗ ಈ ಇಬ್ಬರೇ ಸಾಗರದಲ್ಲಿ ಹಗಲು ರಾತ್ರಿ ಸೇಲಿಂಗ್ ಮಾಡುತ್ತಿದ್ದು, ಟೂರ್ ಪ್ಲ್ಯಾನ್ ಪ್ರಕಾರ ತಮ್ಮ ಫೆವರೆಟ್ ಸ್ಪಾಟ್ಗಳಿಗೆ ಭೇಟಿ ನೀಡುತ್ತಿದ್ದಾರೆ. ಸದ್ಯ ಮೆಡಿಟರೆನಿಯನ್ ಸಮುದ್ರದಲ್ಲಿ ಸೇಲಿಂಗ್ ನಡೆಸುತ್ತಿರುವ ಚಾರ್ಲ್ ಹಾಗೂ ಕ್ಯಾಪ್ಟನ್ ತಮ್ಮ ಜೀವಮಾನದ ಅದ್ಭುತ ಕ್ಷಣಗಳನ್ನು ಕಳೆಯುತ್ತಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಶೇರ್ ಮಾಡಿದ್ದಾರೆ.
ಇಷ್ಟೇ ಅಲ್ಲ ಈ ಜೋಡಿ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಪ್ರವಾಸ ಕುರಿತಾದ ಮಾಹಿತಿಗಳನ್ನು ಅಪ್ ಲೋಡ್ ಮಾಡುತ್ತಾರೆ. ಫೇಸ್ ಬುಕ್ ನಲ್ಲಿ ಸುಮಾರು 8 ಸಾವಿರ ಫಾಲೋವರ್ಶ್ ಇದಕ್ಕೆ ಸಾಕ್ಷಿ.

Share post:

Subscribe

spot_imgspot_img

Popular

More like this
Related

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ ಮೈಸೂರು: ಸಾಂಸ್ಕೃತಿಕ...

ರಸ್ತೆ ಗುಂಡಿಗಳಿಂದ ಕಾಂಗ್ರೆಸ್ ಸರ್ಕಾರಕ್ಕೂ ಕೆಟ್ಟ ಹೆಸರು ಬಂದಿದೆ: ಸಚಿವ ರಾಮಲಿಂಗಾರೆಡ್ಡಿ

ರಸ್ತೆ ಗುಂಡಿಗಳಿಂದ ಕಾಂಗ್ರೆಸ್ ಸರ್ಕಾರಕ್ಕೂ ಕೆಟ್ಟ ಹೆಸರು ಬಂದಿದೆ: ಸಚಿವ ರಾಮಲಿಂಗಾರೆಡ್ಡಿ ಬೆಂಗಳೂರು:...