ರಾಜಧಾನಿ ಬೆಂಗಳೂರಲ್ಲಿ ಪೆಟ್ರೋಲ್ ದರ 80 ರ ಗಡಿ ದಾಟಿದೆ. ಮಂಗಳವಾರ ಮಾರಾಟವಾಗುವ ಪೆಟ್ರೋಲ್ ದರ 80.06 ರೂ , ಡಿಸೇಲ್ ದರ 71.31 ರೂ ಗೆ ನಿಗಧಿಯಾಗಿದೆ.
ಪೆಟ್ರೋಲ್ , ಡಿಸೇಲ್ ಬೆಲೆ ದಿನೇ ದಿನೇ ಹೆಚ್ಚುತ್ತಿದ್ದು, ದರ ಇಳಿಕೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಾ ಬಂದಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲದರ ಕಡಿಮೆ ಇದ್ದರೂ ಇಂಧನ ದರ ಏರಿಕೆ ಆಗುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.






