ಹೀಗಾದರೆ ನಿಜಕ್ಕೂ ಖುಷಿ ವಿಚಾರ…! ಪೆಟ್ರೋಲ್ ಬೆಲೆ 55 ರೂ , ಡೀಸೆಲ್ ಬೆಲೆ 50 ರೂ ಆಗುತ್ತಂತೆ…! ಹೀಗಂತ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ…!
ಛತ್ತೀಸ್ ಗಢದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತಾಡಿದ ಅವರು ಕೇಂದ್ರ ಸರ್ಕಾರ ದೇಶದಲ್ಲಿ ಒಟ್ಟಾರೆ 5 ಎಥೆನಾಲ್ ಉತ್ಪಾದನಾ ಘಟಕಗಳನ್ನು ತೆರೆಯಲಿದೆ. ಇವುಗಳು ಕಾರ್ಯಾರಂಭ ಮಾಡಿದ ಬಳಿಕ ತೈಲ ಬೆಲೆ ಇಳಿಕೆ ಆಗಲಿದೆ ಎಂದಿದ್ದಾರೆ.
ನಗರ ಪ್ರದೇಶಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಗಳಿಂದ ಘಟಕದಲ್ಲಿ ಇಂಧನವನ್ನು ಉತ್ಪತ್ತಿ ಮಾಡಲಾಗುತ್ತೆ. ಭತ್ತ ಹಾಗೂ ಗೋಧಿಯ ಹುಲ್ಲು, ಕಬ್ಬು, ಇನ್ನಿತರ ಕೃಷಿಯಿಂದ ಉತ್ಪತ್ತಿಯಾಗುವ ತ್ಯಾಜ್ಯಗಳನ್ನು ಬಳಸಿ ಇಂಧನ ಉತ್ಪತ್ತಿ ಮಾಡಲಾಗುತ್ತದೆ ಎಂದು ತಿಳಿಸಿದರು.
ಎಥೆನಾಲ್, ಮೆಥೆನಾಲ್, ಬಯೋ ಇಂಧನ ಮತ್ತು ಸಿಎನ್ ಜೆ ಬಳಕೆ ಹೆಚ್ಚಾದಂತೆ ಪೆಟ್ರೋಲ್ ಮೇಲಿನ ಅವಲಂಬನೆ ಕಡಿಮೆಯಾಗಿ ತೈಲಬೆಲೆ ಇಳಿಕೆ ಆಗುತ್ತದೆ ಎಂದು ಹೇಳಿದರು.
ಇವರ ಪ್ರಕಾರ ಪೆಟ್ರೋಲ್ ಬೆಲೆ 50 ರೂ, ಡೀಸೆಲ್ ಬೆಲೆ 55ರೂ ಆಗಲಿದೆಯಂತೆ