17ನೇ ವರ್ಷಕ್ಕೇ ‘ಭರವಸೆಯ ಬೆಳಕು’ ಮೂಡಿಸಿದ ನಿರೂಪಕಿ…!

Date:

17ನೇ ವರ್ಷಕ್ಕೆ ಮಾಧ್ಯಮ ಕ್ಷೇತ್ರಕ್ಕೆ ಕಾಲಿಟ್ಟ ‘ಭರವಸೆಯ ಬೆಳಕು’ ಇವರು. ತುಂಬಾ ಕಷ್ಟದಲ್ಲಿ ಬೆಳೆದು ಬಂದ ಸ್ವಾಭಿಮಾನಿ. ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ಕನಸುಗಳನ್ನು ಬೆನ್ನಟ್ಟಿ ಮುನ್ನುಗ್ಗಿದ ಹೆಮ್ಮೆಯ ಕನ್ನಡತಿ ಈ ನಿರೂಪಕಿ. ಸಂಗೀತವೇ ಇವರ ಉಸಿರು. ಹೆಸರು ಪೂರ್ಣಿಮ ಎನ್.ಡಿ.

ಇಂದು ಪೂರ್ಣಿಮ ಕನ್ನಡಿಗರ ಮನೆಮಗಳು. ಒಂದೊಳ್ಳೆ ಸ್ಥಾನದಲ್ಲಿದ್ದಾರೆ. ನಾಲ್ಕು ಜನ ಗುರುತಿಸೋ ಮಟ್ಟಕ್ಕೆ ಬೆಳೆದಿದ್ದಾರೆ. ಮೂಲತಃ ಹಾಸನ ಜಿಲ್ಲೆಯ ನಂಜೆ ದೇವರ ಕಾವಲ್ ಎಂಬ ಪುಟ್ಟ ಹಳ್ಳಿಯವರು. ತಂದೆ ಧರ್ಮರಾಜ್, ತಾಯಿ ರೇಖಾ, ತಮ್ಮ ಪುನೀತ್.
ಎರಡು ವರ್ಷದ ಮಗುವಾಗಿದ್ದಾಗಿನಿಂದ ಅಪ್ಪ-ಅಮ್ಮನ ಬಿಟ್ಟು ದೂರದೂರಲ್ಲಿ ಬೆಳೆದ ಹೆಣ್ಣುಮಗಳಿವರು.

ಕೊಡಗು ಜಿಲ್ಲೆಯ ಶನಿವಾರ ಸಂತೆಯ ಹಣಸೆ ಹಳ್ಳಿಯಲ್ಲಿ ದೊಡ್ಡಪ್ಪ ಕುಮಾರಿ ಗೌಡ, ದೊಡ್ಡಮ್ಮ ಶೋಭಾ ಅವರ ಆಶ್ರಯದಲ್ಲಿ ಬೆಳೆದವರು. ಇವತ್ತು ತಾನು ಮಾಧ್ಯಮದಲ್ಲಿದ್ದೇನೆ ಎಂದರೆ ಅದಕ್ಕೆ ಪ್ರಮುಖ ಕಾರಣ ತನ್ನ ಈ ದೊಡ್ಡಪ್ಪ, ದೊಡ್ಡಮ್ಮ ಎಂದು ಪ್ರೀತಿಯಿಂದ ಹೇಳಿಕೊಳ್ಳುತ್ತಾರೆ ಪೂರ್ಣಿಮಾ.


1 ನೇ ತರಗತಿಯಿಂದ 7ನೇ ತರಗತಿಯವರೆಗೆ ಶನಿವಾರ ಸಂತೆಯ ಹಣಸೆ ಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ. ಹಾಸನದ ಕಂದ್ಲಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣವನ್ನು ಪಡೆದರು. ಪ್ರಥಮ ವರ್ಷದ ಪಿಯುಸಿಯನ್ನು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಾಡಿದ್ರು. ನಂತರ ಅನಿವಾರ್ಯ ಕಾರಣದಿಂದ ಅಲ್ಲಿ ವ್ಯಾಸಂಗ ಮುಂದುವರೆಸಲು ಆಗಲಿಲ್ಲ. ಹಾಸನ್ ಎಂ.ಕೃಷ್ಣ ಪಿಯು ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಮುಗಿಸಿದ್ರು. ಎನ್‍ಡಿಆರ್‍ಕೆ ಪ್ರಥಮದರ್ಜೆ ಕಾಲೇಜಿನಲ್ಲಿ ಬಿಕಾಂ ಪದವಿಯನ್ನು ಪಡೆದ್ರು.


