ಪಕೋಡ ಮಾಡಿ ಮಾರಾಟ ಮಾಡುವುದು ಸಹ ಉದ್ಯೋಗವೇ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ಖಂಡಿಸಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮೋದಿ, ಉದ್ಯೋಗ ಸೃಷ್ಟಿಗೆ ಸಂಬಂಧಿಸಿದಂತೆ ಪಕೋಡ ಮಾರಾಟ ಕೂಡ ಉದ್ಯೋಗವೇ ಎಂದು ಹೇಳಿದ್ದರು. ಈ ಹೇಳಿಕೆ ಖಂಡಿಸಿ ಬೆಂಗಳೂರಿನ ಮಲ್ಲೇಶ್ವರಂ ನಲ್ಲಿನ ಬಿಜೆಪಿ ಕಚೇರಿ ಎದುರು ಎಂಎಸ್ಸಿ , ಎಂಎ ವಿದ್ಯಾರ್ಥಿಗಳು ಬಿಸಿ ಬಿಸಿ ಪಕೋಡ ಮಾಡಿ 10 ರೂ ಗೆ ಮಾರಾಟ ಮಾಡಿ ಪ್ರತಿಭಟಿಸಿದ್ದಾರೆ.
ಉದ್ಯೋಗ ನೀಡುತ್ತೇವೆ ಎಂದಿದ್ದ ಮೋದಿ ಪಕೋಡ ಮಾರಾಟ ಮಾಡಿ ಎನ್ನುತ್ತಿದ್ದಾರೆ. ಫೆಬ್ರವರಿ 4ರಂದು ಪ್ರಧಾನಿ ಜೊತೆ 1ಗಂಟೆಗಳ ಕಾಲ ಸಂವಾದ ನಡೆಸಿ ಪ್ರಣಾಳಿಕೆ ಕೊಡಲು ಅವಕಾಶ ನೀಡಬೇಕು. ಇಲ್ಲದಿದ್ದರೆ ಪಕೋಡ ಸ್ಟಾಲ್ ಮುಂದುವರೆಸುತ್ತೇವೆ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದ್ದಾರೆ.