ನಿರೂಪಕನಾಗಿಯೂ ‘ಪ್ರಕಾಶಿಸಿದ’ ಕಲಾವಿದ…

Date:

ಸುದ್ದಿವಾಹಿನಿಯಿಂದ ಸಿನಿಮಾ ಲೋಕಕ್ಕೆ ಪಾದಾರ್ಪಣೆ ಮಾಡಿರೋ ಅನೇಕರು ನಮ್ಮ ನಡುವೆ ಇದ್ದಾರೆ. ಆದರೆ, ಇಲ್ಲೊಬ್ಬರು ಕಲಾವಿದರಾಗಿ ವೃತ್ತಿ ಬದುಕು ಕಟ್ಟಿಕೊಂಡು ಸಾಕಷ್ಟು ವರ್ಷಗಳ ಬಳಿಕ ನ್ಯೂಸ್ ರೀಡರ್ ಆಗಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಕಲಾವಿದರಾಗಿ ರಂಜಿಸಿದ ಇವರು ನಿರೂಪಕರಾಗಿಯು ಪ್ರಕಾಶಿಸಿದ ವ್ಯಕ್ತಿ ಪ್ರಕಾಶ್ ಕುಮಾರ್ ಸಿ.ಎನ್.

ಉದಯ ನ್ಯೂಸ್ ನೋಡುತ್ತಿದ್ದವರಿಗೆ, ಧಾರವಾಹಿ ಅಭಿಮಾನಿಗಳಿಗೆ ಪ್ರಕಾಶ್ ಅವರು ಗೊತ್ತಿರುತ್ತಾರೆ. ಮಹಿಳೆಯರೇ ಹೆಚ್ಚಾಗಿ ಧಾರವಾಹಿ ನೋಡುವುದರಿಂದ ಇವರಿಗೆ ಮಹಿಳಾ ಅಭಿಮಾನಿಗಳೇ ಹೆಚ್ಚಿದ್ದಾರೆ ಎಂದರೆ ತಪ್ಪಾಗಲಾರದು ಅನಿಸುತ್ತೆ.
ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಚಿಕ್ ಮಸ್ಕಲ್ ಪ್ರಕಾಶ್ ಅವರ ಹುಟ್ಟೂರು. ನರಸಿಂಹಯ್ಯ ಮತ್ತು ಲಕ್ಷ್ಮಮ್ಮ ಎಂಬ ರೈತ ದಂಪತಿಯ 6 ಜನ ಮಕ್ಕಳಲ್ಲಿ ಕೊನೆಯವರು ಇವರು. ಪತ್ನಿ ಪದ್ಮಾವತಿ, ಮಗ ಮನ್ವಂತ್.


ತಂದೆ ಅನೇಕ ನಾಟಕಗಳಿಗೆ ಬಣ್ಣ ಹಚ್ಚಿದ್ದರಂತೆ. ಬಳಿಕ ಹಿರಿಯಣ್ಣ ಕೂಡ ಹತ್ತಾರು ನಾಟಕಗಳಲ್ಲಿ ಅಭಿನಯಿಸಿದ್ದರಂತೆ. ಪ್ರಕಾಶ್ ಅವರಿಗೆ ಬಾಲ್ಯದಲ್ಲಿ ನಾಟಕದ ಬಗ್ಗೆ ಅಷ್ಟೊಂದು ಆಸಕ್ತಿ ಇರಲಿಲ್ಲ. ಪಿಯುಸಿ ವೇಳೆಯಲ್ಲಿ ನಾಟಕದ ಗೀಳು ಹಿಡಿಯಿತ್ತಂತೆ. ಇದ್ದಕ್ಕಿದ್ದಂತೆ ಹತ್ತಿರವಾದ ನಾಟಕ ಕಲೆ ಬಿಟ್ಟಿರಲಾರದಷ್ಟು ಹಚ್ಚಿಕೊಂಡು ಜೀವನದುದ್ದಕ್ಕು ಬಂದಿದೆ.