ತಾನು ಯಾರ ಮೇಲೂ ಡಿಪೆಂಡ್ ಆಗಬಾರದು ಎಂಬುದು ಬಾಲ್ಯದಿಂದಲೂ ಪೂರ್ಣಿಮ ಮೈಗೂಡಿಸಿಕೊಂಡು ಬಂದಿರೋ ಸಿದ್ಧಾಂತ. ಮನೆಯಲ್ಲಿ ಅಪ್ಪ-ಅಮ್ಮನಿಗೆ ಕಷ್ಟವಿದೆ ಆದಷ್ಟು ನನ್ನ ಓದಿನ ಖರ್ಚನ್ನು ನಾನೇ ಬರಿಸಿಕೊಳ್ಳಬೇಕು ಎಂದು ಪಾರ್ಟ್‍ಟೈಮ್ ಕೆಲಸಕ್ಕೆ ಹೋಗುವ ಯೋಚನೆ ಮಾಡ್ತಿದ್ರು.


ಒಂದು ದಿನ ಮನೆಯಲ್ಲಿ ಟಿವಿ ನೋಡ್ತಾ ಇರುವಾಗ ಹಾಸನದ ‘ಅಮೋಘ’ ಚಾನಲ್ ನಲ್ಲಿ ನಿರೂಪಕರು ಬೇಕಾಗಿದ್ದಾರೆ ಎಂಬ ಜಾಹಿರಾತು ಬರ್ತಿತ್ತು…! ಅದನ್ನು ಗಮನಿಸಿದ ಪೂರ್ಣಿಮ ತಡಮಾಡದೇ ಅಮೋಘ ಚಾನಲ್ ಆಫೀಸ್ ಗೆ ಹೋದ್ರು. ಇಂಟರ್ ವ್ಯೂ, ಸ್ಕ್ರೀನ್ ಟೆಸ್ಟ್ ನಲ್ಲಿ ಪಾಸ್ ಆಗಿ ಮಾಧ್ಯಮ ಪ್ರಪಂಚಕ್ಕೆ ಧುಮಿಕಿಯೇ ಬಿಟ್ಟರು. ಆಗ ಪಿಯುಸಿ ವಿದ್ಯಾರ್ಥಿನಿ.


ಅಮೋಘಕ್ಕೆ ಆಯ್ಕೆಯಾದ 6 ತಿಂಗಳುಗಳ ಕಾಲ ಆಫೀಸಿಗೆ ಹೋಗೋದು ಕುಳಿತುಕೊಂಡು ಬರೋದು ಮಾತ್ರ ಇವರ ಕೆಲಸವಾಗಿತ್ತು…! ಅಮೋಘಕ್ಕೆ ಸೆಲೆಕ್ಟ್ ಆಗಿದ್ದಿಯಂತೆ ಟಿವೀಲಿ ಕಾಣೋದೆ ಇಲ್ಲವಲ್ಲೆ ಅಂತ ಎಷ್ಟೋ ಮಂದಿ ಸ್ನೇಹಿತರು ದಿನಂಪ್ರತಿ ಕೇಳಲಾರಂಭಿಸಿದ್ರು.


