ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆಯನ್ನು ಒಂದೇ ಭಾಷೆಯಲ್ಲಿ ಮುದ್ರಿಸಲು ಪಿಯು ಬೋರ್ಡ್ ಆದೇಶಿಸಿದೆ. ಪೇಪರ್ ಉಳಿಸುವ ಹಾಗೂ ಸೋರಿಕೆ ತಪ್ಪಿಸೋ ಉದ್ದೇಶದಿಂದ ಈ ತೀರ್ಮಾನ ತೆಗೆದುಕೊಳ್ಳಲು ಉದ್ದೇಶಿಸಲಾಗಿದೆ ಎಂದು ಹೇಳಲಾಗಿದೆ.
ಇಲ್ಲಿಯವರೆಗೆ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಯಲ್ಲೂ ಪ್ರಶ್ನೆ ಪತ್ರಿಕೆಗಳನ್ನು ಮುದ್ರಿಸಲಾಗ್ತಾ ಇತ್ತು. ಈ ವರ್ಷದಿಂದ ಒಂದೇ ಭಾಷೆಯಲ್ಲಿ ಮುದ್ರಣವಾಗುತ್ತವೆ. ಇದರಿಂದ ಪೇಪರ್ ಉಳಿಸುವುದರ ಜೊತೆಗೆ ಅಕ್ರಮ ತಡೆಗಟ್ಟಬಹುದು ಎಂಬುದು ಇಲಾಖೆಯ ಯೋಚನೆಯಾಗಿದೆ.
ಇದರಿಂದ ಯಾವುದೇ ರೀತಿಯ ಗೊಂದಲಗಳಾಗೋದಿಲ್ಲ. ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗದಂತೆ ಪ್ರಶ್ನೆ ಪತ್ರಿಕೆಗಳನ್ನು ಮುದ್ರಿಸ್ತೀವಿ ಎಂದು ಹೇಳುತ್ತಾರೆ ಪಿಯು ಬೋರ್ಡ್‍ನ ನಿರ್ದೇಶಕಿ ಶಿಖಾ.