1ನೇ ತರಗತಿಯಿಂದ ಎಸ್‍ಎಸ್‍ಎಲ್‍ಸಿಯವರೆಗೆ ತಿಪ್ಪಗೊಂಡನಹಳ್ಳಿಯ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಪ್ರಕಾಶ್ ಮುಂದಿನ ವ್ಯಾಸಂಗ, ವೃತ್ತಿ ಬದುಕು ಕಟ್ಟಿಕೊಂಡಿದ್ದೆಲ್ಲಾ ರಾಜ್ಯ ರಾಜಧಾನಿ ಬೆಂಗಳೂರಲ್ಲೇ. ಎಸ್‍ಎಲ್‍ಎನ್ ಕಾಲೇಜಿನಲ್ಲಿ ಪಿಯುಸಿ, ಎಪಿಎಸ್ ಕಾಲೇಜಿನಲ್ಲಿ ಬಿಕಾಂ ಪದವಿ ಪಡೆದ ಇವರು ಎಸ್.ಮೂರ್ತಿ ಅವರ ‘ಅಭಿನಯ ತರಂಗ’ದಲ್ಲಿ ನಟನಾ ತರಬೇತಿ ಪಡೆದರು.


ಕಲಾವಿದನಾಗಿ ಬೆಳೆಯಬೇಕು ಎಂಬ ಕನಸಿನೊಂದಿಗೆ ತನ್ನನ್ನು ತಾನೂ ಸಂಪೂರ್ಣ ರಂಗಭೂಮಿಯಲ್ಲಿ ತೊಡಗಿಸಿಕೊಂಡರು. ದುಡಿಮೆಯ ಅನಿವಾರ್ಯತೆಯಿಂದ ಪದವಿ ಮುಗಿದ ಮೇಲೆ ಖಾಸಗಿ ಕಂಪನಿಯೊಂದರಲ್ಲಿ ಅಕೌಂಟೆಂಟ್ ಆಗಿ ಕೆಲಸಕ್ಕೆ ಸೇರಿದ್ರು. ಕೆಲಸದ ನಡುವೆ ನಾಟಕಕ್ಕೂ ಆದ್ಯತೆ ನೀಡಿದ್ರು. ನಾನಾ ತಂಡಗಳ ಜೊತೆ ನಾಟಕಗಳಲ್ಲಿ ವಿಭಿನ್ನ ಪಾತ್ರಗಳನ್ನು ಮಾಡುತ್ತಾ ಒಲಿದು ಬಂದ ಕಲೆ, ದುಡಿಮೆ ಕೊಟ್ಟ ಕೆಲಸ ಎರಡನ್ನೂ ಸರಿದೂಗಿಸಿಕೊಂಡು ಜೀವನ ಬಂಡಿ ನಡೆಸುತ್ತಿದ್ದರು.


ಹೀಗಿರುವಾಗ ಒಂದು ದಿನ ಗೆಳೆಯ ಎಂ.ಸಿ ವೆಂಕಟೇಶ್ ಅವರು ಉದಯ ಟಿವಿಗೆ ನ್ಯೂಸ್ ರೀಡರ್ ಬೇಕಂತೆ. ನೀನು ಚೆನ್ನಾಗಿ ಮಾತಾಡ್ತೀಯ. ಭಾಷೆಯಲ್ಲಿ ಹಿಡಿತವಿದೆ. ಟ್ರೈಮಾಡು. ಆಗಿದ್ದಾಗಲಿ ಎಂದು ಹೇಳಿ ಪ್ರಕಾಶ್ ಅವರನ್ನು ಇಂಟರ್ ವ್ಯೂಗೆ ಕಳುಹಿಸಿಕೊಟ್ಟರು. ನೆಚ್ಚಿನ ಗೆಳೆಯನ ಮಾತುಕೇಳಿ ಹೋಗಿದ್ದ ಪ್ರಕಾಶ್ ಅವರು ಇಂಟರ್ ವ್ಯೂ ನಲ್ಲಿ ಪಾಸ್ ಆದ್ರು. ಹಿಂದೆ ಕೆಲಸ ಮಾಡುತ್ತಿದ್ದ ಕಂಪನಿಗೆ ರಾಜೀನಾಮೆ ನೀಡಿ ಉದಯ ನ್ಯೂಸ್ ಗೆ ಜಾಯಿನ್ ಆದ್ರು. ಸುದ್ದಿವಾಹಿನಿಗೆ ಬಂದ ಮೇಲೆ ಹಿಂದಿನಷ್ಟು ನಾಟಕ, ಧಾರವಾಹಿಗಳಲ್ಲಿ ನಟಿಸಲು ಸಾಧ್ಯವಾಗದೇ ಇದ್ದರೂ ತಕ್ಕಮಟ್ಟಿಗೆ ನಿಭಾಯಿಸಿದರು.


