ಇದು ಮಹಿಳೆಯೊಬ್ಬಳ ಕರುಣಾ ಜನಕ ಕಥೆ…! ಕಾಮುಕರಿಂದ ನಿತ್ಯ ನರಕ ಯಾತನೆ ಅನುಭವಿಸಿದ ಹೃದಯವಿದ್ರಾವಕ ಸ್ಟೋರಿ ಇದು..!
ಈಕೆ ರೋಮೇನಿಯಾದ ಮಹಿಳೆ. ಅದು 2011 ಲಂಡನ್ ನಲ್ಲಿ ತನ್ನ ಮನೆಯ ಎದುರು ಸಂಗೀತ ಕೇಳುತ್ತಾ ನಿಂತಿದ್ದರು. ಈ ವೇಳೆ ವ್ಯಕ್ತಿಯೊಬ್ಬ ಬಂದು ಕಿಡ್ನಾಪ್ ಮಾಡಿದ…! ಇಬ್ಬರು ಯುವಕರು ಮತ್ತು ಮಹಿಳೆಯನ್ನು ಒಳಗೊಂಡ ಗ್ಯಾಂಗ್ ವೊಂದು ಬಲವಂತವಾಗಿ ಈಕೆಯನ್ನು ಐರ್ಲೆಂಡ್ ಏರ್ವೇಸ್ ವಿಮಾನಕ್ಕೆ ಹತ್ತಿಸಿತು…! ಪಾಸ್ ಪೋರ್ಟ್ ಕಸಿದುಕೊಂಡರು…! ಆಗಲೇ ತನನ್ನು ವೈಶ್ಯಾವಾಟಿಕೆಗೆ ತಳ್ತಾ ಇದ್ದಾರೆ, ಅಂಗಾಂಗಗಳನ್ನು ಮಾರಾಟ ಮಾಡ್ತಾರೆ ಎಂಬುದು ಗಮನಕ್ಕೆ ಬಂದಿತ್ತಾದರೂ ಅಸಹಾಯಕಳಾಗಿ ಕಣ್ಣೀರು ಹಾಕುತ್ತಾ ಸುಮ್ಮನಿರುವುದು ಬಿಟ್ಟರೆ ಏನೂ ಪ್ರಯೋಜನವಿರಲಿಲ್ಲ.
ಮೊದಲು 9 ತಿಂಗಳುಗಳ ಕಾಲ ಅಪಾರ್ಟ್ ಮೆಂಟ್ ವೊಂದರಲ್ಲಿಟ್ಟು ಹಿಂಸೆ ಕೊಟ್ಟಿದ್ದಾರಂತೆ…! ನಂತರ ಕೆಂಪು ಬಟ್ಟೆ ಹಾಕಿಸು, ಗೋಡೆ ಮೇಲೆ ನಿಲ್ಲಿಸಿ, ತಮಗಿಷ್ಟ ಬಂದಂತೆ ಫೋಟೋ ತೆಗೆದುಕೊಂಡು ಆನ್ ಲೈನ್ ನಲ್ಲಿ ಜಾಹಿರಾತು ರೀತಿ ಅಪ್ಲೋಡ್ ಮಾಡಿದ್ದಾರಂತೆ…! ಇದಕ್ಕೆ ಲೆಕ್ಕವಿಲ್ಲದಷ್ಟು ಮಂದಿ ಪ್ರತಿಕ್ರಿಯೆ ಸಹ ನೀಡಿದ್ದಾರಂತೆ..!
ಊಟ ಸರಿಯಾಗಿ ಕೊಡದೇ, ನಿದ್ರೆ ಮಾಡಲು ಸಹ ಬಿಡದೆ ಹಿಂಸಿಸಿದ್ದಾರಂತೆ..! ಕೆಲವೊಮ್ಮೆ ದಿನಕ್ಕೆ 20 ಮಂದಿ ಜೊತೆ ಸೆಕ್ಸ್ ಮಾಡ್ಬೇಕಿತ್ತಂತೆ..!
ಇದನ್ನು ಸ್ವತಃ ಆ ಸಂತ್ರಸ್ತ ಮಹಿಳೆಯೇ ಹೇಳಿಕೊಂಡಿದ್ದಾರೆ.
ಜೊತೆಗೆ ಪೊಲೀಸರು ರೇಡ್ ಮಾಡಿದಾಗ ನನ್ನ ರಕ್ಷಿಸಿದರು. ಆದರೆ, ಸತ್ಯ ಹೇಳಲು ಅವಕಾಶ ಸಿಗಲಿಲ್ಲ. ಇತರರ ಜೊತೆ ನ್ಯಾಯಾಲಯಕ್ಕೆ ಕರೆದುಕೊಂಡು ಹೋದ್ರು. ಅಲ್ಲಿ ಎಲ್ಲರಿಗೂ ಶಿಕ್ಷೆ ವಿಧಿಸಲಾಯಿತು. ಬಳಿಕ ನಾನು ಪೊಲೀಸರಿಗೆ ಮಾಹಿತಿ ನೀಡಿದೆ. ನಂತರ ಎರಡು ವರ್ಷ ತನಿಖೆ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದರೂ ಅವರಿಗೆ ಕಠಿಣ ಶಿಕ್ಷೆ ನೀಡಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ.