ಪ್ರಜ್ವಲ್ ರೇವಣ್ಣ ಚುನಾವಣೆಗೆ ಸ್ಪರ್ಧಿಸೋ ವಿಚಾರದಲ್ಲಿ ಗೊಂದಲಗಳು ಬಗೆಹರಿದಿಲ್ಲ. ಸ್ವತಃ ಮಾಜಿ ಪ್ರಧಾನಿ ದೇವೇಗೌಡರೇ ಮೊಮ್ಮಗನಿಗೆ ಚುನಾವಣೆಗೆ ಸ್ಪರ್ಧಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ಪ್ರಜ್ವಲ್ ರೇವಣ್ಣ ಅವರ ತಾಯಿ ಭವಾನಿ ರೇವಣ್ಣ ಹೇಳಿದ್ದಾರೆ.
ಪ್ರಜ್ವಲ್ ರೇವಣ್ಣ ಬೆಂಗಳೂರಿನ ಆರ್ ಆರ್ ನಗರದಲ್ಲಿ ಅಥವಾ ಬೇಲೂರಿನಲ್ಲಿ ನಿಲ್ಲುವ ಸಾಧ್ಯತೆ ಇದೆ. ಎರಡೂ ಕಡೆಗಳಲ್ಲೂ ಬೆಂಬಲಿಗರಿದ್ದಾರೆ ಎಂದು ಭವಾನಿ ರೇವಣ್ಣ ಹೇಳಿದ್ದರು. ಅಷ್ಟೇಅಲ್ಲದೇ ತಮ್ಮ ಮಾವ ದೇವೇಗೌಡರೇ ಇದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದೂ ತಿಳಿಸಿದ್ದರು.
ಇದೀಗ ಈ ಬಗ್ಗೆ ಪ್ರತಿಕ್ರಿಯಿಸಿರೋ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಅಧ್ಯಕ್ಷ ಎಚ್.ಡಿ ಕುಮಾರ ಸ್ವಾಮಿ. ಆಕಾಂಕ್ಷಿಗಳಿರ್ತಾರೆ ಇನ್ನು ಯಾವುದನ್ನು ನಿರ್ಧರಿಸಿಲ್ಲ ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಿದ್ದಾರೆ. ಗ್ರೀನ್ ಸಿಗ್ನಲ್ ಕೊಟ್ಟವರನ್ನೇ ಕೇಳಿ ಎಂದಿದ್ದಾರೆ.
ಈ ಹಿಂದೆ ದೇವೇಗೌಡರು ತಮ್ಮ ಕುಟುಂಬದಿಂದ ಕುಮಾರ ಸ್ವಾಮಿ ಮತ್ತು ರೇವಣ್ಣ ಹೊರತು ಪಡಿಸಿ ಮತ್ಯಾರು ಈ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದು ಹೇಳಿದ್ದರು. ಇದೀಗ ಪ್ರಜ್ವಲ್ ರೇವಣ್ಣ ಸ್ಪರ್ಧಿಸಲು ಅವರೇ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ಸೊಸೆ ಭವಾನಿ ರೇವಣ್ಣ ಹೇಳುತ್ತಿದ್ದಾರೆ. ಈ ಬಗ್ಗೆ ದೇವೇಗೌಡರೇ ಸ್ಪಷ್ಟ ಪಡಿಸಬೇಕಿದೆ.