ಇವರಿಗೆ ನಿರೂಪಣೆ ಹಾಗೂ ನಟನೆ ಎರಡರಲ್ಲೂ ಆಸಕ್ತಿ. ಇವರೆಡೂ ಇವರ ಎರಡು ಕಣ್ಣುಗಳಿದ್ದಂತೆ. ಎಪಿಎಸ್ ಕಾಲೇಜಿನಲ್ಲಿ ಕಾರ್ಯಕ್ರಮ ಒಂದರಲ್ಲಿ ನಿರೂಪಣೆ ಮಾಡಿದ್ದರು. ಇವರ ನಿರೂಪಣೆಗೆ ಉಪನ್ಯಾಸಕರು ಮೆಚ್ಚುಗೆ ವ್ಯಕ್ತಪಡಿಸಿ, ನಂತರದ ದಿನಗಳಲ್ಲಿ ಯಾವುದೇ ಕಾರ್ಯಕ್ರಮವಿರಲಿ ನೀನೇ ನಿರೂಪಣೆ ಮಾಡಬೇಕು ಎಂದು ಉಪನ್ಯಾಸಕರು ಪ್ರಕಾಶ್ ಅವರಿಗೆ ಹೇಳುತ್ತಿದ್ದರು. ಅಂತರಕಾಲೇಜು ‘ನ್ಯೂಸ್ ಆ್ಯಂಕರಿಂಗ್ ಕಾಂಪಿಟೇಶನ್’ಗೆ ಎಪಿಎಸ್ ಕಾಲೇಜನ್ನು ಪ್ರತಿನಿಧಿಸಿ ದ್ವಿತಿಯ ಬಹುಮಾನ ಪಡೆದ ಪ್ರಕಾಶ್ ಆ ಬಳಿಕ ನಿರೂಪಕನಾಗೋ ಕನಸು ಮೊಳಕೆಯೊಡೆಯಿತು. ಆದರೆ, ಮೊದಲ ಆದ್ಯತೆ ನಟನೆ ಆಗಿದ್ದರಿಂದ ನ್ಯೂಸ್ ರೀಡರ್/ನಿರೂಪಕನಾಗೋ ನಿಟ್ಟಿನಲ್ಲಿ ಪ್ರಯತ್ನ ಮಾಡಿರಲಿಲ್ಲ. ನಂತರ ಉದಯದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದ ಮೇಲೆ ನಟನೆ ಹಾಗೂ ನಿರೂಪಣೆ ಎಂಬ ಎರಡೂ ಕನಸುಗಳು ನನಸಾದಂತಾಯಿತು.


