ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಮತ್ತು ಟೀಂ ಇಂಡಿಯಾದ ಕ್ಯಾಪ್ಟನ್ ,ರನ್ ಮಷಿನ್ ವಿರಾಟ್ ಕೊಹ್ಲಿ…! ಏನಪ್ಪ ಇದು? ಅಂತ ಆತಂಕವಾಗೋದು ಸಹಜ…! ಗೌರಿ ಕೊಲೆಗೂ ವಿರಾಟ್ ಕೊಹ್ಲಿಗೂ ಏನ್ ಸಂಬಂಧ…?
ಸಂಬಂಧ ಇದೆ…! ಆದರೆ,ನೇರವಾಗಿ ಅಲ್ಲ….ಪರೋಕ್ಷವಾಗಿಯೂ ಅಲ್ವೇ ಅಲ್ಲ…! ಕೊಹ್ಲಿ ಹೆಸರನ್ನು ಹಂತಕರು ಬಳಸಿಕೊಂಡಿದ್ದಾರಷ್ಟೇ…!?
ಗೌರಿ ಲಂಕೇಶ್ ಅವರ ಹತ್ಯೆಯ ಪ್ರಮುಖ ಶೂಟರ್ ಎಂದು ಹೇಳಲಾಗುತ್ತಿರೋ ಪರಶುರಾಮ್ ವಾಗ್ಮೋರೆ ಸ್ನೇಹಿತರ ವಲಯದಲ್ಲಿ ಕೊಹ್ಲಿ ಎಂದೇ ಕರೆಸಿಕೊಳ್ಳುತ್ತಿದ್ದನಂತೆ…!
ಸಿಂದಗಿಯ ಪರಶುರಾಮ್ ವಾಗ್ಮೋರೆ ಚೆನ್ನಾಗಿ ಕ್ರಿಕೆಟ್ ಆಡ್ತಾನಂತೆ. ಕ್ರಿಕೆಟ್ ಹಾಗೂ ಫಿಟ್ ನೆಸ್ ಗಾಗಿ ಜಿಮ್ ಹವ್ಯಾಸ ಕೂಡ ಬೆಳೆಸಿಕೊಂಡಿದ್ದ ವಾಗ್ಮೋರೆ ಒಬ್ಬ ಒಳ್ಳೆಯ ಬ್ಯಾಟ್ಸ್ ಮನ್ ಅಂತೆ…! ಟೀಂ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಶೈಲಿಯಲ್ಲಿ ಬ್ಯಾಟ್ ಬೀಸ್ತಿದ್ದನಂತೆ…! ಆದ್ದರಿಂದ ಸ್ನೇಹಿತರು ಹಾಗೂ ಸ್ಥಳೀಯರು ಕೊಹ್ಲಿ ಅಂತ ಕರೀತಿದ್ರಂತೆ.
ಗೌರಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರೋ ಆರೋಪಿಗಳು ಸಹ ದೂರವಾಣಿ ಸಂಭಾಷಣೆಯಲ್ಲಿ ವಾಗ್ಮೋರೆ ಹೆಸರಿನ ಬದಲಿಗೆ ಕೊಹ್ಲಿ ಹೆಸರೇ ಬಳಸಿದ್ದಾರೆ ಎಂದು ಹೇಳಲಾಗಿದೆ.