ಕನ್ನಡ ಬಿಗ್ ಬಾಸ್ ಸೀಸನ್ 5 ರ ವಿನ್ನರ್ ಒಳ್ಳೆಯ ಹುಡುಗ ಪ್ರಥಮ್ ಸ್ಯಾಂಡಲ್ ವುಡ್ ಗೆ ವಿದಾಯ ಹೇಳ್ತಿದ್ದಾರೆ. ಈಗಾಗಲೇ ಈ ನ್ಯೂಸ್ ಎಲ್ಲಾ ಕಡೆ ವೈರಲ್ ಆಗ್ತಿದೆ.
ಪ್ರಥಮ್ ಅಭಿನಯದ ‘ಎಂಎಲ್ ಎ’ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ನಟಭಯಂಕರ ಮೂವಿ ಶೂಟಿಂಗ್ ನಡೆಯುತ್ತಿದ್ದು ಇದೇ ತನ್ನ ಕೊನೆಯ ಮೂವಿ ಅಂತ ಪ್ರಥಮ್ ಹೇಳಿದ್ದಾರೆ.
ಬೆಂಗಳೂರಿನ ಯಾಂತ್ರಿಕ ಜೀವನ ಪ್ರಥಮ್ ಗೆ ಸಾಕಾಗಿದೆಯಂತೆ. ಅದಕ್ಕೆ ಊರಿಗೆ ಹೋಗಿ ಕೃಷಿ ಮಾಡ್ತಾರಂತೆ. ಕುರಿತಗೊಂಡಿದ್ದಾರಂತೆ . ಕುರಿ ಸಾಕಣೆ ಜೊತೆಗೆ ತೆಂಗು ಬೆಳೆಯುವ ಪ್ಲಾನ್ ಪ್ರಥಮ್ ಅವರದ್ದು .
ಏನಾದ್ರು ಮಾಡ್ಬೇಕು ಅಂತ ಬಂದೆ ಆಗ್ಲಿಲ್ಲ. ಚಿತ್ರರಂಗದ ಇತ್ತೀಚಿನ ಬೆಳವಣಿಗೆಗಳು ಇಷ್ಟ ಆಗ್ತಿಲ್ಲ ಅಂದಿದ್ದಾರೆ. ಇತ್ತೀಚೆಗೆ ಯಾವ್ದೇ ಸಿನಿಮಾ ಮಾಡಿದ್ರೂ 1 ವಾರ ಕೂಡ ನಿಲ್ಲಲ್ಲ. ವಾರಕ್ಕೆ 8 ಸಿನಿಮಾಗಳು ರಿಲೀಸ್ ಆಗುತ್ತಿವೆ. ನಾವು ಇಂಡಸ್ಟ್ರಿಯಲ್ಲಿ ಇದ್ದು ಏನ್ ಮಾಡೋದು ಅಂತ ಊರಿಗೆ ಹೋಗೋದಾಗಿ ಹೇಳಿದ್ದಾರೆ.