ಉದಯ ಟಿವಿಯಲ್ಲಿ ‘ಕಾನೂನಿನ ಕಣ್ಣು’ ಇವರು ನಡೆಸಿಕೊಡುತ್ತಿದ್ದ ಜನಪ್ರಿಯ ಕಾರ್ಯಕ್ರಮ. ಜೊತೆಗೆ ‘ನ್ಯೂಸ್ @ 8’ ಅಲ್ಲದೆ ವಿಶೇಷ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದರು. ಡಾ. ರಾಜ್‍ಕುಮಾರ್ ಅವರು ವಿಧಿವಶರಾದ ಸುದ್ದಿಯನ್ನು ತುಂಬಾ ದುಃಖದಿಂದ ಓದಿದ್ದರು. ಒಬ್ಬ ನ್ಯೂಸ್ ರೀಡರ್ ಎಂಥಾ ಸಂದರ್ಭದಲ್ಲೂ, ಎಲ್ಲಾ ದುಃಖಕರ ಗಳಿಗೆಯಲ್ಲೂ, ಯಾವುದೇ ಸಾವಿನ ಸುದ್ದಿಯನ್ನು ಓದುವಾಗ ವಿಚಲಿತನಾಗಲ್ಲ, ಅವನಲ್ಲಿ ಭಾವನಾತ್ಮಕವಾಗಿ ಸೋಲಲ್ಲ. ಆದ್ರೆ, ಅಣ್ಣವರ ವಿಷಯದಲ್ಲಿ ಅದು ಯಾರಿಗೂ ಸಾಧ್ಯವಿಲ್ಲ. ಹಾಗಾಗಿ ಡಾ. ರಾಜ್ ಅವರು ನಮ್ಮನ್ನು ಅಗಲಿದ ಸುದ್ದಿನ್ನು, ನಂತರದ ಕಾರ್ಯಕ್ರಮಗಳನ್ನು ನಡೆಸಿಕೊಡುವಾಗ ತುಂಬಾ ಕಷ್ಟಪಟ್ಟಿದ್ದರಂತೆ ಪ್ರಕಾಶ್.


ಸುಮಾರು 5 ಕಿಮೀ (ಅಪ್ ಅಂಡ್ ಡೌನ್ 10 ಕಿಮೀ) ದೂರ ನಡೆದುಕೊಂಡೇ ಶಾಲೆಗೆ ಹೋಗಿ ಬರುತ್ತಿದ್ದ ಪ್ರಕಾಶ್ ತುಂಬಾ ಕಷ್ಟದಲ್ಲಿ ಬೆಳೆದವರು. ಬೆಳಗ್ಗೆ 8 ಗಂಟೆಗೆ ತಿಂಡಿ ತಿಂದು ಮನೆಯಿಂದ ಹೊರಟರೆ ಮಧ್ಯಾಹ್ನ ಊಟವಿಲ್ಲ. ಸಂಜೆ 6.30-7 ಗಂಟೆಗೇ ಹೊಟ್ಟೆಪೂಜೆ. ಇವರೊಬ್ಬ ಸಂಘಜೀವಿ, ಭಾವನಾತ್ಮಕ ಸಹೃದಯಿ. ಬಾಲ್ಯದ ದಿನಗಳಲ್ಲಿ ಕಷ್ಟಗಳಿದ್ದರೂ ಅದೇ ಸುಖ…! ಇಂದು ಎಲ್ಲವೂ ಇದೆ, ಆದರೆ ಏನೂ ಇಲ್ಲ…! ಎನ್ನುವ ಇವರಿಗೆ ಅಮ್ಮನ ಅಗಲುವಿಕೆ ನೋವು ಮತ್ತೆ ಮತ್ತೆ ಕಾಡುತ್ತಿರುತ್ತೆ.
ಆರು ಜನ ಸಹೋದರರಲ್ಲಿ ಎಲ್ಲರೂ ಅವರವರ ಉದ್ಯೋಗವನ್ನರಸಿ ಊರು ಬಿಟ್ಟಮೇಲೆ ಅಣ್ಣ ಮನೆಯನ್ನು, ಜಮೀನನ್ನು ನೋಡಿಕೊಂಡಿದ್ದರು. ಆಗಾಗ ಎಲ್ಲರೂ ಊರಿಗೆ ಹೋಗಿ ಬರ್ತಿದ್ರು. ಅಣ್ಣ ಎಂದರೆ ಪ್ರಕಾಶ್ ಅವರಿಗೆ ಜೀವ. ಆದರೆ, ವಿಧಿ ಆಟದ ಮುಂದೆ ಏನಿದೆ ಹೇಳಿ…? ಇದ್ದಕ್ಕಿದ್ದಂತೆ ಅಣ್ಣ ತೀರಿಕೊಂಡರು. ಈ ನೋವು ಪ್ರಕಾಶ್ ಅವರಿಗೆ ಅಮ್ಮನ ಸಾವಿಗಿಂತಲೂ ಭೀಕರವಾಗಿ ಕಾಡುತ್ತದೆಯಂತೆ. ಅಣ್ಣನ ಮರಣ ನಂತರ ಊರಿನ ಸಂಪರ್ಕವೇ ಒಂದು ರೀತಿಯಲ್ಲಿ ಕಡಿದು ಹೋಯಿತು ಎನ್ನುತ್ತಾ ಭಾವುಕರಾಗುತ್ತಾರೆ.

