ಮಹಿಳಾ ಪೊಲೀಸ್ ಪೇದೆ ಸೂಪರ್ ಮಾರ್ಕೆಟ್ ನಲ್ಲಿ ಚಾಕಲೇಟ್ ಕದಿಯಲು ಹೋಗಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ತಮಿಳುನಾಡಿನ ಎಗ್ಮೋರ್ ನಲ್ಲಿ ನಡೆದಿದೆ.
ಎಂ ನಂದಿನಿ (34) ಚಾಕಲೇಟ್ ಕದಿಯಲು ಹೋಗಿ ಸಿಕ್ಕಿಬಿದ್ದ ಪೇದೆ. ಈಕೆ ಚಾಕಲೇಟ್ ಮತ್ತು ಸೊಳ್ಳೆ ಕ್ರಿಮ್ ಅನ್ನು ಕದ್ದು ಬ್ಯಾಗ್ ನಲ್ಲಿ ಹಾಕಿಕೊಂಡಿದ್ದಾಳೆ. ಸಿಸಿ ಟಿವಿಯಲ್ಲಿ ಇದು ಸೆರೆಯಾಗಿದ್ದು, ವಿಚಾರಿಸಲು ಹೋದಾಗ ಪರಾರಿಯಾಗಲು ಪ್ರಯತ್ನಿಸಿದ್ದು, ಮಾರ್ಕೆಟ್ ಸಿಬ್ಬಂದಿ ಆಕೆಯನ್ನು ಫಾಲೋ ಮಾಡಿ ಹಿಡಿದಿದ್ದಾರೆ.ಸಿಕ್ಕಿಬಿದ್ದ ಬಳಿಕ ಪೊಲೀಸರಿಗೆ ಹೇಳದಂತೆ ಕ್ಷಮೆಯಾಚಿಸಿದ್ದಾಳೆ.
ಬಳಿಕ ಈ ವಿಚಾರವನ್ನು ಪತಿಗೆ ತಿಳಿಸಿದ್ದಾಳೆ. ಆತ ಮೂವರೊಡನೆ ಆಗಮಿಸಿ ಮಾಲೀಕನ ಮೇಲೆ ಹಲ್ಲೆ ಮಾಡಿದ್ದಾನೆ. ಗಲಾಟೆ ಬಿಡಿಸಲು ಹೋದ ಅಂಗಡಿ ಸಿಬ್ಬಂದಿಯ ಮೇಲೂ ಹಲ್ಲೆ ಮಾಡಿದ್ದಾರೆ.
ಮಾಲೀಕನಿಂದ ದೂರು ದಾಖಲಿಸಿಕೊಂಡಿರುವ ಪೊಲೀಸರು ಪೊಲೀಸ್ ಪೇದೆಯನ್ನು ಅಮಾನತುಗೊಳಿಸಿದ್ದಾರೆ. ಆಕೆಯ ಪತಿಯನ್ನು ಅರೆಸ್ಟ್ ಮಾಡಿದ್ದಾರೆ.