ರಾಜ್ಯ ರಾಜಧಾನಿಯಲ್ಲಿ ಪ್ಲಾಸ್ಟಿಕ್ ನಿಷೇದಿಸಿ ಹಲವು ತಿಂಗಳುಗಳೇ ಕಳೆದವೇನೋ..! ಆದ್ರೆ ನಿಷೇಧ ಮಾತ್ರ ಅಷ್ಟಕಷ್ಟೇ ಅನ್ನುಸ್ತಾ ಇದೆ..!
ಹೌದು.. ಅರಣ್ಯ, ಪರಿಸರ ಮತ್ತು ಜೀವ ವಿಜ್ಞಾನ ಇಲಾಖೆ ಸಿಲಿಕಾನ್ ಸಿಟಿಯಲ್ಲಿ ಕೆಲವು ಮಾಲಿನ್ಯಯುಕ್ತ ಪ್ಲಾಸ್ಟಿಕ್‍ನ್ನು ಕೂಡಲೇ ನಿಷೇಧಿಸಬೇಕು ಎಂದು ಬಿಬಿಎಂಪಿಗೆ ಸೂಚನೆ ನಿಡಲಾಗಿದ್ದು, ಅದರಂತೆ ನಗರದಲ್ಲಿ ಕೆಲವು ದಿನಗಳ ಕಾಲ ಪ್ಲಾಸ್ಟಿಕ್ ಹಾವಳಿ ಸಂಪೂರ್ಣ ನಿಂತು ಹೋಗಿತ್ತು, ನಗರದ ಎಲ್ಲಾ ಅಂಗಡಿ ಮುಂಗಟ್ಟುಗಳ ಮುಂದೆ ‘ಪ್ಲಾಸ್ಟಿಕ್ ನಿಷೇಧಿಸಿ ಕೈ ಚೀಲ ತನ್ನಿ’ ಎಂಬ ಶ್ಲೋಗನ್ ಎಲ್ಲಡೆ ರಾರಾಜಿಸ ತೊಡಗಿತ್ತು. ಆದ್ರೆ ಇಂದು ಅದು ಕಟ್ಟು ನಿಟ್ಟಾಗಿ ಪಾಲನೆ ಆಗ್ತಾ ಇಲ್ಲ ಅನ್ನೋದೆ ದುಃಖದ ಸಂಗತಿ.!
ಇದೀಗ ರಾಜ್ಯ ರಾಜಧಾನಿಯಲ್ಲಿ ಪ್ಲಾಸ್ಟಿಕ್‍ನದ್ದೇ ಹವಾ..! ರೆಸ್ಟೋರೆಂಟ್‍ಗಳಲ್ಲಿ, ತಳ್ಳುಗಾಡಿಗಳಲ್ಲಿ ಆಹಾರ ಮಾರಾಟ ಮಾರುವವರು ಇದೀಗ ಕೈಚೀಲವನ್ನು ಬಿಟ್ಟು ಮತ್ತೆ ಪ್ಲಾಸ್ಟಿಕ್ ಮೊರೆ ಹೋಗಿದ್ದಾರೆ.. ಅಲ್ಲದೆ ದಿನಸಿ ಅಂಗಡಿಗಳಲ್ಲೂ ಈಗ ಗ್ರಾಹಕರಿಗೆ ಪ್ಲಾಸ್ಟಿಕ್‍ನಲ್ಲೆ ದವಸ ಧಾನ್ಯಗಳನ್ನು ಕಟ್ಟಿಕೊಡುತ್ತಿದ್ದಾರೆ. ಹೂವು, ಹಣ್ಣು ಮತ್ತು ತರಕಾರಿ ಮಾರುವವರಂತೂ ಇನ್ನೂ ಪ್ಲಾಸ್ಟಿಕ್ ಬಳಸೋದನ್ನ ನಿಲ್ಲಿಸಿಲ್ಲ ನೋಡಿ..!