ನಿರೂಪಣೆ ಹಾಗೂ ನಟನೆ ಎರಡರ ಅನುಭವವೂ ಇರುವ ಪ್ರಕಾಶ್, ಮಾಧ್ಯಮ ಹಾಗೂ ಸಿನಿಮಾ/ಧಾರವಾಹಿ ಕ್ಷೇತ್ರಕ್ಕೆ ಬರುವವರು ಯಾರದ್ದೋ ಪ್ರಭಾವದಿಂದ ಬಂದು ಗಟ್ಟಿಯಾಗಿ ನೆಲೆನಿಲ್ಲಲು ಸಾಧ್ಯವಿಲ್ಲ. ಈ ಎರಡು ಕ್ಷೇತ್ರದಲ್ಲಿ ಇನ್‍ಫ್ಲಿಯನ್ಸ್ ಉಪಯೋಗಕ್ಕೆ ಬರಲ್ಲ. ನಿಮ್ಮ ತಾಕತ್ತಿನ ಮೇಲೆ ಬೆಳೆಯಬೇಕು. ನಿಮಗೆ ನೀವೇ ಶಕ್ತಿ ಎಂದು ಕಿವಿಮಾತು ಹೇಳುತ್ತಾರೆ.


ಉದಯ ಬಳಗವು ಇವರಿಗೆ ಬೇರೆಕಡೆಗಳಲ್ಲಿ ನಟಿಸಲು ಅವಕಾಶ ಮಾಡಿಕೊಟ್ಟಿತ್ತು. ಹಾಗಾಗಿ ಬೇರೆ ಚಾನಲ್ ಗಳಿಂದ ಅವಕಾಶ ಬಂದರೂ ಪ್ರೀತಿಯಿಂದ ಸಲಹುತ್ತಿದ್ದ ಉದಯದಲ್ಲೇ ಇರಲು ಇಚ್ಛಿಸಿದ್ದರು ಪ್ರಕಾಶ್.
2000ನೇ ಇಸವಿಯಿಂದ 2017ನೇ ಇಸವಿಯವರೆಗೆ ಸತತ 17 ವರ್ಷಗಳ ಕಾಲ ಉದಯ ನ್ಯೂಸ್ ನಲ್ಲಿಯೇ ಇದ್ದರು. ಇತ್ತೀಚೆಗೆ ಉದಯ ನ್ಯೂಸ್ ಮುಚ್ಚಿದೆ. ಆದರೆ, ಬೇರೆ ಚಾನಲ್ ಗಳಿಗೆ ಹೋಗಲು ಸದ್ಯಕ್ಕೆ ಯೋಚಿಸಿಲ್ಲ. ಸಿನಿಮಾ ಹಾಗೂ ಧಾರವಾಹಿಗಳಲ್ಲಿ ಬ್ಯುಸಿಯಾಗಿದ್ದಾರೆ. ಇಲ್ಲಿಯವರೆಗೆ ಸುಮಾರು 75 ಧಾರವಾಹಿಗಳಲ್ಲಿ, ಸುಮಾರು 15 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಉದಯದಲ್ಲಿ ಪ್ರಸಾರವಾಗುತ್ತಿದ್ದ ‘ಮಹಾಭಾರತ’, ‘ರಂಗೋಲಿ’ ಧಾರವಾಹಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಇದು ನಿಮಗೆ ನೆನಪಿರಬಹುದು. ಇತ್ತೀಚೆಗೆ ಇವರು ನಟಿಸಿರುವ ‘ಐರಾವತ’ ‘ಮಿ.ಪರ್ಫೆಕ್ಟ್’, ‘ಉಪ್ಪು ಹುಳಿ ಖಾರ’ ಸಿನಿಮಾಗಳು ತೆರೆಕಂಡಿವೆ. ಕಲರ್ಸ್ ಕನ್ನಡದ ‘ಪುಟ್ಟ ಗೌರಿ ಮದುವೆ’, ಸ್ಟಾರ್ ಸುವರ್ಣದ ‘ಪುಟ್ಮಲ್ಲಿ’, ಉದಯದ ‘ಸರಯು’ ಧಾರವಾಹಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

