ಅದೊಂದು ದಿನ ರಾತ್ರಿ 8ರ ಸಮಯ, ಬೆಂಗಳೂರು ನನಗೆ ಹೊಸ ಪ್ರದೇಶವಾದ್ದರಿಂದ ಕೋರಮಂಗಲ ಹೋಗಲು ಪ್ರತಿ ದಿನ ನಾನು ಮತ್ತು ನನ್ನ ಸ್ನೇಹಿತರು ಶಿವಾಜಿನಗರ ಬಸ್‍ಸ್ಟಾಂಡ್‍ಗೆ ಹೋಗ್ತಾ ಇದ್ವಿ. ಅಂದು ಜಿಟಿ ಜಿಟಿ ಮಳೆಯಿದ್ದರಿಂದ ಸಾಕಷ್ಟು ಪ್ರಯಾಣಿಕರು ತಾವು ಹೋಗುವ ಬಸ್‍ಗೆ ಕಾಯ್ತಾ ಇದ್ರು. ಬಸ್ ಬಂದ ಕೂಡಲೇ ಎಲ್ಲರೂ ಎದ್ನೋ ಬಿದ್ನೋ ಅಂತ ಓಡಲು ಶುರು ಹತ್ತಿದ್ದರು. ಇದೇ ವೇಳೆಗೆ ಒಬ್ಬ ವ್ಯಕ್ತಿ ಕುಡುಕನಂತೆ ವಾಲಾಡುತ್ತಾ ಬಸ್ ಹತ್ತುತ್ತಿದ್ದ ಪ್ರಯಾಣಿಕರ ಗುಂಪಿನೊಳಗೆ ನುಸುಳಿದ. ನಾವು ಆತ ಕುಡಿದಿದ್ದಾನೆ ಎಂದು ಆತನನ್ನೇ ನೋಡುತ್ತಾ ಮಜಾ ತಗೋಳ್ತಾ ಇದ್ವಿ. ಆದರೆ ಆತ ನಿಜವಾಗಿಯೂ ಕುಡಿದಿರಲಿಲ್ಲ. ಬದಲಾಗಿ ಕುಡುಕನಂತೆ ನಟಿಸುತ್ತಾ ಎಲ್ಲರ ಜೇಬನ್ನು ತನ್ನ ಕೈಯಿಂದ ಚೆಕ್ ಮಾಡ್ತಾ ಇದ್ದ. ಅರೆ! ಈತ ಏನು ಮಾಡ್ತಾ ಇದ್ದಾನೆ ಅಂತ ನಾವು ನೋಡ್ತಾ ಹಾಗೇ ಬಸ್ಸೊಳಗೆ ಹೋದವು. ಆದರೆ ಆ ಪುಣ್ಯಾತ್ಮ ಮಾತ್ರ ಬಸ್ ಹತ್ತಲಿಲ್ಲ. ನಾವು ಸಹ ತಲೆಕೆಡಿಸಿಕೊಳ್ಳದೇ ಸುಮ್ನಿದ್ವಿ. ಸ್ವಲ್ಪ ಹೊತ್ತಲ್ಲೇ ನನ್ನ ಪಕ್ಕದಲ್ಲೇ ಕುಳಿತಿದ್ದ ಹಿಂದಿ ಹುಡುಗ ತನ್ನ ಪರ್ಸ್ ಕಳುವಾಗಿದೆ ಎಂದು ಎಲ್ಲರ ಬಳಿ ಹೇಳಿಕೊಳ್ಳುತ್ತಿದ್ದ. ಅಂದು ಆತನದ್ದು ಮಾತ್ರವಲ್ಲ, ಅದೇ ಬಸ್‍ನಲ್ಲಿದ್ದ ಬರೋಬ್ಬರಿ 4 ಜನರ ಪರ್ಸ್ ಕಳುವಾಗಿತ್ತು ನೋಡಿ. ಕೂಡಲೇ ನಮಗೆ ಯೋಚನೆ ಒಳಿದಿದ್ದು ಆ ಕುಡುಕನಂತೆ ನಟನೆ ಮಾಡಿದ್ದ ಆಸಾಮಿಯನ್ನು. ಅಬ್ಬಾ! ಎಂತೆಂತಾ ನಿಪುಣರು ಶಿವಾಜಿನಗರ ಬಸ್‍ಸ್ಟಾಪ್‍ನಲ್ಲಿದ್ದಾರೆ ಸ್ವಾಮಿ, ಜಸ್ಟ್ ಐದು ನಿಮಿಷದಲ್ಲಿ ಇಂತಾ ಘಟನೆ ನಡೆದಿದ್ದು ನಮಗೆ ಆಶ್ಚರ್ಯದ ಜೊತೆಗೆ ಅನುಮಾನವೂ ಕಾಡತೊಡಗಿತು. ಇಂತವರು ಯಾರ ಭಯವೂ ಇಲ್ಲದೇ ಈ ರೀತಿ ಕೃತ್ಯ ಎಸೆಯುತ್ತಿರುವಾಗ ಇವರ ಹಿಂದೆ ಯಾವುದೋ ಕಾಣದ ಕೈನ ಸಹಕಾರವಿದೆ ಎಂದುಕೊಂಡೆವು. ಆದರೆ ಪರ್ಸ್ ಕಳೆದುಕೊಂಡ ಈ ನಾಲ್ಕು ಜನರ ಗತಿಯೇನು ಸ್ವಾಮಿ? ಕಷ್ಟಪಟ್ಟು ದುಡಿದ ಹಣ ಇನ್ನಯಾರದ್ದೋ ಪಾಲಾದರೆ ಅವರಲ್ಲಾಗುವ ಸಂಕಟ ಯಾರೊಂದಿಗೆ ಹೇಳಿಕೊಳ್ಳುತ್ತಾರೆ? ಇದೊಂದೆಡೆಯೇ ಹೀಗಾದರೆ ಇಡೀ ಬೆಂಗಳೂರಿನ ಸುತ್ತಮುತ್ತ ಇನ್ನೆಷ್ಟು ಜೇಬುಗಳ್ಳರ ಅಟ್ಟಹಾಸವಿದೆ. ಇವರ ಈ ಅಟ್ಟಹಾಸಕ್ಕೆ ಕಡಿವಾಣವೇ ಇಲ್ಲವೇ? ಎಂಬ ಪ್ರಶ್ನೆ ಎಲ್ಲರದ್ದು.
- ಪ್ರಮೋದ್ ಲಕ್ಕವಳ್ಳಿ
POPULAR STORIES :
ಹ್ಯಾಟ್ರಿಕ್ ಹೀರೋ ಶಿವಣ್ಣ ಕ್ರಿಕೆಟ್ ಆಡಿದ್ರು..! ಬ್ಯಾಟಿಂಗ್, ಬೌಲಿಂಗ್ ಮಾಡಿ ಮಿಂಚಿದ್ರು..,!
ಕೊನೆಯುಸಿರೆಳೆಯುತ್ತಿದ್ದ ಅವಳ ಮದುವೆಯಾಯ್ತು..! ಅವಳಿಷ್ಟದಂತೆ ಮದುವೆ, ಮುಂದೇನಾಯ್ತು?
ರವಿಬೆಳೆಗೆರೆಗೆ ಆರು ತಿಂಗಳು ಜೈಲು ಶಿಕ್ಷೆ..!!!
ಸಾಮಾಜಿಕ ಜಾಲತಾಣಗಳಲ್ಲಿ ಅಭಿವ್ಯಕ್ಕಿ ಸ್ವಾತಂತ್ರ್ಯದ ದುರ್ಬಳಕೆ : ಸಲ್ಮಾನ್‍ಖಾನ್
ಅವನನ್ನು ಅವಮಾನಿಸಿದ ಅವಳೆಲ್ಲಿದ್ದಾಳೆ..! ಅವಳು, ಅವನು ಮತ್ತು ಆ ಉಪನ್ಯಾಸಕ..!