ಬಳಿಕ ಒಂದು ದಿನ ಆನ್ ಏರ್ ಬರೋ ಅವಕಾಶ ಸಿಕ್ಕಿತು. ಅಲ್ಲಿಂದ ನಿರಂತರವಾಗಿ ಮೂರುವರೆ-ನಾಲ್ಕು ವರ್ಷಗಳ ಕಾಲ ಅಮೋಘದಲ್ಲಿ ಪಾರ್ಟ್‍ಟೈಮ್ ಕೆಲಸ ಮಾಡಿದ್ರು. ಇಲ್ಲಿ ಮದನ್ ಗೌಡ ಸರ್ ಹಾಗೂ ಪ್ರಮೋದ್ ಸರ್ ಮಾರ್ಗದರ್ಶನ ನೀಡಿದ್ರು. ತುಂಬಾ ಪ್ರೋತ್ಸಾಹಿಸಿದ್ರು ಅಂತಾರೆ ಪೂರ್ಣಿಮ .


ಅಮೋಘಕ್ಕೆ ಸೇರಿದಮೇಲೆ ಸುಮಾರು ಮೂರುವರೆ ವರ್ಷಗಳ ಕಾಲ ಒಂದೇ ಒಂದು ದಿನವು ಪೂರ್ಣಿಮ ಗೈರು ಆಗಿರಲಿಲ್ಲ…! ಪ್ರತಿದಿನ ಬೆಳಗ್ಗೆ 6 ಗಂಟೆಗೆ ಮನೆಬಿಟ್ಟರೆ ವಾಪಸ್ಸು ಮನೆ ಸೇರ್ತಾ ಇದ್ದುದು ರಾತ್ರಿ ಸುಮಾರು 10 ಗಂಟೆಗೆ…! ಬೆಳಗ್ಗೆ 7 ಗಂಟೆಯಿಂದ 8 ಗಂಟೆಯವರೆಗೆ ಟ್ಯೂಷನ್. 9ರಿಂದ 3 ಗಂಟೆಯವರೆಗೆ ಕಾಲೇಜು. ಸಂಜೆ 4ಗಂಟೆಯಿಂದ ರಾತ್ರಿ 8ಗಂಟೆ ತನಕ ಅಮೋಘದಲ್ಲಿ ಕೆಲಸ.


ಮನೆ ಇರೋದು ಹಾಸದಿಂದ 12 ಕಿಮೀ ದೂರದಲ್ಲಿ. ಮನೆಯಲ್ಲಿ ಆಗ ಯಾವುದೇ ವಾಹನವಿರಲಿಲ್ಲ. ರಾತ್ರಿ 8.45 ಬಸ್ ನಲ್ಲಿ ಮನೆಗೆ ಹೋಗುತ್ತಿದ್ದರು. ಬೆಳಗ್ಗೆ 6 ಗಂಟೆಗೆ ಮನೆ ಬಿಡುವುದು. ಇದೇ ಇವರ ದಿನಚರಿ. ಕಾಲೇಜಿನಲ್ಲಿ ಉಪನ್ಯಾಸಕರು ಮುಂದೇನಾಗಬೇಕು ಅಂತ ವಿದ್ಯಾರ್ಥಿಗಳಿಗೆ ಕೇಳುತ್ತಿದ್ದರು. ಆಗೆಲ್ಲಾ ಪೂರ್ಣಿಮ ‘ಆ್ಯಂಕರ್’ ಆಗಬೇಕು ಎಂದು ಹೇಳುತ್ತಿದ್ದರು. ಈಗಾಗಲೇ ಆ್ಯಂಕರ್ ಆಗಿದ್ದಿಯಲ್ಲಮ್ಮಾ ಅಂತ ಉಪನ್ಯಾಕರು ಹೇಳಿದ್ರೆ, ‘ಇಲ್ಲ ನಾನು ಸ್ಯಾಟಲೈಟ್ ಚಾನಲ್ ನಲ್ಲಿ ಕೆಲಸ ಮಾಡ್ಬೇಕು’ ಎನ್ನುತ್ತಿದ್ದರು.


ಮಾಧ್ಯಮದಲ್ಲಿ ಬೆಳೆಯಬೇಕು ಎಂಬ ಕನಸು ಕಾಣಲು ಶುರುಮಾಡಿದ್ದು ಅಮೋಘ ಸೇರಿದ ಮೇಲೆ. ಅದಕ್ಕಿಂತ ಮೊದಲು ಎಂಕಾ ಮಾಡಿ, ಲೆಕ್ಚರರ್ ಆಗ್ಬೇಕು ಅಂತ ಅಂದುಕೊಂಡಿದ್ದರು. ಕೆಲಸದ ಅನಿವಾರ್ಯತೆ ಯಾವಾಗ ಅಮೋಘಕ್ಕೆ ಕರೆತಂತೋ ಅವತ್ತಿಂದ ಮಾಧ್ಯಮವೇ ಇವರ ಪ್ರಪಂಚವಾಯ್ತು.


ಬಿಕಾಂ ಕೊನೆಯ ಸೆಮಿಸ್ಟರ್ ವೇಳೆಯಲ್ಲಿ ಕಸ್ತೂರಿ ಚಾನಲ್‍ಗೆ ಇಂಟರ್ ವ್ಯೂ ಗೆ ಹೋದ್ರು. ಅಲ್ಲಿ ಸ್ಕ್ರೀನ್ ಟೆಸ್ಟ್ ನಲ್ಲಿ ಪಾಸ್ ಆದ್ರು. ಎಕ್ಸಾಮ್ ಮುಗಿಸಿ ಕಸ್ತೂರಿ ಚಾನಲ್ ಗೆ ಸೇರಿದ್ರು. (2013-14ರಲ್ಲಿ). 2016ರ ಅಕ್ಟೋಬರ್ ನಿಂದ ಭರವಸೆಯ ಬೆಳಕು ಬಿ.ಟಿವಿ ಬಳಗದಲ್ಲಿದ್ದಾರೆ.


“ಕಸ್ತೂರಿಯಲ್ಲಿ ನನಗೆ ಮನೋಜ್ ಸರ್, ಸ್ವಪ್ನ ಮೇಡಂ, ದಿವಾಕರ್ ಸರ್ ಹಾಗೂ ಚೆನ್ನಕೇಶವ ಸರ್ ತುಂಬಾ ಸಪೋರ್ಟ್ ಮಾಡಿದ್ರು. ಬಿ.ಟಿವಿಯಲ್ಲಿ ಕುಮಾರ್ ಸರ್, ಮುರುಳಿ ಸರ್ ಹಾಗೂ ಎಲ್ಲಾ ನಿರೂಪಕರು, ಸಹೋದ್ಯೋಗಿಗಳು ತುಂಬಾ ಸಪೋರ್ಟ್ ಮಾಡ್ತಿದ್ದಾರೆ’’ ಎನ್ನುತ್ತಾರೆ ಪೂರ್ಣಿಮ.


“ಸುವರ್ಣ ನಿರೂಪಕಿ ಶಿಲ್ಪ ಅವರು ಮೀಡಿಯಾಕ್ಕೆ ಬಂದಮೇಲೆ ತನಗೆ ಪರಿಚಯ. ಸಹೋದರಿ ಸ್ಥಾನದಲ್ಲಿದ್ದಾರೆ. ತುಂಬಾ ಸಪೋರ್ಟ್ ಮಾಡ್ತಾರೆ. ಕಸ್ತೂರಿ ವಾಹಿನಿಯ ಪತ್ರಕರ್ತ ಕೇಶವ್ ಸರ್ ಅವರಿಂದ ಇವತ್ತಿಗೂ ಸಲಹೆಗಳನ್ನು ಕೇಳಿಪಡೆಯುತ್ತೇನೆ. ಅಮೋಘದಲ್ಲಿರುವಾಗ ಶಶಿ ಸರ್ ಅಂತಿದ್ರು. ಅವರು ನಾನು ತಪ್ಪು ಮಾಡಿದಾಗಲೆಲ್ಲಾ ಕಲೀಲಿ ಎಂಬ ಉದ್ದೇಶದಿಂದ ‘ನಿನಗೆ ಆಗಲ್ಲಮ್ಮ ಬಿಡು’ ಅಂತಿದ್ರು. ಇವತ್ತು ನಾನಿಲ್ಲಿರಲು ಅವರು ಸಹ ಪ್ರಮುಖ ಕಾರಣ’’ ಎಂದು ಪೂರ್ಣಿಮ ಸ್ಮರಿಸಿಕೊಳ್ತಾರೆ.