-ಶಶಿಧರ್ ಎಸ್ ದೋಣಿಹಕ್ಲು

ಓದುಗರ ಗಮನಕ್ಕೆ :ಮಾರ್ಚ್-ಏಪ್ರಿಲ್‍ನಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ‘ಫೇವರೇಟ್ ಆ್ಯಂಕರ್’ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ. ಕಳೆದ ವರ್ಷ ನೀವು ನಿಮ್ಮ ನೆಚ್ಚಿನ ನಿರೂಪಕರಿಗೆ ವೋಟ್ ಹಾಕಿದ್ದೀರಿ. ಈ ವರ್ಷವೂ ನಿಮ್ಮ ನೆಚ್ಚಿನ ನಿರೂಪಕರನ್ನು ಆಯ್ಕೆ ಮಾಡುವ ಜವಬ್ದಾರಿಯೂ ನಿಮ್ಮದೇ…! ಇದಕ್ಕೆ ಪೂರಕವಾಗಿ ನಾವೀಗ ‘ಈ ದಿನದ ನಿರೂಪಕ’ ಎಂದು 10 ನವೆಂಬರ್ 2017ರಿಂದ ದಿನಕ್ಕೊಬ್ಬರಂತೆ ಕನ್ನಡದ ನಿರೂಪಕರ ಕಿರುಪರಿಚಯವನ್ನುಮಾಡಿಕೊಡುತ್ತಿದ್ದೇವೆ.

