ಬೆಂಗಳೂರು : ಆರ್ ಎಸ್ ಎಸ್ ಯಾಕೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲಿಲ್ಲ.? ಸಂಘದ ಕಚೇರಿಯ ಮೇಲೆ 57 ವರ್ಷ ನಮ್ಮ ರಾಷ್ಟ್ರಧ್ವಜ ಏಕೆ ಹಾರಿಸಲಿಲ್ಲ.? ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಆರ್ ಎಸ್ ಎಸ್ ಯಾಕೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲಿಲ್ಲ? ಯಾಕೆ ಮನುಸ್ಮೃತಿ ಸಂವಿಧಾನ ಆಗಬೇಕಿತ್ತು ಎಂದಿರಿ?
ಈ ವಿಚಾರಗಳನ್ನೂ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ತನ್ನಿ, ಯುವಕರು ಓದಿ ನಂತರ ಯಾರು ನಿಜವಾದ ದೇಶಪ್ರೇಮಿಗಳು ಎಂದು ತೀರ್ಮಾನಿಸಲಿ ಎಂದರು. ಇನ್ನೂ ಈಗ ಪರಿಷ್ಕೃತಗೊಂಡ ಪಠ್ಯ ಬಿಟ್ಟು, ಈ ಹಿಂದಿನ ಪಠ್ಯ ಪುಸ್ತಕವನ್ನೇ ನೀಡಿ. ನಮ್ಮ ಮಕ್ಕಳ ಭವಿಷ್ಯದ ಜೊತೆಗೆ ಚೆಲ್ಲಾಟವಾಡಬೇಡಿ. ಪಠ್ಯ ಪರಿಷ್ಕರಣಾ ಸಮಿತಿ ವಿಸರ್ಜನೆಯನ್ನು ಸ್ವಾಗತಿಸುತ್ತಾ, ಆ ಇಡೀ ಪ್ರಕ್ರಿಯೆಯನ್ನೇ ಕೈಬಿಡಿ ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.