ಇವರೆಲ್ಲಾ ಪೊಲೀಸರೋ ಅಥವಾ ರಾಕ್ಷಸರೋ ಅನ್ನೋ ಅನುಮಾನ ಎಲ್ಲರಿಗೂ ಕಾಡದಿರೊಲ್ಲ ನೋಡಿ… ನ್ಯಾಯ ಕೇಳಿದ ಅಮಾಯಕ ಜನರನ್ನ ಹೇಗೆ ದನಗಳಿಗೆ ಬಡಿದ ಹಾಗೆ ಬಡಿತಾ ಇದಾರೆ.. ನೋಡಿ ಸ್ವಾಮೀ… ಎಷ್ಟೊಂದು ಪ್ರೀ ಪ್ಲಾನಿಂಗ್ ಮಾಡಿದ್ದಾರೆ ನೋಡಿ… ಕಾರುಗಳನ್ನ ಅಡ್ಡ ನಿಲ್ಲಿಸಿ ಕ್ಯೂಬಿಟ್ಟು ಒಬ್ಬೊಬ್ಬರಿಗೆ ಮೂರ್ನಾಲ್ಕು ಪೊಲೀಸರು ಹಿಗ್ಗಾ ಮುಗ್ಗ ಥಳಿಸುತ್ತಿದ್ದಾರೆ… ಆ ಅಮಾಯಕರು ಏನು ತಪ್ಪು ಮಾಡಿದ್ದಾರೆ ಸ್ವಾಮೀ… ತನಗೆ ಅನ್ಯಾಯವಾಗಿರೋದನ್ನ ಪ್ರತಿಭಟಿಸುತ್ತಿದ್ದಾರೆ ಅಷ್ಟೇ… ಅದರಲ್ಲಿ ಯಾರಾದರೂ ಸರ್ಕಾರಿ ಕಛೇರಿಗಳನ್ನ ಧ್ವಂಸ ಮಾಡಿದ್ದಾರಾ.. ಇಲ್ಲ. ಬಸ್‍ಗೆ ಬೆಂಕಿ ಹಚ್ಚಿದ್ದಾರಾ.. ಅದೂ ಇಲ್ಲ. ಮತ್ಯಾಕೆ ಅವರ ಮೇಲೆ ನಿಮ್ಮ ಉತ್ತರ ಪೌರುಷಾ..? ಗೊತ್ತಾಗ್ತಾ ಇಲ್ಲ. ಎಂತಾ ಮಾನವೀಯತೆ ಮರೆತ ಪೊಲೀಸರು ಇವರು ಇವರ ಏಟಿಗೆ ಗೃಹಣಿಯರು, ಗರ್ಭಿಣಿಯರು, ಅಜ್ಜಿಯರೇ ಬಲಿಯಾಗಬೇಕೆ… ಇದು ಪ್ರಜಾಪ್ರಭುತ್ವ ರಾಷ್ಟ್ರನಾ..? ಸರ್ಕಾರ ಏನ್ಮಾಡ್ತಾ ಇದೇ ಸಾರ್…? ನೋವಿನಿಂದ ಬಳಲುತ್ತಿರುವ ಜನರಿಗೆ ವಿಷಾಧ ವ್ಯಕ್ತಪಡಿಸಿದರೆ ಅವರ ನೋವಿಗೆ ಸ್ಪಂದಿಸುವವರಾರು..? ಹೆಣ್ಣು ಮಕ್ಕಳ ಮೇಲೆ ಕೈ ಮಾಡಲು ನಿಮಗೆ ಅಧಿಕಾರ ಕೊಟ್ಟೋವ್ಯಾರು ಸಾರ್… ಮನೆಗಳಿಗೆ ನುಗ್ಗಿ ಅವರನ್ನು ಥಳಿಸಿ ಅವರ ಮೇಲೆ ಕೇಸ್ ಹಾಕ್ತಾ ಇರೋದನ್ನ ನೋಡ್ತಾ ಇದ್ರೆ ಇದು ಜನ ಪರ ಸರ್ಕಾರವೋ ಅಥವಾ ಬ್ರಿಟೀಷ್ ಸರ್ಕಾರನಾ ಅನ್ನೋ ರೋಷಾವೇಶ ಉಂಟಾಗ್ತಾ ಇದೆ. ಸ್ವಲ್ಪವೂ ಕರುಣೆಯಿಲ್ಲದ ಪೊಲೀಸರಿಗೆ ಧಿಕ್ಕಾರವಿರಲಿ..
Video :
https://youtu.be/hFalEO0_wKI
POPULAR STORIES :
ಅರ್ನಬ್ ಗೋಸ್ವಾಮಿ ವಿರುದ್ದ 500 ಕೋಟಿ ರೂ ದಾವೆ ಹೂಡಿದ ಝಾಕೀರ್…!
ಮೊಬೈಲ್ ಫೋನ್ ಚಾರ್ಜ್ ಗೆ ಇಟ್ಟಿರುವಾಗ ಬ್ಲಾಸ್ಟ್ ಆಗಬಹುದು ಹುಷಾರ್…!
ಯಾಹೂ ಸಿಬ್ಬಂದಿಗಳಿಗೆ ಸಿ.ಇ.ಓ.ನ ಕೊನೆಯ ಪತ್ರ
ಸಲ್ಮಾನ್ ಗುಂಡು ಹಾರಿಸಿದ್ದು ನನ್ನ ಕಣ್ಣಾರೆ ನೋಡಿದ್ದೇನೆ: ಕೃಷ್ಣ ಮೃಗ ಬೇಟೆಯಲ್ಲಿ ಹೊಸ ಟ್ವಿಸ್ಟ್.
ಲೈಂಗಿಕ ಸಮಸ್ಯೆಗೆ ರಾಮಬಾಣ ದಾಳಿಂಬೆ ಹಣ್ಣಿನ ಜ್ಯೂಸ್….. !
ಇದ್ದಕ್ಕಿದ್ದ ಹಾಗೆ ಒಂದು ಹುಡುಗಿ ನಿಮ್ಮನ್ನು ತಬ್ಬಿಕೊಳ್ಳಲು ಬಂದಾಗ ನಿಮಗೆ ಏನ್ ಅನ್ಸಲ್ಲಾ ಹೇಳಿ..!
ಧೋನಿಯನ್ನು ಮಾಹೀ ಎಂದು ಕರೆದ ಮಗಳು ಜಿವಾ..! ಅಪ್ಪ ಮಗಳ ಕ್ಯೂಟ್ ವಿಡಿಯೋ..!