1) 10 ನವೆಂಬರ್ 2017 : ಈಶ್ವರ್ ದೈತೋಟ

2)11 ನವೆಂಬರ್ 2017 : ಭಾವನ

3)12  ನವೆಂಬರ್ 2017 : ಜಯಶ್ರೀ ಶೇಖರ್

4)13 ನವೆಂಬರ್ 2017 : ಶೇಷಕೃಷ್ಣ

5)14 ನವೆಂಬರ್ 2017 : ಶ್ರೀಧರ್ ಶರ್ಮಾ

6)15 ನವೆಂಬರ್ 2017 : ಶ್ವೇತಾ ಜಗದೀಶ್ ಮಠಪತಿ

7)16 ನವೆಂಬರ್ 2017 : ಅರವಿಂದ ಸೇತುರಾವ್

8)17 ನವೆಂಬರ್ 2017 : ಲಿಖಿತಶ್ರೀ

9)18 ನವೆಂಬರ್ 2017 : ರಾಘವೇಂದ್ರ ಗಂಗಾವತಿ

10)19 ನವೆಂಬರ್ 2017 : ಅಪರ್ಣಾ

11)20 ನವೆಂಬರ್ 2017 :  ಅಮರ್ ಪ್ರಸಾದ್

12)21 ನವೆಂಬರ್ 2017 :   ಸೌಮ್ಯ ಮಳಲಿ

13)22 ನವೆಂಬರ್ 2017 :  ಅರುಣ್ ಬಡಿಗೇರ್

14)23ನವೆಂಬರ್ 2017 :  ರಾಘವ ಸೂರ್ಯ

15)24ನವೆಂಬರ್ 2017 :  ಶ್ರೀಲಕ್ಷ್ಮಿ

16)25ನವೆಂಬರ್ 2017 :  ಶಿಲ್ಪ ಕಿರಣ್

17)26ನವೆಂಬರ್ 2017 :  ಸಮೀವುಲ್ಲಾ

18)27ನವೆಂಬರ್ 2017 :  ರಮಾಕಾಂತ್ ಆರ್ಯನ್

19)28ನವೆಂಬರ್ 2017 :  ಮಾಲ್ತೇಶ್

20)29/30ನವೆಂಬರ್ 2017 :  ಶ್ವೇತಾ ಆಚಾರ್ಯ  [ನಿನ್ನೆ (29ರಂದು ) ತಾಂತ್ರಿಕ ಸಮಸ್ಯೆಯಿಂದ ‘ಈ ದಿನದ ನಿರೂಪಕರು’- ನಿರೂಪಕರ ಪರಿಚಯ ಲೇಖನ ಪ್ರಕಟಿಸಿರಲಿಲ್ಲ. ಆದ್ದರಿಂದ ಇಂದು ಪ್ರಕಟಿಸಿದ್ದೀವಿ.  ಈ ದಿನದ (30 ನವೆಂಬರ್) ಲೇಖನ ಸಂಜೆ ಪ್ರಕಟಿಸಲಾಗುವುದು.) ]

21)30ನವೆಂಬರ್ 2017 :  ಸುರೇಶ್ ಬಾಬು 

22)01 ಡಿಸೆಂಬರ್ 2017 :  ಮಧು ಕೃಷ್ಣ (ಡಿಸೆಂಬರ್ ೨ ರಂದು ಬೆಳಗ್ಗೆ ಪ್ರಕಟ)

23)02 ಡಿಸೆಂಬರ್ 2017 : ಶಶಿಧರ್ ಭಟ್

24)03 ಡಿಸೆಂಬರ್ 2017 : ಚನ್ನವೀರ ಸಗರನಾಳ್

25)04 ಡಿಸೆಂಬರ್ 2017 : ಗೌರೀಶ್ ಅಕ್ಕಿ

26)05 ಡಿಸೆಂಬರ್ 2017 : ಶ್ರುತಿ ಜೈನ್

27)06ಡಿಸೆಂಬರ್ 2017 : ಅವಿನಾಶ್ ಯುವನ್  

28)07ಡಿಸೆಂಬರ್ 2017 : ಶಿಲ್ಪ ಕೆ.ಎನ್

29)08ಡಿಸೆಂಬರ್ 2017 : ಶಮೀರಾ ಬೆಳುವಾಯಿ

30)09ಡಿಸೆಂಬರ್ 2017 : ಸಂದೀಪ್ ಕುಮಾರ್

31)10ಡಿಸೆಂಬರ್ 2017 : ಪ್ರತಿಮಾ ಭಟ್

32)11ಡಿಸೆಂಬರ್ 2017 :  ಹರೀಶ್ ಪುತ್ರನ್

33)12ಡಿಸೆಂಬರ್ 2017 : ನಿಶಾ ಶೆಟ್ಟಿ

34)13ಡಿಸೆಂಬರ್ 2017 : ಪೂರ್ಣಿಮ ಎನ್.ಡಿ

35)14ಡಿಸೆಂಬರ್ 2017 :  ಹಬೀಬ್ ದಂಡಿ

36)15ಡಿಸೆಂಬರ್ 2017 :  ಪ್ರಕಾಶ್ ಕುಮಾರ್ ಸಿ.ಎನ್

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...