ಪೂರ್ಣಿಮ ಅವರು ಕೇವಲ ನಿರೂಪಕಿ ಮಾತ್ರವಲ್ಲ. ಒಳ್ಳೆಯ ಗಾಯಕಿ…! ಸಂಗೀತವೆಂದರೆ ಇವರಿಗೆ ಪ್ರಾಣ. ಜೀ-ಕನ್ನಡ ವಾಹಿನಿಯ ‘ಸರಿಗಮಪ’ ದಲ್ಲಿ ಪಾಲ್ಗೊಂಡಿದ್ದರು. 2012ರಲ್ಲಿ ಉದಯ ಟಿವಿಯ ‘ಅಕ್ಷರಮಾಲೆ’ ಯ ವಿನ್ನರ್ ಕೂಡ ಹೌದು. ಖುಷಿ ಆದಾಗಲೂ, ಬೇಜಾರಾದಾದಗಲೂ ಇವರ ಸಂಗಾತಿ ಸಂಗೀತ. ಇಷ್ಟೇಅಲ್ಲದೆ ಇವರು ನ್ಯಾಷನಲ್ ಲೆವೆಲ್ ಅಥ್ಲೀಟ್ ಕೂಡ ಹೌದು. ಕಾಲೇಜು ದಿನಗಳಲ್ಲಿ ಹಲವಾರು ಬಾರಿ ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸಿದ್ದಾರೆ.


ಟ್ಯಾಲೆಂಟ್ ಇದ್ರೆ ಖಂಡಿತಾ ಮಾಧ್ಯಮ ಕ್ಷೇತ್ರದಲ್ಲಿ ಬೆಳೆಯಲು ಸಾಧ್ಯವಿದೆ. ತಾಳ್ಮೆಯಿಂದ ಕಲಿತರೆ ಖಂಡಿತಾ ಯಶಸ್ಸು ಸಿಗುತ್ತೆ. ಬಕೆಟ್ ಇಟ್ಕೊಂಡು ಇದ್ರೆ ನಾಲ್ಕು ದಿನ ಮಾತ್ರ ಬೆಲೆ…! ಪ್ರತಿಭೆಗೆ ಎಲ್ಲಿದ್ದರೂ ಬೆಲೆಯುಂಟು. ಅದು ಜೀವಂತ ಎನ್ನುವ ಪೂರ್ಣಿಮ ಅವರು, ಸ್ವಂತ ಟ್ರಸ್ಟ್ ಒಂದನ್ನು ಸ್ಥಾಪಿಸಿ ಅನಾಥರ, ನಿರ್ಗತಿಕರ ಸೇವೆ ಮಾಡಬೇಕೆಂದುಕೊಂಡಿದ್ದಾರೆ. ತನ್ನಿಂದ ನಾಲ್ಕು ಜನರಿಗೆ ಒಳ್ಳೇದನ್ನು ಮಾಡಬೇಕು. ಬಡ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎನ್ನೋದು ಪೂರ್ಣಿಮ ಅವರ ಕನಸು. ಇವರ ಕನಸುಗಳೆಲ್ಲವೂ ಸಾಕಾರಗೊಳ್ಳಲಿ. ಇವರ ಒಳ್ಳೇತನಕ್ಕೆ ಖಂಡಿತಾ ದೊಡ್ಡ ಯಶಸ್ಸು ಸಿಕ್ಕೇ ಸಿಗುತ್ತೆ.

