ನನಗೆ ರೌಡಿಗಳ ಅವಶ್ಯಕತೆ ಇಲ್ಲ.. ನನ್ನದು ಅಭಿವೃದ್ಧಿ ರಾಜಕಾರಣ ಎಂದು ಬಿಜೆಪಿ ಸಂಸದ ಪ್ರತಾಪ್ ಸಿಂಹ ತಿಳಿಸಿದ್ರು. ಈ ಬಗ್ಗೆ ಮೈಸೂರಿನಲ್ಲಿ ಮಾತ್ನಾಡಿದ ಅವರು, ಅಪ್ಪಣ್ಣ ನೇತೃತ್ವದಲ್ಲಿ H.D.ಕೋಟೆಯ ಕೆಲವರು ಬಿಜೆಪಿಗೆ ಸೇರಿಕೊಂಡರು. ಮೈಸೂರು ಬಿಜೆಪಿ ಕಚೇರಿಯಲ್ಲಿ ಪಕ್ಷಕ್ಕೆ ಬಂದವರನ್ನು ಶಾಲು ಹಾಕಿ ಸ್ವಾಗತ ಮಾಡಿದೆ. ಬೆತ್ತನಗೆರೆ ಶಂಕರ್ ಬಗ್ಗೆ ಗೊತ್ತಿಲ್ಲ, ಪಕ್ಷ ಸೇರ್ಪಡೆ ಸಾವಿರಾರು ಜನ ಬರ್ತಾರೆ.
ಅವರ ಕುಂಡಲಿ, ಜಾತಕ ನೋಡಿ ನಾನು ಪರೀಕ್ಷೆ ಮಾಡಲು ಸಾಧ್ಯವಿಲ್ಲ. ರೌಡಿಗಳನ್ನ ಇಟ್ಟುಕೊಂಡು ರಾಜಕಾರಣ ಮಾಡುವ ಕಾಲ ಹೋಯ್ತು. ಕೊತ್ವಾಲ್, ಜಯರಾಜ್ ಇಟ್ಟುಕೊಂಡು ರಾಜಕಾರಣ ಮಾಡಿದ್ದು ಯಾರು ಅಂತ ಜನರಿಗೆ ಗೊತ್ತು. ನಮಗೆ ರೌಡಿಗಳ ಅವಶ್ಯಕತೆ ಇಲ್ಲ, H.D.ಕೋಟೆ ನನ್ನ ಕ್ಷೇತ್ರಕ್ಕೆ ಬರಲ್ಲ. ಪಾರ್ಟಿ ಹೇಳಿದ ಮೇಲೆ ಬಿಜೆಪಿ ಶಾಲು ಹಾಕಿ ಕರೆದುಕೊಂಡಿದ್ದೇನೆ. ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆಯೇ ನಾನು ಗೆದ್ದು ಬಂದಿದ್ದೇನೆ. ನಾವು ಜಮ್ಮು-ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳ ಬಾಯಿ ಮುಚ್ಚಿಸಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಕಾಲದಲ್ಲಿ ಭಯೋತ್ಪಾದಕರನ್ನೇ ಬಿಟ್ಟಿಲ್ಲ, ನಮ್ಮನ್ನ ಬಿಡುತ್ತಾರಾ ಎಂದು ರೌಡಿಗಳು ಭಯಗೊಂಡಿದ್ದಾರೆ. ರೌಡಿಗಳೇ ಮನಪರಿವರ್ತನೆಯಾಗಿ ಸಮಾಜ ಸೇವೆಗೆ ಬರುತ್ತಿದ್ದು, ಇದನ್ನೇ ದೊಡ್ಡ ವಿಚಾರ ಮಾಡೋದು ಬೇಡ ಎಂದು ಪ್ರತಾಪ್ ಸಿಂಹ ತಿಳಿಸಿದ್ರು.
ನನಗೆ ರೌಡಿಗಳ ಅವಶ್ಯಕತೆ ಇಲ್ಲ…!
Date: