ಉಚಿತ ವೈಫೈ ದುರ್ಬಳಕೆ ತಡೆಯಲು ಅಶ್ಲೀಲ ಸೈಟ್‍ಗಳಿಗೆ ಬ್ರೇಕ್ ಹಾಕಿದ ರೈಲ್ವೆ..!

admin
By admin
1 Min Read

ದೇಶದಲ್ಲೇ ಅತೀ ಹೆಚ್ಚು ವೈಫೈ ಸೇವೆ ಒದಗಿಸಿರುವ ಪಾಟ್ನಾದಲ್ಲಿ ಅತೀ ಹೆಚ್ಚು ಪ್ರಯಾಣಿಕರು ಇದರ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. ಸಾಮಾನ್ಯವಾಗಿ ಅಲ್ಲಿನ ಬಹುತೇಕ ಜನರಿಗೆ ಪ್ರಯಾಣ ಬೆಳೆಸುವ ಸಂದರ್ಭದಲ್ಲೂ ಕೆಲಸಕ್ಕೆ ಸಹಕಾರಿಯಾಗ್ಲಿ ಅಂತ ರೈಲ್ವೆ ಇಲಾಖೆ ದೇಶದ ಇತರೆ ಪ್ರದೇಶಗಳಿಗಿಂತ ಹೆಚ್ಚಿನ ಪ್ರಮಾಣದ ವೈಫೈ ಸೇವೆ ಈ ರೈಲು ನಿಲ್ದಾಣಕ್ಕೆ ನೀಡಿದ್ದರೆ ಪ್ರಯಾಣಿಕರು ಮಾತ್ರ ಈ ಸೇವೆಯನ್ನು ಅಶ್ಲೀಲ ಚಿತ್ರ ವೀಕ್ಷಿಸವುದಕ್ಕೆ ಬಳಸಿಕೊಳ್ಳುತ್ತಿದ್ದಾರೆ..! ಈ ವಿಷಯ ತಿಳಿದ ಅಲ್ಲಿನ ಅಧಿಕಾರಿಗಳು ಅಶ್ಲೀಲ ಸೈಟ್‍ಗಳನ್ನು ಬ್ಲಾಕ್ ಮಾಡಿ ವೈಫೈ ದುರ್ಬಳಕೆಯನ್ನು ತಡೆಗಟ್ಟಿದ್ದಾರೆ.
ದೇಶದಲ್ಲೇ ಅತೀ ಹೆಚ್ಚು ವೈಫೈ ಉಪಯೋಗಿಸುವ ಪಾಟ್ನಾದ ರೈಲ್ವೇ ಪ್ರಯಾಣಿಕರು ತಮ್ಮ ಮೊಬೈಲ್‍ಗಳಲ್ಲಿ ಹೆಚ್ಚಾಗಿ ಅಶ್ಲೀಲ ಚಿತ್ರಗಳನ್ನೆ ವೀಕ್ಷಣೆ ಮಾಡುತ್ತಾರೆ ಎಂಬ ಅಂಶ ಬೆಳಕಿಗೆ ಬಂದ ಕೂಡಲೇ ಸೋಮವಾರದಿಂದಲೆ ಅಶ್ಲೀಲ ಸೈಟ್‍ಗಳನ್ನು ಬ್ಲಾಕ್ ಮಾಡಲಾಗಿದೆ ಎಂದು ರೈಲ್‍ಟೇಲ್ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ದೇಶದಲ್ಲಿ ಅತಿ ಹೆಚ್ಚು ವೈಫೈ ಬಳಸುವ ರಾಜ್ಯದಲ್ಲಿ ಮೊದಲನೇ ಸ್ಥಾನ ಪಾಟ್ನಾ ಇದ್ದರೆ ಎರಡನೇ ಮತ್ತು ಮೂರನೇ ಸ್ಥಾನದಲ್ಲಿ ಜಬಲ್‍ಪುರ ಮತ್ತು ಬೆಂಗಳೂರು ದೆಹಲಿ ಇದೆ.

Like us on Facebook  The New India Times

POPULAR  STORIES :

ವೃತ್ತಿಯಲ್ಲಿ ವಾಟರ್ ಟ್ಯಾಂಕ್ ಡ್ರೈವರ್.. ದಕ್ಕಿದ್ದು ಮಿಸ್ಟರ್ ಏಷ್ಯಾ ಅವಾರ್ಡ್..!

ನಾಗೇಂದ್ರ ಪ್ರಸಾದ್ – ಶುಭಪೂಂಜ ಮದುವೆಯಾದ್ರು.!! ಇನ್‍ಸೈಡ್ ಸ್ಟೋರಿ ಏನು ಗೊತ್ತಾ..?

ದೊಡ್ಡ ನಾಲಿಗೆ ಮಗು..!! ನಗುವನ್ನ ಮರೆತ ಮನೆಯವರು..! ಈಗ ಹೇಗಿದೆ ಗೊತ್ತ ಈ ಪುಟ್ಟ ಜೀವ..?

ಜಿಯೋ 4ಜಿ ಉಚಿತ ಕೊಡುಗೆ ಡಿಸೆಂಬರ್ ಬದಲಿಗೆ ಮಾರ್ಚ್‍ವರೆಗೆ ವಿಸ್ತರಣೆ..!

ದರ್ಗಾ ಒಳಗೆ ಮಹಿಳೆಯರ ಪ್ರವೇಶಕ್ಕೆ ಗ್ರೀನ್ ಸಿಗ್ನಲ್ ನೀಡಿದ ಮುಂಬೈ ಟ್ರಸ್ಟ್..!

Share This Article