-ಶಶಿಧರ್ ಎಸ್ ದೋಣಿಹಕ್ಲು

ಓದುಗರ ಗಮನಕ್ಕೆ :ಮಾರ್ಚ್-ಏಪ್ರಿಲ್‍ನಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ‘ಫೇವರೇಟ್ ಆ್ಯಂಕರ್’ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ. ಕಳೆದ ವರ್ಷ ನೀವು ನಿಮ್ಮ ನೆಚ್ಚಿನ ನಿರೂಪಕರಿಗೆ ವೋಟ್ ಹಾಕಿದ್ದೀರಿ. ಈ ವರ್ಷವೂ ನಿಮ್ಮ ನೆಚ್ಚಿನ ನಿರೂಪಕರನ್ನು ಆಯ್ಕೆ ಮಾಡುವ ಜವಬ್ದಾರಿಯೂ ನಿಮ್ಮದೇ…! ಇದಕ್ಕೆ ಪೂರಕವಾಗಿ ನಾವೀಗ ‘ಈ ದಿನದ ನಿರೂಪಕ’ ಎಂದು 10 ನವೆಂಬರ್ 2017ರಿಂದ ದಿನಕ್ಕೊಬ್ಬರಂತೆ ಕನ್ನಡದ ನಿರೂಪಕರ ಕಿರುಪರಿಚಯವನ್ನುಮಾಡಿಕೊಡುತ್ತಿದ್ದೇವೆ.

1) 10 ನವೆಂಬರ್ 2017 : ಈಶ್ವರ್ ದೈತೋಟ

2)11 ನವೆಂಬರ್ 2017 : ಭಾವನ

3)12  ನವೆಂಬರ್ 2017 : ಜಯಶ್ರೀ ಶೇಖರ್

4)13 ನವೆಂಬರ್ 2017 : ಶೇಷಕೃಷ್ಣ

5)14 ನವೆಂಬರ್ 2017 : ಶ್ರೀಧರ್ ಶರ್ಮಾ

6)15 ನವೆಂಬರ್ 2017 : ಶ್ವೇತಾ ಜಗದೀಶ್ ಮಠಪತಿ

7)16 ನವೆಂಬರ್ 2017 : ಅರವಿಂದ ಸೇತುರಾವ್

8)17 ನವೆಂಬರ್ 2017 : ಲಿಖಿತಶ್ರೀ

9)18 ನವೆಂಬರ್ 2017 : ರಾಘವೇಂದ್ರ ಗಂಗಾವತಿ

10)19 ನವೆಂಬರ್ 2017 : ಅಪರ್ಣಾ

11)20 ನವೆಂಬರ್ 2017 :  ಅಮರ್ ಪ್ರಸಾದ್

12)21 ನವೆಂಬರ್ 2017 :   ಸೌಮ್ಯ ಮಳಲಿ

13)22 ನವೆಂಬರ್ 2017 :  ಅರುಣ್ ಬಡಿಗೇರ್

14)23ನವೆಂಬರ್ 2017 :  ರಾಘವ ಸೂರ್ಯ

15)24ನವೆಂಬರ್ 2017 :  ಶ್ರೀಲಕ್ಷ್ಮಿ

16)25ನವೆಂಬರ್ 2017 :  ಶಿಲ್ಪ ಕಿರಣ್

17)26ನವೆಂಬರ್ 2017 :  ಸಮೀವುಲ್ಲಾ

18)27ನವೆಂಬರ್ 2017 :  ರಮಾಕಾಂತ್ ಆರ್ಯನ್

19)28ನವೆಂಬರ್ 2017 :  ಮಾಲ್ತೇಶ್

20)29/30ನವೆಂಬರ್ 2017 :  ಶ್ವೇತಾ ಆಚಾರ್ಯ  [ನಿನ್ನೆ (29ರಂದು ) ತಾಂತ್ರಿಕ ಸಮಸ್ಯೆಯಿಂದ ‘ಈ ದಿನದ ನಿರೂಪಕರು’- ನಿರೂಪಕರ ಪರಿಚಯ ಲೇಖನ ಪ್ರಕಟಿಸಿರಲಿಲ್ಲ. ಆದ್ದರಿಂದ ಇಂದು ಪ್ರಕಟಿಸಿದ್ದೀವಿ.  ಈ ದಿನದ (30 ನವೆಂಬರ್) ಲೇಖನ ಸಂಜೆ ಪ್ರಕಟಿಸಲಾಗುವುದು.) ]

