ಮೊಡವೆ ಅನ್ನೊದು ಒಂದೆರಡಿದ್ದರೆ ಕೆಲವರಿಗೆ ಒಡವೆ ಅಂತಾರೆ . ಆದ್ರೆ ಅದೇ ಮುಖದ ತುಂಬಾ ಹರಡಿ ಮುಖವನ್ನ ಹಾಳು ಮಾಡಿದರೆ … ಅಬ್ಬಾ ಊಹಿಸಲು ಅಸಾಧ್ಯ ಅಲ್ವಾ . ಮೊಡವೆಗಳಿಂದ ಮುಕ್ತಿ ಪಡೆಯಲು ಸಾಕಷ್ಟು ಸಾಹಸ ಮಾಡುತ್ತಾರೆ . ಆದರೆ ಪರಿಹಾರ ಮಾತ್ರ ಸಿಗುವುದೇ ಇಲ್ಲ . ಆದರೆ ಕೆಲ ಮದ್ದುಗಳಿಂದ ಇದಕ್ಕೆ ಮುಕ್ತಿ ನೀಡಬಹುದು .
ಮೊದಲು ಮೊಡವೆ ಆದವರು ಮಾಡಬೇಕಾದ ಕೆಲಸವೆಂದರೆ ಅವರದ್ದು ಯಾವ ರೀತಿಯ ಚರ್ಮ ಎನ್ನುವುದನ್ನ ನೋಡಿಕೊಂಡು ಮನೆ ಮದ್ದು ಉಪಯೋಗಿಸಬೇಕು . ಎಣ್ಣೆಯ ಚರ್ಮ , ಒಣ ಚರ್ಮ ಅಥವಾ ಸಾಮಾನ್ಯ ಚರ್ಮ ಅನ್ನುವುದನ್ನ ನೋಡಿ ಬಳಸುವುದು ಉತ್ತಮ.
ಯಾವ ಚರ್ಮದವರಿಗೆ ಏನು ಮನೆ ಮದ್ದು ?
ಎಣ್ಣೆಯ ಚರ್ಮ ಇರುವವರು ಸೀಬೆಗಿಡದ ಎಳೆಯ ಎಲೆಗಳನ್ನು ಅರಿಶಿನ ಸೇರಿಸಿ ಅರೆದು ಹಚ್ಚುವುದರಿಂದ ಮೊಡವೆ ಬೇಗ ಮಾಯವಾಗುತ್ತವೆ. ಮತ್ತು ಒಣ ಚರ್ಮ ಇರುವವರು
ಒಣ ಚರ್ಮದವರು ಮೊಡವೆಗಳಿಗೆ ದಂಟಿನ ಸೊಪ್ಪನ್ನು ಹಾಲಿನಲ್ಲಿ ಅರೆದು ಹಚ್ಚಿಕೊಳ್ಳಬೇಕು. ಸಾಮಾನ್ಯ ಚರ್ಮದವರು
ಅಮೃತಬಳ್ಳಿಯ ಎಲೆ ಮತ್ತು ಹಣ್ಣುಗಳನ್ನು ಅಥವಾ ಕೇವಲ ಎಲೆಗಳನ್ನು ನುಣ್ಣಗೆ ಅರೆದು ರಾತ್ರಿ ಹೊತ್ತು ಹಚ್ಚಿಕೊಳ್ಳಬೇಕು. ಒಂದು ಗಂಟೆ ನಂತರ ಮುಖ ತೊಳೆಯಬೇಕು. ಕೆಲವೇಳೆ ಮುಖ ತೊಳೆಯದೇ ರಾತ್ರಿಯೆಲ್ಲ ಹಾಗೇ ಬಿಟ್ಟರೂ ಯಾವುದೇ ತೊಂದರೆಯಾಗುವುದಿಲ್ಲ.
ಇನ್ನೂ ಸಾಮಾನ್ಯವಾಗಿ ರಾತ್ರಿಹೊತ್ತು ಮುಖ ತೊಳೆದು ಮಲಗುವುದು ಒಳ್ಳೆಯದು . ಪ್ರತಿ ಬಾರಿ ಸೊಪ್ ಗಳನ್ನ ಬಳಸಬೇಕು ಅಂತೆನು ಇಲ್ಲ .