ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಫಿಲಿಪಿನ್ಸ್‍ನಲ್ಲಿ ರೈತರಾದ್ರು..! ಏನಪ್ಪಾ ಇದು.. ಮೋದಿ ಅಲ್ಲಿಗೆ ಹೋಗಿ ರೈತರಾದ್ರಾ..? ಅಂತ ತಲೆಗೆ ಹುಳ ಬಿಡ್ಕೋ ಬೇಡ್ರಿ. ಕೆಲವೊತ್ತು ಮಾತ್ರ ಮೋದಿ ಅಲ್ಲಿ ರೈತರಾಗಿದ್ದರೇ ವಿನಃ ಜಮೀನು ಖರೀದಿಸಿ, ಉಳುಮೆ ಮಾಡಲು ಮುಂದಾಗಿಲ್ಲ..!
ಹೌದು, ಫಿಲಿಪಿನ್ಸ್ ಪ್ರವಾಸದಲ್ಲಿರೋ ಮೋದಿ ಇವತ್ತು ಬೆಳಗ್ಗೆ ಲಾಸ್ ಬನೋಸ್‍ನಲ್ಲಿರೋ ಅಂತರಾಷ್ಟ್ರೀಯ ಅಕ್ಕಿ ಸಂಶೋಧನಾ ಕೇಂದ್ರಕ್ಕೆ ಹೋಗಿದ್ರು. ಅಲ್ಲಿ ಅಕ್ಕಿ ಫಿಲಿಪಿನ್ಸ್ ಅಧ್ಯಕ್ಷರ ಜೊತೆಗೂಡಿ ಅಕ್ಕಿ ಪ್ರಯೋಗಾಲಯವನ್ನು ಉದ್ಘಾಟಿಸಿದ್ರು. ಇದಕ್ಕು ಮುನ್ನ ಹೊಲದಲ್ಲಿ ಹಾರೆ ಹಿಡಿದು ಮಣ್ಣು ತೆಗೆದು, ಗಿಡ ನೆಟ್ಟರು.
ಮೋದಿ 31ನೇ ಏಷ್ಯನ್ ಸಮಿತ್ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ರಷ್ಯಾದ ಅಧ್ಯಕ್ಷ ರೋಡ್ರಿಗೋ ಹಾಗೂ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.