ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಇಂದು ಬೆಳಿಗ್ಗೆಯಿಂದ ಪೆಟ್ರೋಲ್ ಡೀಸೆಲ್ ಲಾರಿ ಚಾಲಕರು ಮುಷ್ಕರ ಹೂಡಿದ ಹಿನ್ನಲೆಯಲ್ಲಿ ಪೆಟ್ರೋಲ್ ಡೀಸೆಲ್ ಪೂರೈಕೆಯಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ. ಮಾಲೂರು ತಾಲ್ಲೂಕಿನ ದೇವರಗುಂದಿ ಬಳಿ ಬೆಳಿಗ್ಗೆಯಿಂದಲೇ ಸಾವಿರಾರು ಸಂಖ್ಯೆಯ ಲಾರಿ ಚಾಲಕರು ಮುಷ್ಕರ ಪ್ರಾರಂಭಿಸಿದ್ದಾರೆ. ಇದರಿಂದಾಗಿ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳಿಗೆ ಸರಬರಾಜಾಗಬೇಕಿದ್ದ ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆ ಸ್ಥಗಿತಗೊಂಡಿದೆ. ಇನ್ನು ಲಾರಿ ಮುಷ್ಕರದಿಂದಾಗಿ ಮಾಲೂರು ರಸ್ತೆಯಲ್ಲಿ ಲಾರಿಗಳು ಸಾಲು ಸಾಲಾಗಿ ನಿಂತಿದೆ. ನಮ್ಮ ಬೇಡಿಕೆಯನ್ನು ಈಡೇರಿಸುವವರೆಗೂ ನಾವು ಮುಷ್ಕರ ಕೈಬಿಡುವುದಿಲ್ಲ ಎಂದು ಚಾಲಕರು ಪಟ್ಟು ಹಿಡಿದರುವ ಕಾರಣ ವಾಹನ ಸವಾರರಿಗೆ ಇಂದು ಸಂಜೆಯಿಂದ ಪೆಟ್ರೋಲ್ ಡೀಸೆಲ್‍ಗಳು ದೊರೆಯೋದು ಅನುಮಾನವಾಗಿದೆ.
ಬೆಂಗಳೂರಿನಿಂದ ದೇವನಗುಂದಿಗೆ ಸಂಪರ್ಕ ಕಲ್ಪಿಸುವ ಮಾರ್ಗವನ್ನು ಹೆದ್ದಾರಿ ರಸ್ತೆಯನ್ನಾಗಿ ಪರಿವರ್ತಿಸಬೇಕು, ದೇವನಗುಂದಿಯಲ್ಲಿ ಚಾಲಕರಿಗೆ ಶೌಚಾಲಯ, ಕ್ಯಾಂಟೀನ್, ವಾಸ್ತವ್ಯಕ್ಕೆ ಕೊಠಡಿ ದಿನದ 24 ಗಂಟೆಗಳ ಕಾಲ ನೀರಿನ ವ್ಯವಸ್ಥೆ ಸೇರಿದಂತೆ ಇನ್ನೂ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಚಾಲಕರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು. ಇದರಲ್ಲಿ ಸರ್ಕಾರ ಶೌಚಾಲಯ, ಕ್ಯಾಂಟೀನ್ ಬಿಟ್ಟರೆ ಉಳಿದ ಯಾವ ಬೇಡಿಕೆಗಳನ್ನೂ ಈಡೇರಿಸದೇ ಹಾಗೇ ಸುಮ್ಮನಾಗಿದ್ದಾರೆ. ಹೀಗಾಗಿ ನಾವು ಇಂದು ದಿಢೀರ್ ಪ್ರತಿಭಟನೆ ನಡೆಸುತ್ತಿದ್ದೆವೆ ಎಂದು ಲಾರಿ ಚಾಲಕರೊಬ್ಬರು ಹೇಳಿದ್ದಾರೆ..
ಗ್ರಾಮಸ್ಥರಿಂದ ಥಳಿತ.
ಪ್ರತೀ ದಿನ ನಾವು ದೇವನಗುಂದಿಯಿಂದ ಬೆಂಗಳೂರಿಗೆ ಪೆಟ್ರೋಲ್ ಸರಬರಾಜು ಮಾಡುವ ವೇಳೆ ಗ್ರಾಮಸ್ಥರಿಂದ ಅನೇಕ ಬಾರಿ ಹಲ್ಲೆಗೊಳಗಾಗಿದ್ದೇವೆ. ಕಳಪೆ ರಸ್ತೆ ಕಾಮಗಾರಿಗಳಿಂದ ಕೆಲವೊಂದು ಸಣ್ಣ ಪುಟ್ಟ ಅಪಘಾತಗಳು ಸಂಭವಿಸಿದಾಗ ಚಾಲಕರ ಮೇಲೆ ಗ್ರಾಮಸ್ಥರು ಹಲ್ಲೆ ನಡೆಸಿದ್ದಾರೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ ಚಾಲಕರು.
ಮತ್ತೆ ಮುಷ್ಟಕರದ ಬಿಸಿ.
ಒಂದೆಡೆ ಇಂದು ಲಾರಿ ಚಾಲಕರು ವಿವಿದ ಬೇಡಿಕೆ ಈಡೆರಿಸುವಂತೆ ಒತ್ತಾಯಿಸಿ ಮುಷ್ಕರ ಕೈಗೊಂಡಿದ್ದರೆ, ಇನ್ನೊಂದೆಡೆ ಇದೇ 19ರಿಂದ ಎರಡು ಹಂತಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್‍ಗಳಿಗೆ ನೀಡಬೇಕಾದ ಸವಲತ್ತುಗಳನ್ನು ಪರಿಹರಿಸುವಂತೆ ಒತ್ತಾಯಿಸಿ ಪೆಟ್ರೋಲ್ ವಿತರಕರು ಇದೇ 19 ಮತ್ತು 26 ರಂದು ಮುಷ್ಕರ ಕೈಗೊಳ್ಳಲಿದ್ದಾರೆ. ಈ ಎರಡು ದಿನಗಳು ಬಂಕ್ ಮಾಲಿಕರು ಮುಷ್ಕರ ಹೂಡಿದ್ದೇ ಆದರೆ ವಾಹನ ಸವಾರರಿಗೆ ಭರ್ಜರಿ ಬಿಸಿ ತಟ್ಟೋದಂತು ಖಂಡಿತ. ಸರ್ಕಾರ ಒಪ್ಪಿಕೊಂಡಂತೆ ಅಪೂರ್ವ ಚಂದ್ರ ಸಮಿತಿ ವರದಿಯನ್ನು ಯಥಾವತ್ತಾಗಿ ಅನುಷ್ಠಾನ ಮಾಡಬೇಕು. ಪೆಟ್ರೋಲ್ ಡೀಸೆಲ್‍ಗಳಿಗೆ ನೀಡಬೇಕಾದ ಕಮಿಷನ್, ಜನರೇಟರ್ ವೆಚ್ಚ, ಕಾರ್ಮಿಕ ಖರ್ಚಿನ ಒಂದು ಪಾಲು ಸೆರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪೆಟ್ರೋಲ್ ವಿತರಕರು ಸಾಂಕೇತಿಕ ಪ್ರತಿಭಟನೆ ನಡೆಸಲಿದ್ದಾರೆ.
POPULAR STORIES :
ಅಪ್ಪನ ಅಪ್ಪುಗೆಯಿಂದ ಬದುಕುಳಿಯಿತು ಕೂಸು..!