ಉದ್ಯಾನನಗರಿ, ಕೂಲ್ ಸಿಟಿ ಬೆಂಗಳೂರು ಇವತ್ತು ಅಕ್ಷರಶಃ ತತ್ತರಿಸಿಹೋಗಿದ್ದು. ಗಾರ್ಮೆಂಟ್ಸ್ ಕಾರ್ಮಿಕರ ಪ್ರತಿಭಟನೆ ಹಿಂಸಾರೂಪಕಕ್ಕೆ ತಿರುಗಿದ್ದು, ಪೊಲೀಸರು ಪ್ರತಿಭಟನಾಕಾರರ ನಡುವೆ ಘರ್ಷಣೆ ನಡೆದಿದೆ. ಉದ್ರಿಕ್ತರು ಪೊಲೀಸರ ಮೇಲೆ ಮತ್ತೆ ಕಲ್ಲು ತೂರಾಟ ನಡೆಸಿದ್ದಾರೆ. ಅಲ್ಲದೆ, ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್, ಪೊಲೀಸ್ ವಾಹನಗಳನ್ನು ಜಖಂಗೊಳಿಸಿದ್ದಾರೆ.
ಎಲ್ಲಾ ದಿಕ್ಕುಗಳಲ್ಲೂ ಬೀದಿಗಿಳಿದ ಕಾರ್ಮಿಕರು ಮೊದಲು ರಸ್ತೆ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ರು. ಆದ್ರೆ ಯಾವಾಗ ಪೊಲೀಸರು ಮಾತುಕತೆಗೂ ಮುಂದಾಗದೇ ಏಕಾಏಕಿ ಬಲ ಪ್ರಯೋಗ ಮಾಡಿ ಪ್ರತಿಭಟನೆ ಹತ್ತಿಕ್ಕಲು ಮುಂದಾದ್ರೋ ಆಗ ಆಕ್ರೋಶಗೊಂಡ ಕಾರ್ಮಿಕರು, ಪೊಲೀಸರ ವಿರುದ್ದವೇ ತಿರುಗಿ ಬಿದ್ದರು. ಹೊಸೂರು ರಸ್ತೆಯಲ್ಲಿರೋ ಹೆಬ್ಬಗೋಡಿ ಪೊಲೀಸ್ ಠಾಣೆಯನ್ನೇ ಗುರಿಯಾಗಿಸಿಕೊಂಡ ಪ್ರತಿಭಟನಾಕಾರರು ಠಾಣೆಗೆ ಮುತ್ತಿಗೆ ಬೆಂಕಿ ಹಾಕುವ ವಿಫಲ ಯತ್ನ ನಡೆಸಿದ್ರು. ಆದರೂ ಠಾಣಾ ಆವರಣದಲ್ಲಿ ಜಪ್ತಿ ಮಾಡಿ ನಿಲ್ಲಿಸಿದ್ದ 20ಕ್ಕೂ ಹೆಚ್ಚು ವಾಹನಗಳಿಗೆ ಬೆಂಕಿ ಹಾಕಿ ಉದ್ರಿಕ್ತರು ಆಕ್ರೋಶ ವ್ಯಕ್ತ ಪಡಿಸಿದರು.
ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಗಾಳಿಯಲ್ಲಿ ಸುಮಾರು 16 ಸುತ್ತು ಗುಂಡು ಹಾರಿಸಿದ್ರು. ಒಟ್ಟಾರೆ ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಹರಸಾಹಸ ಪಡಬೇಕಾಯ್ತು… ಈ ಘರ್ಷಣೆ ವೇಳೆ ಪೊಲೀಸರು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ.
ಇನ್ನೂ ಬನ್ನೇರುಘಟ್ಟದಲ್ಲೂ ಕೇಂದ್ರ ಸರ್ಕಾರದ ನೂತನ ಪಿಎಫ್ ನೀತಿ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ಕಾರ್ಮಿಕರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ರು. ಇದರಿಂದ ರೊಚ್ಚಿಗೆದ್ದ ಕಾರ್ಮಿಕರು ಬಿಎಂಟಿಸಿ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಿ 5 ಬಸ್‌ಗಳನ್ನು ಜಖಂಗೊಳಿಸಿದ್ದಾರೆ.ಅಷ್ಟೇ ಅಲ್ಲದೇ ಉದ್ರಿಕ್ತರ ಗುಂಪು ಪೊಲೀಸ್ ವಾಹನಗಳ ಮೇಲೂ ಕಲ್ಲು ತೂರಾಟ ನಡೆಸಿದೆ. ಪರಿಸ್ಥಿತಿ ನಿಯಂತ್ರಿಸಲು ಹರಸಾಹಸಪಟ್ಟ ಪೊಲೀಸರು ಶಾಂತಿಯುತವಾಗಿ ಪ್ರತಿಭಟಿಸುವಂತೆ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಲಿಲ್ಲ.
ತುಮಕೂರು ರಸ್ತೆಯಲ್ಲೂ ಪರಿಸ್ಥಿತಿ ತೀವ್ರ ಉದ್ವಿಗ್ನವಾಗಿತ್ತು. ಜಾಲಹಳ್ಳಿ ಕ್ರಾಸ್ ಬಳಿ ಖಾಸಗಿ ಬಸ್ ಗೆ ಬೆಂಕಿ ಹಾಕಿ ಕಾರ್ಮಿಕರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ರು. ಗೊರಗುಂಟೆಪಾಳ್ಯದಲ್ಲಿ ಎರಡು ಕೆಎಸ್ಆರ್ಟಿಸಿ ಬಸ್ ಗಳಿಗೆ ಬೆಂಕಿ ಹಾಕಲಾಯ್ತು. ಇದರಿಂದಾಗಿ ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಕಾರ್ಮಿಕರ ಆಕ್ರೋಶಕ್ಕೆ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಷ್ಟವಾಗಿದೆ.
ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಎಷ್ಟೇ ಹರಸಾಹಸ ಪಟ್ಟರೂ ಪ್ರತಿಭಟನಾಕಾರರು ನಿಯಂತ್ರಣಕ್ಕೆ ಸಿಗಲಿಲ್ಲ. ರಸ್ತೆಗಳಲ್ಲಿ ಸಿಕ್ಕಾಸಿಕ್ಕ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಲ್ಲದೇ ಅಂಗಡಿ, ಕಚೇರಿಗಳ ಮೇಲೂ ದಾಳಿ ನಡೆಸಿ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ತಿರುಗುವಂತೆ ಮಾಡಿದ್ರು. ಒಟ್ಟಾರೆ ಬೆಂಗಳೂರಿನ ನಾಲ್ಕು ದಿಕ್ಕಿನಲ್ಲೂ ಕಾರ್ಮಿಕರು ಪ್ರವಾಹದ ರೀತಿ ನುಗ್ಗಿ ಬಂದ ಪರಿಣಾಮ ಇಡೀ ಬೆಂಗಳೂರು ಸಂಪೂರ್ಣ ಸ್ಥಬ್ಧವಾಯ್ತು. ನಗರದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.
ಇದೆಲ್ಲದರ ಮಧ್ಯೆ ಇವತ್ತಿನ ಈ ಪರಿಸ್ಥಿತಿಗೆ ಎಲ್ಲೋ ಒಂದು ಕಡೆ ಪೊಲೀಸ್ ಇಲಾಖೆಯ ವೈಫಲ್ಯವೂ ಕಾರಣವಾಯ್ತಾ. ಇವತ್ತಿನ ಪರಿಸ್ಥಿತಿಯನ್ನ ಸಮರ್ಥವಾಗಿ ನಿಭಾಯಿಸುವಲ್ಲಿ ವಿಫಲವಾಯ್ತಾ. ಈ ಪ್ರತಿಭಟನೆಯನ್ನೂ ರಾಜಕೀಯ ಲಾಭಕ್ಕೆ ಬಳಸಿಕೊಳ್ಳೋ ಹುನ್ನಾರ ನಡೆಯುತ್ತಿದೆಯಾ. ಹಾಗೆ ಕಾರ್ಮಿಕರಿಗೆ ಕೇಂದ್ರದ ನೂತನ ಪಿ.ಎಫ್ ನೀತಿಯ ಬಗ್ಗೆ ಸರಿಯಾದ ಮಾಹಿತಿ ನೀಡದೇ ಈ ರೀತಿಯ ಪ್ರತಿಭಟನೆಗ್ರ ಕಾಣದ ಕೈಗಳು ಪ್ರಚೊದಿಸುತ್ತಿವೆಯಾ ಅನ್ನೋ ಸಾಕಷ್ಟು ಪ್ರಶ್ನೆಗಳು ಜೀವ ತಳೆದಿವೆ.
- ಶ್ರೀ
Video :
https://www.youtube.com/watch?v=3h7G_-ebsGY&list=PLrnE4LMxty4YEq78lHFA0mWlD6bmSTDft
POPULAR STORIES :
ವಾಟ್ಸಾಪ್ ಗ್ರೂಪ್ ಕ್ರಿಯೇಟ್ ಮಾಡಲು ಲೈಸೈನ್ಸ್ ಪಡೆಯಬೇಕಂತೆ..!!!
ಕೊಹ್ಲಿಯ ಟ್ಯಾಟೂ ಅಂತಿಂತದ್ದಲ್ಲ… ಕೊಹ್ಲಿ ಹಾಕಿಸಿಕೊಂಡಿರೋ ಟ್ಯಾಟೂಗಳ ಹಿಂದೆ ರೋಚಕ ಕಹಾನಿ..!
ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ಹಿಂಸಾಚಾರಕ್ಕೆ ತಿರುಗಿದ ಗಾರ್ಮೆಂಟ್ಸ್ ಕಾರ್ಮಿಕರ ಪ್ರತಿಭಟನೆ,
ಕೈ ತಪ್ಪಿದ ಕೊಹಿನೂರ್ ವಜ್ರ… ಕದ್ದದ್ದಲ್ಲ ಉಡುಗೊರೆಯಾಗಿ ನೀಡಿದ್ದು..!
ಸ್ನಾನ ಮಾಡುತ್ತಿದ್ದವಳ ವಿಡಿಯೋ ಚಿತ್ರೀಕರಣ ಮಾಡಿದ..! ಕತ್ರೀನಾ ಕೈಫ್ ಸಿಟ್ಟಾಗಿದ್ದೇ ಒದ್ದುಬಿಟ್ಟಳು..!?
ನಿದ್ದೆಗೆಟ್ಟರೇ ಸಾಯೋದು ಗ್ಯಾರಂಟಿ..!! ನಿದ್ದೆ ಬರ್ತಿಲ್ಲಾ.. ಯಾಕೋ ನಿದ್ದೆ ಬರ್ತಿಲ್ಲಾ..!!
ಐಪಿಎಲ್ ನಲ್ಲಿ ತುಂಡುಡುಗೆ ತೊಟ್ಟು ಕುಣಿಯೋ ಚಿಯರ್ ಗರ್ಲ್ಸ್ ಸ್ಯಾಲರಿ ಎಷ್ಟು ಗೊತ್ತಾ..?
ಅವಳ `ಆತ್ಮ’ ಅತೃಪ್ತಿಯಿಂದ ನರಳುತ್ತಿದೆ..! ಭಾರತ ಚಿತ್ರರಂಗ ಕಂಡ ಅಪ್ಪಟ `ಸೌಂದರ್ಯ’