21)30ನವೆಂಬರ್ 2017 :  ಸುರೇಶ್ ಬಾಬು 

22)01 ಡಿಸೆಂಬರ್ 2017 :  ಮಧು ಕೃಷ್ಣ (ಡಿಸೆಂಬರ್ ೨ ರಂದು ಬೆಳಗ್ಗೆ ಪ್ರಕಟ)

23)02 ಡಿಸೆಂಬರ್ 2017 : ಶಶಿಧರ್ ಭಟ್

24)03 ಡಿಸೆಂಬರ್ 2017 : ಚನ್ನವೀರ ಸಗರನಾಳ್

25)04 ಡಿಸೆಂಬರ್ 2017 : ಗೌರೀಶ್ ಅಕ್ಕಿ

26)05 ಡಿಸೆಂಬರ್ 2017 : ಶ್ರುತಿ ಜೈನ್

27)06ಡಿಸೆಂಬರ್ 2017 : ಅವಿನಾಶ್ ಯುವನ್  

28)07ಡಿಸೆಂಬರ್ 2017 : ಶಿಲ್ಪ ಕೆ.ಎನ್

29)08ಡಿಸೆಂಬರ್ 2017 : ಶಮೀರಾ ಬೆಳುವಾಯಿ

30)09ಡಿಸೆಂಬರ್ 2017 : ಸಂದೀಪ್ ಕುಮಾರ್

31)10ಡಿಸೆಂಬರ್ 2017 : ಪ್ರತಿಮಾ ಭಟ್

32)11ಡಿಸೆಂಬರ್ 2017 :  ಹರೀಶ್ ಪುತ್ರನ್

33)12ಡಿಸೆಂಬರ್ 2017 : ನಿಶಾ ಶೆಟ್ಟಿ

34)13ಡಿಸೆಂಬರ್ 2017 : ಪೂರ್ಣಿಮ ಎನ್.ಡಿ

 

 

Share post:

Subscribe

spot_imgspot_img

Popular

More like this
Related

ಹೃದಯ ಸಮಸ್ಯೆ ಇದ್ದವರಿಗೆ ದಾಳಿಂಬೆ ಬೆಸ್ಟ್ ಅಂತೆ; ನೀವು ಕೂಡ ತಪ್ಪದೇ ಸೇವಿಸಿ

ಹೃದಯ ಸಮಸ್ಯೆ ಇದ್ದವರಿಗೆ ದಾಳಿಂಬೆ ಬೆಸ್ಟ್ ಅಂತೆ; ನೀವು ಕೂಡ ತಪ್ಪದೇ...

ಮಹಿಳೆಯರಿಗೆ ಗುಡ್‌ ನ್ಯೂಸ್: ವೇತನ ಸಹಿತ ಮುಟ್ಟಿನ ರಜೆಗೆ ಅನುಮೋದನೆ‌

ಮಹಿಳೆಯರಿಗೆ ಗುಡ್‌ ನ್ಯೂಸ್: ವೇತನ ಸಹಿತ ಮುಟ್ಟಿನ ರಜೆಗೆ ಅನುಮೋದನೆ‌ ಬೆಂಗಳೂರು: ಗ್ಯಾರಂಟಿ...

ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲು ಓಪನ್

ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲು ಓಪನ್ ಹಾಸನ: ಐತಿಹಾಸಿಕ ಪ್ರಸಿದ್ಧ ಹಾಸನಾಂಬೆ ದೇವಸ್ಥಾನದ...

ಬಂಗಾರದ ಬೆಲೆ ಏರಿಕೆ! ಬೆಳ್ಳಿಯೂ ದುಬಾರಿ, ಹೀಗಿದೆ ಇಂದಿನ ರೇಟ್!

ಬಂಗಾರದ ಬೆಲೆ ಏರಿಕೆ! ಬೆಳ್ಳಿಯೂ ದುಬಾರಿ, ಹೀಗಿದೆ ಇಂದಿನ ರೇಟ್! ಚಿನ್ನ ಖರೀದಿಗೆ...