ರಾಜ್ಯಾದ್ಯಂತ ಇಂದಿನಿಂದ ಹಾಲು ಉತ್ಪನ್ನಗಳ ಬೆಲೆ ಏರಿಕೆ

Date:

ಬೆಂಗಳೂರು : ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇಂದಿನಿಂದ ಹಾಲು ಉತ್ಪನ್ನಗಳ ಬೆಲೆ ಏರಿಕೆಯಾಗಲಿದೆ. ಈ ಮೂಲಕ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೇಂದ್ರ ಸರ್ಕಾರದಿಂದ ಮೊಸರು, ಮಜ್ಜಿಗೆ ಮತ್ತು ಲಸ್ಸಿ ಮೇಲೆ ಶೇಕಡಾ 5 ರಷ್ಟು ಜಿಎಸ್ ಟಿ ವಿಧಿಸಿದ ಕಾರಣ ಇಂದಿನಿಂದ ಹೊಸ ದರದಲ್ಲಿ ನಂದಿನಿ ಉತ್ಪನ್ನಗಳ ಮಾರಾಟವಾಗಲಿದೆ. ಇಂದಿನಿಂದ 1 ರಿಂದ 3 ರೂಪಾಯಿ ವರೆಗೆ ಬೆಲೆ ಏರಿಕೆಯಾಗಲಿದೆ.

ಆದ್ರೆ ಹಾಲಿನ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ಮೊಸರು ಲೀಟರ್ ಗೆ 43 ಇದ್ದದ್ದು 46 ರೂ, ಅರ್ಧ ಲೀಟರ್ ಮೊಸರಿಗೆ 22 ಇದ್ದದ್ದು-24 ಕ್ಕೆ, ಮಜ್ಜಿಗೆ 200 ಎಂಎಲ್ ಪ್ಯಾಕೆಟ್ ಬೆಲೆ ಮೇಲೆ 1 ರೂ ಏರಿಕೆ, ಲಸ್ಸಿ ಬೆಲೆಯೂ ಸಹ ಒಂದು ರೂ ಏರಿಕೆ, ಇಂದಿನಿಂದ ಹೊಸ ದರದಲ್ಲಿ ಮೊಸರು, ಮಜ್ಜಗೆ, ಲಸ್ಸಿ ಮಾರಾಟವಾಗಲಿದೆ. ಪ್ಯಾಕೇಟ್ ಮೇಲೆ ಹಳೆಯ ದರವೇ ಇರಲಿದ್ದು, ಗ್ರಾಹಕರು ಹೊಸ ದರವನ್ನ ನೀಡುವಂತೆ ಕೆ ಎಂಎಫ್ ಸೂಚನೆ ನೀಡಿದೆ.

Share post:

Subscribe

spot_imgspot_img

Popular

More like this
Related

ಐದು ರಾಜ್ಯಗಳ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ: ಮೇ 4ಕ್ಕೆ ಫಲಿತಾಂಶ

ಐದು ರಾಜ್ಯಗಳ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ: ಮೇ 4ಕ್ಕೆ ಫಲಿತಾಂಶ ನವದೆಹಲಿ:...

ಖ್ಯಾತ ಉದ್ಯಮಿಯ ಕೈಹಿಡಿಯಲಿದ್ದಾರಂತೆ ನಟಿ ಅನುಷ್ಕಾ ನಟಿ!

Anushka Shetty: ಖ್ಯಾತ ಉದ್ಯಮಿಯ ಕೈಹಿಡಿಯಲಿದ್ದಾರಂತೆ ನಟಿ ಅನುಷ್ಕಾ ನಟಿ! ಸೌತ್ ಇಂಡಿಯಾದ...

ಮಹಿಳೆಯರ ಆರೋಗ್ಯಕ್ಕಾಗಿ ದಿನನಿತ್ಯ ಪಾಲಿಸಬೇಕಾದ 7 ಸರಳ ಅಭ್ಯಾಸಗಳು

ಮಹಿಳೆಯರ ಆರೋಗ್ಯಕ್ಕಾಗಿ ದಿನನಿತ್ಯ ಪಾಲಿಸಬೇಕಾದ 7 ಸರಳ ಅಭ್ಯಾಸಗಳು ಮಹಿಳೆಯರ ಜೀವನ ಕಾರ್ಯಭಾರಗಳಿಂದ...

ಗಾಂಜಾ ಅಮಲಿನಲ್ಲಿ ಆಟೋ ಚಾಲನೆ: ಸರಣಿ ಡಿಕ್ಕಿ, ಚಾಲಕನಿಗೆ ಸಾರ್ವಜನಿಕರ ಧರ್ಮದೇಟು

ಗಾಂಜಾ ಅಮಲಿನಲ್ಲಿ ಆಟೋ ಚಾಲನೆ: ಸರಣಿ ಡಿಕ್ಕಿ, ಚಾಲಕನಿಗೆ ಸಾರ್ವಜನಿಕರ ಧರ್ಮದೇಟು ಹಾಸನ:...