ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಆರೋಪದ ಮೇರೆಗೆ ಎಫ್ ಐ ಆರ್ ದಾಖಲಾಗಿದೆ.
ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ನಲ್ಲಿ ಭಾರತೀಯ ಗುರುರಾಜ್ ಪೂಜಾರಿಯವರು ವೇಟ್ ಲಿಫ್ಟಿಂಗ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತಾಡಿದ ಮಧ್ವರಾಜ್ ‘ಗುರುರಾಜ್ ಗೆ ಕ್ರೀಡಾ ಇಲಾಖೆ 25ಲಕ್ಷ ರೂ ನಗದು ಹಾಗೂ ಸರ್ಕಾರಿ ನೌಕರಿಯನ್ನು ನೀಡಲಾಗುವುದು ಎಂದಿದ್ದರು. ಕಾಮನ್ ವೆಲ್ತ್ ಗೆ ಹೋಗುವ ಮುನ್ನವೇ ಕ್ರೀಡಾ ನೀತಿಯಲ್ಲಿ ಇದರ ಉಲ್ಲೇಖವಿದೆ. ಇದು ಹೊಸ ಘೋಷಣೆಯಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದರು.
ಕ್ರೀಡಾನೀತಿಯ ಬಗ್ಗೆ ನೋಟಿಫಿಕೇಶನ್ ಆಗಿಲ್ಲ. ಹೀಗಾಗಿ ಮತದಾನ ಸಂದರ್ಭದಲ್ಲಿ ಇಂತಹ ಹೇಳಿಕೆಗಳಿಂದ ಮತದಾರರನ್ನು ಓಲೈಸಿದಂತಾಗುತ್ತದೆ, ಆಮಿಷ ಒಡ್ಡಿದಂತೆ ಎಂದು ಚುನಾವಣಾಧಿಕಾರಿಗಳು ಉಡುಪಿ ನಗರ ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸಿದ್ದರು.