ಅಂಗಡಿ ಮುಂಗಟ್ಟುಗಳಲ್ಲಿ ಪ್ಲಾಸ್ಟಿಕ್ ನಿಷೇಧದ ನಡುವೆಯೂ, ನಿಷೇಧಿತ ಪ್ಲಾಸ್ಟಿಕ್ ಪ್ರಮಾಣ ದಿನೇ ದಿನೆ ಹೆಚ್ಚಾಗ್ತಾ ಇದೆ. ಯಾವುದೇ ಭಯವಿಲ್ಲದೇ ಈ ಪರಿಸರ ನಾಶಕ ಪ್ಲಾಸ್ಟಿಕ್ ಮಾರಾಟ ಎಲ್ಲೆಡೆ ರಾಜಾರೋಷವಾಗಿ ಮಾರಾಟ ಮಾಡಲಾಗ್ತಾ ಇದೆ.. ಇನ್ನು ಪ್ಲಾಸ್ಟಿಕ್ ಲೋಟ, ತಟ್ಟೆಗಳಂತೂ ಹೆಗ್ಗಿಲ್ಲದೆ ಮಾರಾಟವಾಗ್ತಾ ಇದೆ ನೋಡಿ..!
ನಗರದ ಹಲವಾರು ಬಡಾವಣೆಗಳಲ್ಲಿ ಪ್ಲಾಸ್ಟಿಕ್ ಹಾವಳಿ ಮಿತಿ ಮೀರ ತೊಡಗಿದ್ದು, ಬಿಬಿಎಂಪಿಯ ಆಜ್ಞೆಯ ನಡುವೆಯೂ ಮಾರಾಟಗಾರರು ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವುದು ದುರಾದೃಷ್ಟಕರ ಸಂಗತಿ. ಪ್ಲಾಸ್ಟಿಕ್ ಮಾರಾಟ ಮಾಡುತ್ತಿರುವವರ ಮೇಲೆ ಬಿಬಿಎಂಪಿ ಅಧಿಕಾರಿಗಳು ಈಗಲಾದರೂ ಕಠಿಣ ಕ್ರಮ ಕೈಗೊಂಡು, ನಿಷೆಧದ ನಡುವೆಯೂ ಮಾರಾಟ ಮಾಡುವವರ ವಿರುದ್ದ ಕ್ರಮ ಕೈಗೊಳ್ಳಬೇಕೆಂಬುದು ಜನರ ಒತ್ತಾಯವಾಗಿದೆ.
POPULAR STORIES :
ಸರ್ಕಾರ ಬಿದ್ದರೂ 20ರ ನಂತರ ನೀರು ಬಿಡೆನು: ಸಿಎಂ ಸಿದ್ದರಾಮಯ್ಯ ಗುಡುಗು..!
ಚೀನಾ ತನ್ನ ದೇಶದ 6 ವರ್ಷದ ಮಕ್ಕಳನ್ನು ಭವಿಷ್ಯದ ಒಲಿಂಪಿಕ್ ದಿಗ್ಗಜರನ್ನು ಮಾಡಲು ಕೊಡುವ ಕಠಿಣ ತರಬೇತಿ..!
ತಿಂಗಳಲ್ಲಿ ಎರಡನೇ ಬಾರಿ ಪೆಟ್ರೊಲ್ ದರ ಏರಿಕೆ…!
ತಾಮ್ರದ ಪಾತ್ರೆಯಲ್ಲಿ ಕೂಡಿಟ್ಟ ನೀರನ್ನು ಸೇವಿಸುವುದು ಉತ್ತಮ ಯಾಕೆ..?
ಪತಂಜಲಿಯ ಸಿ.ಇ.ಒ ಆಚಾರ್ಯ ಬಾಲಕೃಷ್ಣ , ಈಗ ದೇಶದ ಅತ್ಯಂತ ಶ್ರೀಮಂತರಲ್ಲಿ ಒಬ್ಬರು..!
ಸಿರಿಯಾ ದೇಶದ ಮಹಿಳೆಯರನ್ನು ಲೈಂಗಿಕ ಗುಲಾಮಗಿರಿಯಿಂದ ರಕ್ಷಿಸಲು ಪಣ ತೊಟ್ಟು ನಿಂತ ದಿಟ್ಟ ಮಹಿಳೆ.